ಸಲ್ಮಾನ್ ಖಾನ್ ನಿವಾಸಕ್ಕೆ ನುಗ್ಗಿದ ಯುವತಿ ಇಶಾ ಛಾಬ್ರಿಯಾ 
ದೇಶ

'ಸಲ್ಮಾನ್ ಖಾನೇ, ನನ್ನನ್ನು ಕರೆದಿದ್ರು': ಮನೆಗೆ ನುಗ್ಗಲು ಯತ್ನಿಸಿದ ಯುವತಿ ಹೇಳಿಕೆ ಸಂಚಲನ!

ಪೊಲೀಸ್ ವಿಚಾರಣೆ ವೇಳೆ ಆಕೆ, ಸುಮಾರು ಆರು ತಿಂಗಳು ಗಳಿಂದ ಸಲ್ಮಾನ್ ಖಾನ್ ನನಗೆ ಚೆನ್ನಾಗಿ ಗೊತ್ತು. ಅವರೇ ನನ್ನನ್ನು ಕರೆದಿದ್ರು. ಅವರ ಮನೆಗೆ ಮನೆ ಬಳಿ ತೆರಳಿ, ಅಪಾರ್ಟ್ ಮೆಂಟ್ ಬಾಗಿಲು ಬಡಿದಾಗ, ಅವರ ಕುಟುಂಬ ಸದಸ್ಯರೊಬ್ಬರು ಉತ್ತರಿಸಿದ್ದಾಗಿ ಆಕೆ ಆರೋಪಿಸಿದ್ದಾರೆ.

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಮೇ 21 ರಂದು ನುಗ್ಗಲು ಯತ್ನಿಸಿ ಬಂಧನಕ್ಕೊಳಗಾಗಿರುವ 36 ವರ್ಷದ ಇಶಾ ಛಾಬ್ರಿಯಾ ನೀಡಿರುವ ಹೇಳಿಕೆ ಇದೀಗ ತೀವ್ರ ಸಂಚಲನ ಮೂಡಿಸಿದೆ.

ಸಲ್ಮಾನ್ ಖಾನ್ ನನಗೆ ಚೆನ್ನಾಗಿ ಗೊತ್ತು. ಅವರೇ ನನ್ನನ್ನು ಮನೆಗೆ ಕರೆದಿದ್ರು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ತನ್ನನ್ನು ಮಾಡೆಲ್ ಎಂದು ಹೇಳಿಕೊಳ್ಳುವ ಛಾಬ್ರಿಯಾ ಮೇ 21 ರಂದು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದರು.

ಪೊಲೀಸ್ ವಿಚಾರಣೆ ವೇಳೆ ಆಕೆ, ಸುಮಾರು ಆರು ತಿಂಗಳು ಗಳಿಂದ ಸಲ್ಮಾನ್ ಖಾನ್ ನನಗೆ ಚೆನ್ನಾಗಿ ಗೊತ್ತು. ಅವರೇ ನನ್ನನ್ನು ಕರೆದಿದ್ರು. ಅವರ ಮನೆಗೆ ಮನೆ ಬಳಿ ತೆರಳಿ, ಅಪಾರ್ಟ್ ಮೆಂಟ್ ಬಾಗಿಲು ಬಡಿದಾಗ, ಅವರ ಕುಟುಂಬ ಸದಸ್ಯರೊಬ್ಬರು ಉತ್ತರಿಸಿದ್ದಾಗಿ ಆಕೆ ಆರೋಪಿಸಿದ್ದಾರೆ.

ಸಲ್ಮಾನ್ ಖಾನ್ ಅವರೇ ನನ್ನನ್ನು ಮನೆಗೆ ಕರೆದಿದ್ರು ಎಂದು ಆಕೆ ಪದೇ ಪದೇ ಹೇಳಿದ್ದಾರೆ. ಆದಾಗ್ಯೂ, ಸಲ್ಮಾನ್ ಖಾನ್ ಆ ರೀತಿಯಲ್ಲಿ ಯಾರಿಗೂ ಕರೆದಿರಲಿಲ್ಲ ಎಂಬುದು ತಿಳಿದ ನಂತರ ಮನೆಯಲ್ಲಿದ್ದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಯ ಬಂಧನದ ನಂತರ ಪೊಲೀಸ್ ವಿಚಾರಣೆ ವೇಳೆ ತನ್ನನ್ನು ಸಲ್ಮಾನ್ ಖಾನ್ ಖಾನ್ ಅವರೇ ಆಹ್ವಾನಿಸಿದ್ದರು ಎಂದು ಯುವತಿ ಹೇಳಿದ್ದಾರೆ. ಆದರೆ, ಸಲ್ಮಾನ್ ಖಾನ್ ಕುಟುಂಬ ಇದನ್ನು ಬಲವಾಗಿ ನಿರಾಕರಿಸಿದೆ.

ಮೇ 20 ರಂದು ಜೀತೇಂದ್ರ ಕುಮಾರ್ ಸಿಂಗ್ ಎಂಬಾತ ಸಲ್ಮಾನ್ ಖಾನ್ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದರು. ಈ ಘಟನೆ ಸಂಬಂಧ ಎರಡು ಪ್ರತ್ಯೇಕ ಕೇಸ್ ಗಳನ್ನು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!