ಡೈರಿಯೇತರ ಪನೀರ್ ಗೆ ನಿಷೇಧ ಹೇರಿದ ಸರ್ಕಾರ 
ದೇಶ

ಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ, ವ್ಯಾಪಾರಿಗಳು ಬೇಸ್ತು! ಕಾರಣ ಏನು?

ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಇತರ ಆಹಾರ ಸಂಸ್ಥೆಗಳು ಸಾಮಾನ್ಯ ಪನೀರ್ ಬದಲಿಗೆ ಅನಾಲಾಗ್ ಪನೀರ್ ಬಳಸುತ್ತಿದ್ದು, ಈ ಬದಲಾವಣೆಯ ಬಗ್ಗೆ ಮೆನು, ಬಿಲ್‌ಗಳು ಅಥವಾ ಪ್ರದರ್ಶನ ಫಲಕಗಳಲ್ಲಿ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ..

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಸರ್ಕಾರ ಡೈರಿಯೇತರ ಪನೀರ್‌ಗೆ ಒಂದು ವರ್ಷದ ನಿಷೇಧ ಹೇರಿದ್ದು, ನಿಯಮಬಾಹಿರವಾಗಿ ಮಾರಾಟ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಹೌದು.. ಸಾರ್ವಜನಿಕ ಆರೋಗ್ಯದ ಕಾಳಜಿ ಹಾಗೂ ಆಹಾರ ಸುರಕ್ಷತಾ ನಿಯಮಗಳ ವ್ಯಾಪಕ ಉಲ್ಲಂಘನೆಯ ಹಿನ್ನೆಲೆಯಲ್ಲಿ ‘ಅನಾಲಾಗ್’ ಅಥವಾ ಡೈರಿ ಅಲ್ಲದ ಪನೀರ್ ತಯಾರಿಕೆ ಮತ್ತು ಮಾರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಒಂದು ವರ್ಷದ ನಿಷೇಧ ಹೇರಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇತ್ತೀಚಿನ ಸರ್ಕಾರದ ಆದೇಶದ ಪ್ರಕಾರ, ನಿಯಮ ಉಲ್ಲಂಘಿಸುವವರಿಗೆ ಜೀವಾವಧಿ ಶಿಕ್ಷೆ ಹಾಗೂ ಗರಿಷ್ಠ 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಛತ್ತೀಸ್‌ಗಢದ ಬಳಿಕ ಇಂತಹ ನಿಷೇಧ ಹೇರಿದ ದೇಶದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.

ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಇತರ ಆಹಾರ ಸಂಸ್ಥೆಗಳು ಸಾಮಾನ್ಯ ಪನೀರ್ ಬದಲಿಗೆ ಅನಾಲಾಗ್ ಪನೀರ್ ಬಳಸುತ್ತಿದ್ದು, ಈ ಬದಲಾವಣೆಯ ಬಗ್ಗೆ ಮೆನು, ಬಿಲ್‌ಗಳು ಅಥವಾ ಪ್ರದರ್ಶನ ಫಲಕಗಳಲ್ಲಿ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಆಹಾರ ಮತ್ತು ಔಷಧ ಆಡಳಿತ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

ಏನಿದು ಅನಲಾಗ್ ಅಥವಾ ಡೈರಿಯೇತರ ಪನೀರ್?

ಅನಾಲಾಗ್ ಪನೀರ್ ಎಂದರೆ ಹಾಲಿನ ಕೊಬ್ಬಿನ ಬದಲಿಗೆ ಸಸ್ಯಜನ್ಯ ಎಣ್ಣೆಗಳು, ಪಿಷ್ಟ, ಎಮಲ್ಸಿಫೈಯರ್‌ಗಳು ಹಾಗೂ ಇತರ ಸೇರ್ಪಡೆಗಳನ್ನು ಬಳಸಿ ತಯಾರಿಸುವ ಡೈರಿ ಅಲ್ಲದ ಪರ್ಯಾಯ ಉತ್ಪನ್ನ. ಸಾಮಾನ್ಯ ಪನೀರ್‌ಗಿಂತ ಇದನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು ಹಾಗೂ ಸಾಮಾನ್ಯವಾಗಿ ಇದರಲ್ಲಿ ಪ್ರೋಟೀನ್ ಪ್ರಮಾಣವೂ ಕಡಿಮೆ ಇರುತ್ತದೆ.

ಮಹಾರಾಷ್ಟ್ರ ಆಹಾರ ಸುರಕ್ಷತಾ ಆಯುಕ್ತ ತುಕಾರಾಮ್ ಮುಂಧೆ ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಪ್ರಕಾರ, ರಾಜ್ಯಾದ್ಯಂತ ಅನಾಲಾಗ್ ಪನೀರ್‌ನ ತಯಾರಿಕೆ, ಸಂಸ್ಕರಣೆ, ಸಿದ್ಧಪಡಿಸುವಿಕೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ, ಸಗಟು ಮತ್ತು ಚಿಲ್ಲರೆ ಮಾರಾಟ ಹಾಗೂ ಮಾರಾಟಕ್ಕೆ ನೀಡುವುದನ್ನು ನಿಷೇಧಿಸಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಇಂತಹ ನಿಷೇಧಾತ್ಮಕ ಆದೇಶಗಳನ್ನು ಗರಿಷ್ಠ ಒಂದು ವರ್ಷದ ಅವಧಿಗೆ ಮಾತ್ರ ಜಾರಿಗೊಳಿಸಲು ಅವಕಾಶವಿದೆ ಎಂದು ಎಫ್‌ಡಿಎ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಇಲಾಖೆ ಹೇಳಿದ್ದೇನು?

“ಇಂತಹ ಉತ್ಪನ್ನಗಳನ್ನು ಒಂದು ವರ್ಷ ಮಾತ್ರ ನಿಷೇಧಿಸಲು ಕಾನೂನಿನಲ್ಲಿ ಅವಕಾಶವಿದೆ. ನಮ್ಮ ಮಾಹಿತಿಯ ಪ್ರಕಾರ, ಅನಾಲಾಗ್ ಪನೀರ್‌ನಲ್ಲಿ ಪೌಷ್ಟಿಕಾಂಶದ ಮೌಲ್ಯ ತುಂಬಾ ಕಡಿಮೆ. ಆದರೆ ಇಂತಹ ಪನೀರ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ನಮಗೆ ಕಾನೂನುಬದ್ಧ ಬೆಂಬಲವಿಲ್ಲ,” ಎಂದು ಅಧಿಕಾರಿ ತಿಳಿಸಿದ್ದಾರೆ.

ಗ್ರಾಹಕರಿಗೆ ಮಾಹಿತಿ ನೀಡದೆ ಅನಾಲಾಗ್ ಪನೀರ್ ಅನ್ನು ಸಾಮಾನ್ಯ ಡೈರಿ ಪನೀರ್ ಎಂದು ನೀಡುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಅನ್ಯಾಯದ ವ್ಯಾಪಾರ ಪದ್ಧತಿಯಾಗುತ್ತದೆ ಹಾಗೂ ಅಂತಹ ಪ್ರಕರಣಗಳಲ್ಲಿ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‌ಡಿಎ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!