ಕಾಂಗ್ರೆಸ್ (ಸಂಗ್ರಹ ಚಿತ್ರ) 
ದೇಶ

ಚುನಾವಣೆ ನಂತರ ಕಾಂಗ್ರೆಸ್ ದೇಣಿಗೆಯಲ್ಲಿ ಶೇ.75ರಷ್ಟು ಕುಸಿತ! ಕಾಂಗ್ರೆಸ್ ಫಂಡಿಂಗ್ ಕುಸಿದಿದ್ಯಾಕೆ?

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷಕ್ಕೆ ಬರುವ ಪ್ರಮುಖ ದೇಣಿಗೆಯಲ್ಲಿ ಶೇಕಡಾ 75 ರಷ್ಟು ಭಾರಿ ಕುಸಿತ ಕಂಡುಬಂದಿದ್ದು, ಕಳೆದ ಮೂರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಭಾರತವನ್ನ ವರ್ಷಗಳ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷದ ಚುನಾವಣಾ ದೇಣಿಗೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ರಾಜಕೀಯ ದೇಣಿಗೆಯ ಅಚ್ಚರಿಯ ಅಂಕಿಅಂಶಗಳು ಹೊರಬಿದ್ದಿವೆ. ಅದರಂತೆ, ಕಾಂಗ್ರೆಸ್ ಪಕ್ಷಕ್ಕೆ 20,000 ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದಲ್ಲಿ ಬರುತ್ತಿದ್ದ ದೇಣಿಗೆ ಸಂಗ್ರಹವು 2025-26ರ ಹಣಕಾಸು ವರ್ಷದಲ್ಲಿ ಬರೋಬ್ಬರಿ ಶೇಕಡಾ 75 ರಷ್ಟು ಕುಸಿದಿದ್ದು, ಕೇವಲ ₹130.69 ಕೋಟಿಗೆ ತಲುಪಿದೆ. ಇದು ಕಳೆದ ಒಂದು ದಶಕದಲ್ಲೇ ಕಾಂಗ್ರೆಸ್ ಪಕ್ಷ ಕಂಡ ಅತಿ ದೊಡ್ಡ ವಾರ್ಷಿಕ ಆರ್ಥಿಕ ಹೊಡೆತವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕಾಂಗ್ರೆಸ್ ಫಂಡಿಂಗ್ ಇಷ್ಟೊಂದು ಕುಸಿಯಲು ಕಾರಣವೇನು?

  • ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ದೇಣಿಗೆ ಭಾರಿ ಕಡಿತ

    ಕಾಂಗ್ರೆಸ್ ಪಕ್ಷಕ್ಕೆ ಕಾರ್ಪೊರೇಟ್ ವಲಯದಿಂದ ಹಣ ಒದಗಿಸುವ ದೇಶದ ಅತಿ ದೊಡ್ಡ ಚುನಾವಣಾ ಟ್ರಸ್ಟ್ ಆದ 'ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್' (Prudent Electoral Trust) ನೀಡುತ್ತಿದ್ದ ಹಣದಲ್ಲಿ ಶೇ. 88 ರಷ್ಟು ಭಾರಿ ಕುಸಿತವಾಗಿದೆ.

    • 2024-25ರಲ್ಲಿ ಕೊಟ್ಟಿದ್ದು: ₹ರೂ. 517.39 ಕೋಟಿ.

    • 2025-26ರಲ್ಲಿ ಕೊಟ್ಟಿದ್ದು: ಕೇವಲ ₹25 ಕೋಟಿ.

      • ಕಳೆದ ವರ್ಷ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಕಾರ್ಪೊರೇಟ್ ದೇಣಿಗೆ ನೀಡಿದ ಏಕೈಕ ಟ್ರಸ್ಟ್ ಪ್ರುಡೆಂಟ್ ಆಗಿದೆ.

  • ಚುನಾವಣಾ ವರ್ಷ ಮುಗಿದಿರುವುದು

    2024-25ನೇ ಸಾಲು ಲೋಕಸಭಾ ಚುನಾವಣೆಯ ವರ್ಷವಾಗಿದ್ದರಿಂದ ಸಹಜವಾಗಿಯೇ ಕಾಂಗ್ರೆಸ್‌ಗೆ ದೊಡ್ಡ ಮೊತ್ತದ ಹೂಡಿಕೆ ಹಾಗೂ ದೇಣಿಗೆಗಳು ಹರಿದುಬಂದಿದ್ದವು (84% ಪ್ರಗತಿ ಕಂಡಿತ್ತು). ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಬಿಹಾರ ಮತ್ತು ಇತರ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದಿದ್ದರೂ ಸಹ ಈ ಕುಸಿತ ತಡೆಯಲು ಸಾಧ್ಯವಾಗಿಲ್ಲ.

    ಅದರಲ್ಲೂ, ಕಳೆದ 12 ಹಣಕಾಸು ವರ್ಷಗಳನ್ನು ಪರಿಶೀಲಿಸಿದರೆ, ಇದಕ್ಕಿಂತಲೂ ದೊಡ್ಡ ಕುಸಿತ 2015-16ರಲ್ಲಿ ದಾಖಟ್ತಿಯಾಗಿತ್ತು. ಆ ವರ್ಷ ಕಾಂಗ್ರೆಸ್ ದೇಣಿಗೆ ಬರೋಬ್ಬರಿ ಶೇ. 86 ರಷ್ಟು ಕುಸಿದು ₹141.46 ಕೋಟಿಯಿಂದ ಬರೀ ₹20 ಕೋಟಿಗೆ ಇಳಿದಿತ್ತು. ಅದಾದ ಬಳಿಕ ಈಗ ಉಂಟಾಗಿರುವ ಶೇ. 75 ರಷ್ಟು ಇಳಿಕೆಯೇ ಅತಿ ದೊಡ್ಡದಾಗಿದೆ. (ಚುನಾವಣಾ ಬಾಂಡ್‌ಗಳ ನಿಷೇಧದ ನಂತರದ ಲೆಕ್ಕಾಚಾರದಲ್ಲಿ ಇದು 2020-21ರ ನಂತರದ ಅತ್ಯಂತ ಕಡಿಮೆ ದೇಣಿಗೆಯಾಗಿದೆ).

ಹಾಗಾದ್ರೆ, ಈ ಬಾರಿಯ ಪ್ರಮುಖ ದಾನಿಗಳು ಯಾರು?

ಪ್ರುಡೆಂಟ್ ಟ್ರಸ್ಟ್‌ನ ₹25 ಕೋಟಿ ಹೊರತುಪಡಿಸಿದರೆ, ಕಾಂಗ್ರೆಸ್‌ಗೆ ಈ ಬಾರಿ ದೊಡ್ಡ ಮೊತ್ತದ ದೇಣಿಗೆ ನೀಡಿದ ಇತರ ಪ್ರಮುಖ ಸಂಸ್ಥೆಗಳು:

  • ಸ್ಟಾರ್ ಸಿಮೆಂಟ್ ಲಿಮಿಟೆಡ್: ₹5 ಕೋಟಿ

  • ಸಜ್ಜನ್ ಭಜಂಕಾ: ₹4 ಕೋಟಿ

  • ಅಫ್ನಾನ್ ಕನ್ಸ್ಟ್ರಕ್ಷನ್ಸ್: ₹3 ಕೋಟಿ

  • ಪ್ರೇಮ್ ಕುಮಾರ್ ಭಜಂಕಾ: ₹2 ಕೋಟಿ

ಮುಂದುವರೆದು, ವರದಿಯ ಪ್ರಕಾರ, ಸದಾ ಮುಂಚೂಣಿಯಲ್ಲಿರುವ ಆಡಳಿತಾರೂಢ ಬಿಜೆಪಿ ಪಕ್ಷವು 2024-25ರ ಒಂದೇ ವರ್ಷದಲ್ಲಿ ₹6,074.02 ಕೋಟಿ ದೇಣಿಗೆ ಪಡೆದಿತ್ತು. ಇದು ಅದೇ ವರ್ಷ ಕಾಂಗ್ರೆಸ್ ಪಡೆದಿದ್ದ ಒಟ್ಟು ದೇಣಿಗೆಗಿಂತ ಬರೋಬ್ಬರಿ 12 ಪಟ್ಟು ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Bastarನಲ್ಲಿ ವೀರ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ: ನಕ್ಸಲ್ ಭಯೋತ್ಪಾದನೆಗೆ ಅಂತ್ಯ ಹಾಡಿದ ಭದ್ರತಾ ಪಡೆಗಳಿಗೆ ಸಲಾಂ, ನಕ್ಸಲ್ ಮುಕ್ತ ಭಾರತ ಘೋಷಣೆ..!

ಪ್ರಭಾವಿ ಶಾಸಕನ ಗನ್‌ಮ್ಯಾನ್ ನೇತೃತ್ವದಲ್ಲೇ ₹2.68 ಕೋಟಿ ದರೋಡೆಗೆ ಸ್ಕೆಚ್: ಬೆಳಗಾವಿಯಲ್ಲಿ ಖಾರದಪುಡಿ ಎರಚಿ ಪರಾರಿಯಾಗಲು ಯತ್ನಿಸಿದ ಗ್ಯಾಂಗ್ ಲಾಕ್; 7 ಜನರ ಬಂಧನ

ಹಿಂದೂ ಸಮುದಾಯ ಪಾಕಿಸ್ತಾನದ 'ಅವಿಭಾಜ್ಯ ಅಂಗ' ಎಂದ ಪ್ರಧಾನಿ ಶೆಹಬಾಜ್ ಷರೀಪ್! ದೀಪಾವಳಿ ಹಬ್ಬದ ಶುಭ ಹಾರೈಕೆ

ದೀಪಾವಳಿ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ: ನ.11 ರಂದು ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ! Video

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 483ಕ್ಕೆ ತಲುಪಿದ AQI, ವಿಷಾನಿಲದ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!