ಮಹಿಳೆಯ ಬಟ್ಟೆ ಎತ್ತಿ ನೋಡಿ ಪರಾರಿಯಾದ ದುರುಳ 
ದೇಶ

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಬಟ್ಟೆ ಎತ್ತಿ ನೋಡಿ ಪರಾರಿಯಾದ ದುರುಳ; ಪೊಲೀಸ್ ತನಿಖೆ ಆರಂಭ

ಮಹಿಳೆ ತನ್ನ ಮಗುವನ್ನು ಎಡಗೈಯಲ್ಲಿ ಹಿಡಿದು, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮನೆಗೆ ಮರಳುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ದುಷ್ಕರ್ಮಿ ಆಕೆಯ ಉಡುಪನ್ನು ಎತ್ತಿ ಕಿರುಕುಳ ನೀಡಿದ್ದಾನೆ.

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಹಾಡಹಗಲೇ ದುಷ್ಕರ್ಮಿಯೋರ್ವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಬಟ್ಟೆ ಎತ್ತಿ ನೋಡಿ ಪರಾರಿಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ.

ಮೂಲಗಳ ಪ್ರಕಾರ ಮೇ 14ರ ಮಧ್ಯಾಹ್ನ ಹೈದರಾಬಾದ್ ನ Pranati Eesha Apartment ಸಮೀಪದ ಅಲ್ಕಾಪುರ ಟೌನ್‌ಶಿಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮಹಿಳೆ ತನ್ನ ಮಗುವನ್ನು ಎಡಗೈಯಲ್ಲಿ ಹಿಡಿದು, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮನೆಗೆ ಮರಳುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ದುಷ್ಕರ್ಮಿ ಆಕೆಯ ಉಡುಪನ್ನು ಎತ್ತಿ ಕಿರುಕುಳ ನೀಡಿದ್ದಾನೆ.

ಇದರಿಂದ ಗಾಬರಿಗೊಂಡ ಮಹಿಳೆ ಏನಾಗಿದೆ ಎಂಬುದನ್ನುಅರಿಯದೇ ತಕ್ಷಣ ಹಿಂದಿರುಗಿ ನೋಡುತ್ತಲೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಬಳಿಕ ಮಹಿಳೆ ಕೆಲ ಕ್ಷಣ ಅಲ್ಲೇ ನಿಂತು, ಅವನು ಹೋದ ದಿಕ್ಕಿನತ್ತ ನಡೆದಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ದುಷ್ಕರ್ಮಿಯ ಕೃತ್ಯ ಸೆರೆಯಾಗಿದ್ದು, ಹಾಡಹಗಲೇ ನಡೆದ ಈ ಘಟನೆ ಮಹಿಳಾ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಯನ್ನೆತ್ತಿದೆ.

ಈ ಘಟನೆ ಬಳಿಕ ಸ್ಥಳೀಯ ನಿವಾಸಿಗಳು ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಘಟನೆಯನ್ನು “ಅಸಹ್ಯಕರ” ಮತ್ತು “ಆಘಾತಕಾರಿ” ಎಂದು ವರ್ಣಿಸಿದ್ದಾರೆ.

ಈ ಘಟನೆ ನರ್ಸಿಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಕೊಂಡ-ನೆಕ್ನಂಪುರ ಪ್ರದೇಶದಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡುವುದು ಹಾಗೂ ಹಿಂಬಾಲಿಸುವುದು (stalking) ಆರೋಪದಡಿ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಜಿ ಹರಿಕೃಷ್ಣಾರೆಡ್ಡಿ ಅವರ ಪ್ರಕಾರ, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಪ್ರದೇಶದ ಸುಮಾರು 50 ರಿಂದ 60 ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

'ಯಾವ ಕ್ಷಣದಲ್ಲಾದರೂ ಕುಸಿಯಬಹುದು': Kerala Landslide ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರರ ವರದಿ

ರಾಜ್ಯ ಸರ್ಕಾರಕ್ಕೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡೋ ಅಧಿಕಾರವೇ ಇಲ್ಲ-ಛಲವಾದಿ ನಾರಾಯಣ ಸ್ವಾಮಿ ಕಿಡಿ!

SIR ಕಂಪ್ಯೂಟರೀಕರಣ, ಚಿಕ್ಕಬಳ್ಳಾಪುರ ಅಪರೂಪದ ಸಾಧನೆ, ರಾಜ್ಯದಲ್ಲೇ ಮೊದಲ ಸ್ಥಾನ!

GBA ಚುನಾವಣೆ‌ ನಡೆಸಲು ಡಿಸೆಂಬರ್‌ವರೆಗೆ ಕಾಲಾವಕಾಶ ಕೊಡಿ: ಸುಪ್ರೀಂ ಕೋರ್ಟ್ ಗೆ ಸರ್ಕಾರದ ಅರ್ಜಿ