ಪ್ರಧಾನಿ ಮೋದಿ ಪಯಣಿಸಿದ್ದ ಏರ್ ಇಂಡಿಯಾ ಒನ್ ವಿಮಾನ 
ದೇಶ

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

ಏರ್ ಇಂಡಿಯಾ ಒನ್ ವಿಮಾನ ಭಾರತ ಸರ್ಕಾರದ ವಿಶೇಷ ವಿಮಾನವಾಗಿದ್ದು, ಇದನ್ನು ಪ್ರಧಾನಿ ಮತ್ತು ಇತರ ಉನ್ನತ ನಾಯಕರ ಪ್ರಯಾಣಕ್ಕೆ ಮಾತ್ರ ಬಳಸಲಾಗುತ್ತದೆ.

ಟೆಲ್ ಅವೀವ್: 2 ದಿನಗಳ ಪ್ರವಾಸದ ನಿಮಿತ್ತ ಇಸ್ರೇಲ್ ಗೆ ಪ್ರಯಾಣಿಸಿರುವ ಪ್ರಧಾನಿ ನರೇಂದ್ರ ಮೋದಿ ಏರ್ ಇಂಡಿಯಾ ವಿಮಾನದಲ್ಲಿ ಟೆಲ್ ಅವೀವ್ ಗೆ ಪ್ರಯಾಣಿಸಿದ್ದು, ಈ Air India ONE ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲ್ಪಟ್ಟ ವಿಮಾನವಾಗಿದೆ.

ಈ ಏರ್ ಇಂಡಿಯಾ ಒನ್ ವಿಮಾನ ಭಾರತ ಸರ್ಕಾರದ ವಿಶೇಷ ವಿಮಾನವಾಗಿದ್ದು, ಇದನ್ನು ಪ್ರಧಾನಿ ಮತ್ತು ಇತರ ಉನ್ನತ ನಾಯಕರ ಪ್ರಯಾಣಕ್ಕೆ ಮಾತ್ರ ಬಳಸಲಾಗುತ್ತದೆ.

ಅಂತೆಯೇ ಫೆಬ್ರವರಿ 25 ರಂದು ಅಂದರೆ ಇಂದು ಪ್ರಧಾನಿ ಮೋದಿ ಇಸ್ರೇಲ್ ಪಯಣಿಸಲು ಇದೇ ವಿಮಾನ ಬಳಕೆ ಮಾಡಿದ್ದು, ಫ್ಲೈಟ್ ಗಾರ್ಡ್ ಡೇಟಾವು ಈ ವಿಮಾನದ ಚಲನೆಯು ವಿಶ್ವದಲ್ಲೇ ಹೆಚ್ಚು ಟ್ರ್ಯಾಕ್ ಮಾಡಲ್ಪಟ್ಟಿದೆ ಎಂದು ತೋರಿಸುತ್ತದೆ.

ವಿಶ್ವದಾದ್ಯಂತ ವಿಮಾನಗಳ ಸಂಚಾರವನ್ನು ಮೇಲ್ವಿಚಾರಣೆ ಮಾಡುವ ಜನಪ್ರಿಯ ಆನ್ಲೈನ್ ವೇದಿಕೆಯಾದ ಫ್ಲೈಟ್ ರಾಡಾರ್ ನ ದತ್ತಾಂಶವು ಪ್ರಧಾನಿ ಮೋದಿಯವರ ವಿಮಾನ ಸಂಚಾರವನ್ನು ಈ ಸಮಯದಲ್ಲಿ ಜಗತ್ತಿನಲ್ಲಿ ಹೆಚ್ಚು ಟ್ರ್ಯಾಕ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಫ್ಲೈಟ್ರಾಡಾರ್ ಆನ್ಲೈನ್ ಪ್ಲಾಟ್ಫಾರ್ಮ್ ಆಗಿದ್ದು ಅದು ಲೈವ್ ಫ್ಲೈಟ್ ಟ್ರ್ಯಾಕಿಂಗ್ ಅನ್ನು ನಡೆಸುತ್ತದೆ. ಪ್ರಪಂಚದಾದ್ಯಂತ ಹಾರಾಟ ನಡೆಸುವ ವಿಮಾನದ ನೈಜ-ಸಮಯದ ಸ್ಥಳ, ವೇಗ, ಎತ್ತರ, ಮಾರ್ಗ, ವಿಮಾನ ಸಂಖ್ಯೆ ಇತ್ಯಾದಿಗಳನ್ನು ತೋರಿಸುವುದು ಇದರ ಮುಖ್ಯ ಕಾರ್ಯವಾಗಿದೆ.

ಫ್ಲೈಟ್ ಗಾರ್ಡ್ ಪ್ರಕಾರ, ಪ್ರಧಾನಿ ಮೋದಿಯವರ ವಿಮಾನವು ಬುಧವಾರ ಸಂಜೆ 4 ಗಂಟೆಗೆ ಸೌದಿ ಅರೇಬಿಯಾದಿಂದ ಜೋರ್ಡಾನ್ಗೆ ಪ್ರವೇಶಿಸುತ್ತಿದ್ದಾಗ, 7184 ಜನರು ಅದನ್ನು ಲೈವ್ ಆಗಿ ಟ್ರ್ಯಾಕ್ ಮಾಡುತ್ತಿದ್ದರು.

ಪಾಕ್ ವಾಯುಪ್ರದೇಶ ತಪ್ಪಿಸಿದ್ದ ಏರ್ ಇಂಡಿಯಾ ವಿಮಾನ

ಇನ್ನು ಇಸ್ರೇಲ್ ಗೆ ಪಯಣಿಸಲು ಪ್ರಧಾನಿ ಮೋದಿ ಪ್ರಯಾಣಿಸಿದ್ದ ವಿಮಾನ ಪಾಕಿಸ್ತಾನ ಮತ್ತು ಇರಾನ್ ನ ವಾಯುಪ್ರದೇಶಗಳನ್ನು ಸಂಪೂರ್ಣವಾಗಿ ತಪ್ಪಿಸಿತ್ತು. ವಿಮಾನ ದೆಹಲಿಯಿಂದ ಗುಜರಾತ್ ಮೂಲಕ ಅರೇಬಿಯನ್ ಸಮುದ್ರದ ಮೂಲಕ ಒಮನ್ ತಲುಪಿತ್ತು.

ನಂತರ ವಿಮಾನವು ಸೌದಿ ಅರೇಬಿಯಾದ ವಾಯುಪ್ರದೇಶದ ಮೂಲಕ ಹಾದುಹೋಯಿತು. ನಂತರ ಅವರ ವಿಮಾನವು ಜೋರ್ಡಾನ್ಗೆ ಹಾರಿತು. ಜೋರ್ಡಾನ್ ನಂತರ, ಇಸ್ರೇಲ್ ಗಡಿ ಪ್ರಾರಂಭವಾಗುತ್ತದೆ. ಬಳಿಕ ವಿಮಾನ ಟೆಲ್ ಅವೀವ್ ತಲುಪಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

9 ವರ್ಷಗಳ ಬಳಿಕ ಇಸ್ರೇಲ್ ಗೆ ಪ್ರಧಾನಿ ಮೋದಿ ಭೇಟಿ; ಅದ್ದೂರಿ ರೆಡ್ ಕಾರ್ಪೆಟ್ ಸ್ವಾಗತ

ವಿರೋಶ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ, ಆಶಿಕಾ

ಪಾಕಿಸ್ತಾನದ ಮುಸ್ಲಿಮ್ ಉಮ್ಮಾ ಗೆ ಕಾಡ್ತಿದೆ ಇಸ್ರೇಲ್- ಭಾರತದ Hexagon Alliance ಗುಮ್ಮಾ!

ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ 300 ಕೋಟಿ ರೂ ಬಿಡುಗಡೆ; ಪ್ರತಿ ಟನ್‌ಗೆ 50 ರೂ ನೇರ ವರ್ಗಾವಣೆ

ED ದಾಳಿ ಭೀತಿ, ಉದ್ಯಮಿ CJ Roy ರೀತಿಯಲ್ಲೇ BBMP ನಿವೃತ್ತ ಎಂಜಿನಿಯರ್ ಆತ್ಮಹತ್ಯೆಗೆ ಶರಣು!

SCROLL FOR NEXT