ಸಾಂದರ್ಭಿಕ ಚಿತ್ರ 
ದೇಶ

LCA Mark 1A: ಅಮೆರಿಕದಿಂದ ಯುದ್ಧ ವಿಮಾನಗಳ ಇಂಜಿನ್ ಪಡೆದ ಭಾರತ!

LCA ಮಾರ್ಕ್ 1A ಯುದ್ಧ ವಿಮಾನಗಳನ್ನು ಖರೀದಿಸುತ್ತಿರುವ ಭಾರತ ಸೋಮವಾರ ಅದರ ಇಂಜಿನ್ ಪಡೆದಿದೆ. ಅಮೆರಿಕದಿಂದ ಎರಡನೇ GE-404 ಇಂಜಿನ್ ನನ್ನು ಭಾರತ ಪಡೆದುಕೊಂಡಿದೆ.

ನವದೆಹಲಿ: ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಣ 'ಆಪರೇಷನ್ ಸಿಂಧೂರ' ಸೇನಾ ಸಂಘರ್ಷದ ನಂತರ ಭಾರತ ರಕ್ಷಣಾ ವಲಯಕ್ಕೆ ಮತ್ತಷ್ಟು ಹೆಚ್ಚಿನ ಆದ್ಯತೆ ನೀಡಿದೆ. ಅಗತ್ಯ ಸೇನಾ ಉಪಕರಣಗಳನ್ನು ಸ್ವದೇಶವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ವಿದೇಶದಿಂದಲೂ ಖರೀದಿ ಮಾಡುತ್ತಿದೆ.

LCA ಮಾರ್ಕ್ 1A ಯುದ್ಧ ವಿಮಾನಗಳನ್ನು ಖರೀದಿಸುತ್ತಿರುವ ಭಾರತ ಸೋಮವಾರ ಅದರ ಇಂಜಿನ್ ಪಡೆದಿದೆ. ಅಮೆರಿಕದಿಂದ ಎರಡನೇ GE-404 ಇಂಜಿನ್ ನನ್ನು ಭಾರತ ಪಡೆದುಕೊಂಡಿದೆ.

ಭಾರತೀಯ ಸಾರ್ವಜನಿಕ ವಲಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ 12 GE-404 ಎಂಜಿನ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.

LCA ಮಾರ್ಕ್ 1A ಫೈಟರ್ ಜೆಟ್‌ಗಳಲ್ಲಿ ಈ ಇಂಜಿನ್ ಗಳನ್ನು ಅಳವಡಿಸಲಾಗುವುದು. ಭಾರತೀಯ ವಾಯುಪಡೆಯು 83 LCA ಮಾರ್ಕ್ 1A ಯುದ್ಧ ವಿಮಾನಗಳಿಗೆ ಆರ್ಡರ್ ಮಾಡಿದೆ.

ರಕ್ಷಣಾ ಸಚಿವಾಲಯದ ಅನುಮತಿಯ ನಂತರ 97ಕ್ಕೂ ಹೆಚ್ಚಿನ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಯು ಮುಂದುವರಿದ ಹಂತದಲ್ಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!