ಸಾಂದರ್ಭಿಕ ಚಿತ್ರ 
ದೇಶ

ಚಿಕಿತ್ಸೆಗಾಗಿ ಕರೆತಂದ ವೇಳೆ ಉತ್ತರ ಪ್ರದೇಶದ ಆಸ್ಪತ್ರೆಯಿಂದ ವಿಚಾರಣಾಧೀನ ಕೈದಿ ಪರಾರಿ!

ಚಿಕಿತ್ಸೆಗಾಗಿ ಕರೆತರಲಾಗಿದ್ದ ವೇಳೆ ಜಿಲ್ಲಾ ಆಸ್ಪತ್ರೆಯಿಂದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೋನಭದ್ರಾ: ಚಿಕಿತ್ಸೆಗಾಗಿ ಕರೆತರಲಾಗಿದ್ದ ವೇಳೆ ಜಿಲ್ಲಾ ಆಸ್ಪತ್ರೆಯಿಂದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿದ್ದಾನೆ ಎಂದು ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಪಾನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಲಲ್ಲು ಕೇವತ್ ಎಂಬಾತ 2020ರ ಏಪ್ರಿಲ್ 10 ರಿಂದ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.

ನಾಲ್ವರು ಕಾನ್‌ಸ್ಟೆಬಲ್‌ಗಳು ಆತನನ್ನು ಮಂಗಳವಾರ  ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು.

ಪೆಥಾಲಜಿ ಬಳಿ ಲಲ್ಲು ಅವರನ್ನು ಕೂರಿಸಿಕೊಂಡಿರುವಾಗ ಕಾನ್ಸ್‌ಟೇಬಲ್ ಒಬ್ಬರು ಎಲ್ಲೋ ಹೋಗಿದ್ದರು. ಇದನ್ನೇ ನೋಡುತ್ತಿದ್ದ ಆತ ಪರಾರಿಯಾಗಿದ್ದಾನೆ. ಬಳಿಕ, ಕಾನ್‌ಸ್ಟೆಬಲ್‌ಗಳು ಆತನನ್ನು ಹುಡುಕಿದರು ಕೂಡ ಆತ ಪತ್ತೆಯಾಗಿಲ್ಲ ಎಂದು ಕುಮಾರ್ ಹೇಳಿದರು.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಲೋಪ ಎಸಗಿದ ಕಾನ್‌ಸ್ಟೆಬಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ವಿಚಾರಣಾಧೀನ ಲಲ್ಲುನನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

ನನ್ನೊಂದಿಗೆ ಸೆಕ್ಸ್ ಮಾಡು, ಒಪ್ಪದೇ ಇದ್ರೆ ನಿನ್ನ ವೃತ್ತಿ ಜೀವನ ನಾಶ, ಭಾರತೀಯ ಸಹೋದ್ಯೋಗಿಗೆ ಜೆಪಿ ಮೋರ್ಗಾನ್ ಮಹಿಳಾ ಅಧಿಕಾರಿ ಬೆದರಿಕೆ

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

SCROLL FOR NEXT