ಸಾಂದರ್ಭಿಕ ಚಿತ್ರ 
ದೇಶ

ಸಿಬ್ಬಂದಿಗೆ ಥಳಿಸಿದ ಪ್ರಯಾಣಿಕ: ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ದೆಹಲಿಗೆ ವಾಪಸ್

ವಿಮಾನ ಸಿಬ್ಬಂದಿಯೊಂದಿಗೆ ಪ್ರಯಾಣಿಕರೊಬ್ಬರು ಜಗಳವಾಡಿ ಥಳಿಸಿದ ಪರಿಣಾಮ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮತ್ತೆ ದೆಹಲಿಗೆ ವಾಪಸ್ ಬಂದಿಳಿದಿದೆ. 

ನವದೆಹಲಿ: ವಿಮಾನ ಸಿಬ್ಬಂದಿಯೊಂದಿಗೆ ಪ್ರಯಾಣಿಕರೊಬ್ಬರು ಜಗಳವಾಡಿ ಥಳಿಸಿದ ಪರಿಣಾಮ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮತ್ತೆ ದೆಹಲಿಗೆ ವಾಪಸ್ ಬಂದಿಳಿದಿದೆ. 

ಏರ್ ಇಂಡಿಯಾ ವಿಮಾನದಲ್ಲಿ ಮತ್ತೊಂದು ವಿಲಕ್ಷಣ ಘಟನೆ ನಡೆದಿದ್ದು, ಪ್ರಯಾಣಿಕರೊಬ್ಬರು ಸಿಬ್ಬಂದಿಗೆ ಥಳಿಸಿದ ಪರಿಣಾಮ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ದೆಹಲಿಗೆ ವಾಪಸ್ ಆಗಿ ಆರೋಪಿ ಪ್ರಯಾಣಿಕರನ್ನು ಬಲವಂತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ. ಘಟನೆ ಕುರಿತು ವಿಮಾನಯಾನ ಸಂಸ್ಥೆ ದೆಹಲಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಲಾಗಿದೆ. ಈ ಪ್ರಯಾಣಿಕ ಪ್ರಸ್ತುತ ದೆಹಲಿ ವಿಮಾನ ನಿಲ್ದಾಣದಲ್ಲಿದ್ದಾರೆ. ವಿಮಾನದಲ್ಲಿ 225 ಪ್ರಯಾಣಿಕರಿದ್ದರು. ಸ್ವಲ್ಪ ಸಮಯದ ಬಳಿಕ ವಿಮಾನವು ಲಂಡನ್​ಗೆ ಹಾರಿತು.

ಏರ್ ಇಂಡಿಯಾ ಹೇಳಿಕೆ
ಇನ್ನು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, "ಪ್ರಯಾಣಿಕನ ಗಂಭೀರ ಅಶಿಸ್ತಿನ ವರ್ತನೆ"ಯಿಂದಾಗಿ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹಿಂತಿರುಗಿತು ಎಂದು ಹೇಳಿದೆ. "ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳಿಗೆ ಕಿವಿಗೊಡದೆ, ಪ್ರಯಾಣಿಕರು ಇಬ್ಬರು ಕ್ಯಾಬಿನ್ ಸಿಬ್ಬಂದಿಗೆ ದೈಹಿಕ ಹಾನಿಯನ್ನುಂಟುಮಾಡುವುದು ಸೇರಿದಂತೆ ಅಶಿಸ್ತಿನ ವರ್ತನೆಯನ್ನು ಮುಂದುವರೆಸಿದರು. ಹೀಗಾಗಿ ಪೈಲಟ್ ಇನ್ ಕಮಾಂಡ್ ದೆಹಲಿಗೆ ಮರಳಲು ನಿರ್ಧರಿಸಿದರು ಮತ್ತು ಪ್ರಯಾಣಿಕರನ್ನು ಲ್ಯಾಂಡಿಂಗ್ ನಂತರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು. ಪೊಲೀಸರಿಗೆ ಎಫ್‌ಐಆರ್ ಕೂಡ ದಾಖಲಿಸಲಾಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.

ಮತ್ತೊಂದು ಘಟನೆ
ಇತ್ತೀಚೆಗೆ ಇಂತಹುದೇ ಒಂದು ಘಟನೆ ನಡೆದಿತ್ತು. ಲಂ ಡನ್- ಮುಂಬೈ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಮೇರಿಕ ಪ್ರಜೆಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದು, 37 ವರ್ಷದ ರಮಾಕಾಂತ್ ವಿರುದ್ಧ ಮುಂಬೈ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಕ್ಕೂ ಮೊದಲು ಇದೇ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಅಸಮಾಧಾನ: ಖಮೇನಿ ಭೇಟಿಗೆ ಟ್ರಂಪ್ ಒಲವು, ಇರಾನ್ ಕಡೆ ಸ್ನೇಹದ ಹಸ್ತ..?

ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ, ಅಮೆರಿಕಾ ಮಧ್ಯಸ್ಥಿಕೆ..!

ಅಮೆರಿಕದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ: ‘F* India’ ಘೋಷಣೆ ಕೂಗಿ, ಬಾವುಟ ಹರಿದು ಹೀನ ಕೃತ್ಯ, ಭಾರೀ ಆಕ್ರೋಶ..!

ಬಿಹಾರ: ಮುಜಫರ್‌ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಮೂವರ ಸಾವು, 20ಕ್ಕೂ ಹೆಚ್ಚು ರೋಗಿಗಳಿಗೆ ಗಾಯ

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್; ಭಾರತ್ ಜೋಡೋ ಯುವ ಸಂಘಕ್ಕೆ 10 ಲಕ್ಷ ರೂ: ನೂತನ CM ಡಿಕೆಶಿ ಹಲವು ಘೋಷಣೆ

SCROLL FOR NEXT