ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬ್ಲೂಟೂತ್ ಚಪ್ಪಲ್ ಬಳಸಿ ಪರೀಕ್ಷೆಯಲ್ಲಿ ವಂಚನೆ ಯತ್ನ: ವಂಚಕರ ಜಾಲ ಭೇದಿಸಿದ ರಾಜಸ್ಥಾನ ಪೊಲೀಸರು

ಇದೇ ಪರೀಕ್ಷೆ 5 ಬಾರಿ ಮುಂದೂಡಲ್ಪಟ್ಟಿತ್ತು. ಈ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದನ್ನು ತಡೆಯುವುದೇ ಪೊಲೀಸರಿಗೆ ಬಹುದೊಡ್ಡ ತಲೆನೋವಾಗಿತ್ತು. ಈ ಹಿಂದೆ ಹಲವು ಬಾರಿ ಈ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು.

ಭದ್ರತಾ ದೃಷ್ಟಿಯಿಂದ ಅಭ್ಯರ್ಥಿಯ ಶರ್ಟ್ ಸ್ಲೀವ್ಸ್ ಕಟ್ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ
Harshavardhan M
Updated On : 27 Sept 2021, 11:48 am

ಜೈಪುರ: ರಾಜಸ್ಥಾನದಲ್ಲಿ ಹೈಪ್ರೊಫೈಲ್ ಪ್ರವೇಶ ಪರೀಕ್ಷೆ ಎಂದೇ ಹೆಸರಾಗಿರುವ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ (Rajasthan Eligibility Exam for Teachers) ಭಾನುವಾರ ಯಶಸ್ವಿಯಾಗಿ ನೆರವೇರಿದೆ. 

ಇದನ್ನೂ ಓದಿ: ಆನ್ ಲೈನ್ ನಲ್ಲಿ 1 ಲಕ್ಷ ರೂ. ಹೈ ಎಂಡ್ ಲ್ಯಾಪ್ ಟಾಪ್ ಆರ್ಡರ್ ಮಾಡಿದವಳಿಗೆ ಸಿಕ್ಕಿದ್ದು ಖಾಲಿ ಡಬ್ಬ

ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದರೂ ಬಹುತೇಕ ಕಡೆ ಶಾಂತಿಯುತವಾಗಿ ನಡೆದಿದೆ. ರಾಜ್ಯದ 3,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಭದ್ರತೆ ಒದಗಿಸಲು 70,000 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

Advertisement

Advertisement

ಪರೀಕ್ಷೆಯ ಸಂದರ್ಭ ಅಕ್ರಮ ಎಸಗಲು ಯತ್ನಿಸಿದ ಐವರು ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ಕಾಪಿ ಹೊಡೆಯಲು ವಿನೂತನ ಮಾರ್ಗವನ್ನು ಅನುಸರಿಸಿದ್ದರು. ಅವರೆಲ್ಲರೂ ಸೋಲ್ ಒಳಗೆ ಬ್ಲೂಟೂತ್ ಉಪಕರಣವನ್ನು ಅಳವಡಿಸಿದ ಚಪ್ಪಲಿಗಳನ್ನು ಧರಿಸಿ ಬಂದಿದ್ದರು. 

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ತಾಣದಲ್ಲಿ ಸಿಕ್ಕ ಹುಡುಗನಿಗಾಗಿ 12 ಲಕ್ಷ ರೂ. ಲೋನ್ ಮಾಡಿ ಮೋಸ ಹೋದ ಯುವತಿ

ಈ ಸಂದರ್ಭ ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಇದರ ಹಿಂದೆ ಜಾಲವೊಂದು ಸಕ್ರಿಯವಾಗಿರುವ ಅನುಮಾನ ವ್ಯಕ್ತವಾಗಿತ್ತು. ಈ ಜಾಲದ ಸದಸ್ಯರು ಬ್ಲೂಟೂತ್ ಚಪ್ಪಲಿಗಳನ್ನು ಅಭಿವೃದ್ಧಿಪಡಿಸಿ ಶಿಕ್ಷಕರ ಪ್ರವೇಶ ಪರೀಕ್ಷೆ ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ಬ್ಲೂಟೂತ್ ಚಪ್ಪಲಿಗೆ 6 ಲಕ್ಷ ರೂ. ವಸೂಲಿ ಮಾಡುತ್ತಿದ್ದರು.

ಈ ಹಿಂದೆ ಇದೇ ಪರೀಕ್ಷೆ 5 ಬಾರಿ ಮುಂದೂಡಲ್ಪಟ್ಟಿತ್ತು. ಈ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದನ್ನು ತಡೆಯುವುದೇ ಪೊಲೀಸರಿಗೆ ಬಹುದೊಡ್ಡ ತಲೆನೋವಾಗಿತ್ತು. ಈ ಹಿಂದೆ ಹಲವು ಬಾರಿ ಈ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ​ನಾಯಿಮರಿಗೆ 66 ಲಕ್ಷ ರೂ. ತೆತ್ತು ಮೋಸ ಹೋದ ಡೆಹರಾಡೂನ್ ಮಹಿಳೆ: ಬೆಂಗಳೂರು ನಿವಾಸಿಯಿಂದ ವಂಚನೆ

Related Article

ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ; 40 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ

ಸಣ್ಣಪುಟ್ಟದಕ್ಕೆ ರೌಡಿಶೀಟರ್ ಪಟ್ಟ ಕಟ್ಟುವಂತಿಲ್ಲ; ಅಕ್ರಮ ಕ್ಯಾಸಿನೋ ತಡೆಯದಿದ್ದರೆ ಪೊಲೀಸರೇ ಹೊಣೆ: ಆರಗ ಜ್ಞಾನೇಂದ್ರ

ಅಕ್ರಮ ವಿದೇಶಿಗರ ಮೇಲೆ ನಿಗಾ ಇಡಿ: ಪೊಲೀಸರಿಗೆ ಗೃಹ ಸಚಿವ ಆರಗ ಸೂಚನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement