ನವದೆಹಲಿ: ಲೈಂಗಿಕ ಕ್ರಿಯೆಗೆ ನಿರಾಕರಿಸಿದ ತನ್ನ MBA ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರೇಯಸಿಯನ್ನು ಕತ್ತು ಸೀಳಿ ಕೊಲೆ ಮಾಡಿದ ಧೂರ್ತ ಇದೀಗ ತನ್ನ ಹೀನಾಯ ಕೃತ್ಯವನ್ನು 'ಆಗಿದ್ದಾಯ್ತು ಬಿಡಿ.. ಏನ್ ಮಾಡೋಕ್ ಆಗುತ್ತೆ' ಎಂದು ವಿಲಕ್ಷಣವಾಗಿ ಸಮರ್ಥಿಸಿಕೊಂಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದ್ದ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಪ್ರೇಯಸಿಯನ್ನು ವ್ಯಕ್ತಿಯೋರ್ವ ಚಾಕು ಮುರಿಯುವವರೆಗೂ ಇರಿದು ಹತ್ಯೆ ಮಾಡಿದ್ದ ಪ್ರಕರಣ ಮತ್ತೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹತ್ಯೆಗಿಂತಲೂ ಧಾರುಣ ಎಂದರೆ ಹತ್ಯೆ ಬಳಿಕ ಆರೋಪಿ ನಡೆದುಕೊಂಡ ವರ್ತನೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.
ಈ ಭೀಕರ ಹತ್ಯೆ ಬಳಿಕ ಪೊಲೀಸರು ಆರೋಪಿ ಪಿಯೂಷ್ ಧಮ್ನೋಟಿಯಾ ನನ್ನು ಬಂಧಿಸಿದ್ದು ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಈ ವೇಳೆ ಠಾಣೆ ಬಳಿ ಪತ್ರಕರ್ತರಿಗೆ ಎದುರಾದ ಆರೋಪಿಯನ್ನು ಸುದ್ದಿಗಾರರು ಪ್ರಶ್ನೆ ಕೇಳಿದ್ದು, ಈ ವೇಳೆ ಆತ ನೀಡಿದ ಉತ್ತರ ಎಲ್ಲರೂ ಹೌಹಾರುವಂತೆ ಮಾಡಿದೆ.
ಭಯವಿಲ್ಲ.. ಪಾಪಪ್ರಜ್ಞೆ ಕೂಡ ಇಲ್ಲ
ಪಿಯೂಷ್ ಧಮ್ನೋಟಿಯಾ ನನ್ನು ಪ್ರಶ್ನೆ ಮಾಡಲು ಸುದ್ದಿಗಾರರು ಮುಂದಾಗುತ್ತಿದ್ದಂತೆಯೇ ಆರೋಪಿ ಪಿಯೂಷ್ ಧಮ್ನೋಟಿಯಾ ತಾನೇನೋ ಸಾಧಿಸಿದವನಂತೆ ಕ್ಯಾಮೆರಗಳ ಬಳಿ ಗರ್ವದಿಂದ ಪೋಸ್ ನೀಡಿದ್ದಾನೆ. ಕನಿಷ್ಛ ಪಕ್ಷ ಓರ್ವ ಹುಡುಗಿಯನ್ನುಕೊಂದ ಪಾಪ ಪ್ರಜ್ಞೆ ಕೂಡ ಆತನ ಮುಖದಲ್ಲಿ ಕಾಣಲಿಲ್ಲ. ಮುಖ ಮರೆಮಾಚುವ ಪ್ರಯತ್ನ ಮಾಡದೇ ನೇರವಾಗಿ ಕ್ಯಾಮೆರಾಗಳ ಬಳಿ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾನೆ.
'ಆಗಿದ್ದಾಯ್ತು ಬಿಡಿ.. ಏನ್ ಮಾಡೋಕ್ ಆಗುತ್ತೆ'
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಗುಳ್ನಗುತ್ತಾ ಮಾತನಾಡಿದ ಆರೋಪಿ ಪಿಯೂಷ್ ಧಮ್ನೋಟಿಯಾ, 'ಆಗಿದ್ದಾಯ್ತು.. ಏನ್ ಆಗಬೇಕಿತ್ತೋ ಅದು ಆಗಿದೆ.. ಏನ್ ಮಾಡೋಕ್ ಆಗುತ್ತೆ.. ಅದನ್ನು ತಿಳಿದುಕೊಂಡು ನೀವೇನು ಮಾಡುತ್ತೀರಿ? ಸಮಯ ಬರುತ್ತದೆ, ಆಗ ನಾನು ಎಲ್ಲವನ್ನೂ ಹೇಳುತ್ತೇನೆ' ಎಂದು ವಿಲಕ್ಷಣವಾಗಿ ಹೇಳಿದ್ದಾನೆ. ಆತನ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಏನಿದು ಪ್ರಕರಣ?
ಆರೋಪಿ ಪಿಯೂಷ್ ಧಮ್ನೋಟಿಯಾ ಮತ್ತು ಆತನ 24 ವರ್ಷದ ಪ್ರೇಯಸಿ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದರು. ಮಧ್ಯಪ್ರದೇಶದ ಇಂದೋರ್‌ನಲ್ಲಿ ತನ್ನ ಬಾಡಿಗೆ ಮನೆಯೊಳಗೆ ಎಂಬಿಎ ವಿದ್ಯಾರ್ಥಿನಿಯಾಗಿದ್ದ 24 ವರ್ಷದ ಗೆಳತಿಯನ್ನು ಆರೋಪಿ ಪಿಯೂಷ್ ಧಮ್ನೋಟಿಯಾಸೆಕ್ಸ್ ಗೆ ಒತ್ತಾಯಿಸಿದ್ದ. ಆದರೆ ಆಕೆ ನಿರಾಕರಿಸಿದ ಹಿನ್ನಲೆಯಲ್ಲಿ ಆಕೆಯನ್ನು ಹರಿತವಾದ ಚಾಕುವಿನಿಂದ ಭೀಕರವಾಗಿ ಕೊಲೆ ಮಾಡಿದ್ದ.
ತನ್ನ ಆರೋಗ್ಯ ಕೆಟ್ಟಿದ್ದು ಈಗ ಸೆಕ್ಸ್ ಬೇಡ ಎಂದು ಆಕೆ ಮಾತು ಕೇಳದ ಪಿಯೂಷ್ ಆಕೆ ಮೇಲೆರಗಿದ್ದ. ಈ ವೇಳೆ ಆಕೆ ನಿರಾಕರಿಸಿದ್ದರಿಂದ ಆಕೆಯ ಮೇಲೆ ಆಕ್ರೋಶಗೊಂಡು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೂ ಮೊದಲು ಆಕೆಗೆ ಉಡುಗೊರೆ ನೀಡುವುದಾಗಿ ಹೇಳಿ ಆಕೆಯ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ಹಲ್ಲೆ ಮಾಡಿದ್ದಾನೆ.
ಬಳಿಕ ಹರಿತವಾದ ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾನೆ. ಆತನ ಕ್ರೋಧ ಎಷ್ಟಿತ್ತು ಎಂದರೆ ಆತ ಕುಯ್ಯುತ್ತಿದ್ದ ಚಾಕುವೇ ಮುರಿದು ಹೋಗುವವರೆಗೂ ಇರಿದು ಹತ್ಯೆ ಮಾಡಿದ್ದಾನೆ. ಆಕೆಯನ್ನು ಕೊಂದ ನಂತರವೂ ಆತನ ವಿಕೃತಿ ಮುಂದುವರೆದಿದ್ದು, ಬಿಯರ್ ತಂದು ಆಕೆಯ ಮೃತ ದೇಹದ ಪಕ್ಕದಲ್ಲೇ ಕುಡಿಯುತ್ತಾ ಕುಳಿತಿದ್ದಾನೆ.
ಆತ್ಮ ಕರೆಯುವ ಕುರಿತು ಯೂಟ್ಯೂಬ್ ಸರ್ಚ್
ಇನ್ನೂ ಆಘಾತಕಾರಿ ವಿಚಾರವೆಂದರೆ ಈ ಭೀಕರ ಕೊಲೆ ಬಳಿಕ ಆರೋಪಿ ಪಿಯೂಷ್, ಯೂಟ್ಯೂಬ್ನಲ್ಲಿ ಆತ್ಮವನ್ನು ಕರೆಯುವುದು ಹೇಗೆ ಎಂದು ಸರ್ಚ್ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆಯಾಚಿಸಿ ಆಕೆಯ ಆತ್ಮದೊಂದಿಗೆ ಮಾತನಾಡಲು ಆತ ಬಯಸಿ ಕ್ಷುದ್ರ ಪೂಜೆ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಶವದೊಂದಿಗೆ ಸೆಕ್ಸ್
ಇನ್ನು ಪೊಲೀಸ್ ವಿಚಾರಣೆ ವೇಳೆ ಸ್ಫೋಟಕ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಆರೋಪಿ, ಕೊಲೆ ಬಳಿಕ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಫೆಬ್ರವರಿ 10 ರಂದು ಧಮ್ನೋಟಿಯಾ ವಿದ್ಯಾರ್ಥಿಯೊಂದಿಗೆ ಬರುತ್ತಿರುವುದು ಕಂಡುಬಂದಿತ್ತು. ಸುಮಾರು ಎರಡೂವರೆ ಗಂಟೆಗಳ ನಂತರ, ಅದೇ ಕ್ಯಾಮೆರಾದಲ್ಲಿ ಆತ ಒಂಟಿಯಾಗಿ ಬ್ಯಾಗ್ ಹೊತ್ತುಕೊಂಡು ಹೊರಗೆ ಹೋಗುವುದು ಕಂಡುಬಂದಿತ್ತು.