ಹಿಂದೂ ದೇವತೆ ಕಾಳಿ ಮಾತೆಯ ವಿಗ್ರಹಕ್ಕೆ ಮೇರಿ ಮಾತೆಯಂತೆ ಅಲಂಕರಿಸಿರುವುದು. 
ದೇಶ

ಮುಂಬೈ ದೇವಾಲಯದಲ್ಲಿ ಕಾಳಿ ಮಾತೆ ವಿಗ್ರಹಕ್ಕೆ​ ಮೇರಿ ರೂಪ: ವೀಡಿಯೋ ವೈರಲ್, ಅರ್ಚಕ ಬಂಧನ

ಕನಸಿನಲ್ಲಿ ದೇವತೆ ಕಾಣಿಸಿಕೊಂಡಿದ್ದು ವಿಗ್ರಹಕ್ಕೆ ಆ ರೀತಿಯಲ್ಲಿ ಅಲಂಕರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ರೀತಿ ಅಲಂಕರಿಸಿದ್ದೇನೆ.

ಮುಂಬೈ: ಮುಂಬೈನ ದೇವಸ್ಥಾನವೊಂದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯ ವಿಗ್ರಹಕ್ಕೆ ಮೇರಿ ಮಾತೆಯಂತೆ ಅಲಂಕರಿಸಿರುವ ಘಟನೆಯೊಂದು ಭಾರೀ ಸುದ್ದಿಯಾಗುತ್ತಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಟೀಕೆ ಹಾಗೂ ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ವಿಡಿಯೋ ವೈರಲ್ ಬೆನ್ನಲ್ಲೇ ದೇವಾಲಯದ ಅರ್ಚಕನನ್ನು ಮುಂಬೈ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಇನ್ನು ವಿಚಾರಣೆ ವೇಳೆ ಅರ್ಚಕ ಹೇಳಿಕೆ ನೀಡಿದ್ದು. 'ಕನಸಿನಲ್ಲಿ ದೇವತೆ ಕಾಣಿಸಿಕೊಂಡಿದ್ದು ವಿಗ್ರಹಕ್ಕೆ ಆ ರೀತಿಯಲ್ಲಿ ಅಲಂಕರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ರೀತಿ ಅಲಂಕರಿಸಿದ್ದೇನೆ ಎಂದು ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ವಿಗ್ರಹಕ್ಕೆ ಬಿಳಿ ಬಣ್ಣದ ನಿಲುವಂಗಿ, ದೊಡ್ಡ ಕಿರೀಟ ಹಾಕಿ ಅಲಂಕಾರ ಮಾಡಲಾಗಿರುವುದು, ಯೇಸುವನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸಲಾದ ಮಗುವಿನ ಪ್ರತಿಮೆಯನ್ನು ತನ್ನ ತೋಳುಗಳಲ್ಲಿ ಹಿಡಿದಿರುವುದು ಕಂಡು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video