ವಿಶ್ವಸಂಸ್ಥೆಯ ಇಬ್ಬಂದಿ ನೀತಿಗೆ ಭಾರತ ಆಕ್ಷೇಪ Online Desk
ದೇಶ

ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ: ದೆಹಲಿ ಪ್ರತಿಭಟನೆ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಡಕ್ ತಿರುಗೇಟು!

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕಾಕ್ರಾಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆ ಹಾಗೂ ಪ್ರತಿಭಟನಾಕಾರರ ಸಾಮೂಹಿಕ ಬಂಧನವನ್ನು ಪ್ರಶ್ನಿಸಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಗೆ ಭಾರತ ಸರ್ಕಾರವು ಅತ್ಯಂತ ತೀಕ್ಷ್ಣವಾದ ತಿರುಗೇಟು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕಾಕ್ರಾಚ್ ಜನತಾ ಪಾರ್ಟಿ (CJP) ನೇತೃತ್ವದ ಪ್ರತಿಭಟನೆ ಹಾಗೂ ಪ್ರತಿಭಟನಾಕಾರರ ಸಾಮೂಹಿಕ ಬಂಧನವನ್ನು ಪ್ರಶ್ನಿಸಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಗೆ ಭಾರತ ಸರ್ಕಾರವು ಅತ್ಯಂತ ತೀಕ್ಷ್ಣವಾದ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಹೇಳಿಕೆಯನ್ನು ತಳ್ಳಿಹಾಕಿರುವ ಭಾರತ, ಇದು ದೇಶದ "ಆಂತರಿಕ ವ್ಯವಹಾರಗಳಲ್ಲಿನ ಅನಗತ್ಯ ಮತ್ತು ಸ್ವೀಕಾರಾರ್ಹವಲ್ಲದ ಹಸ್ತಕ್ಷೇಪ" ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ವಿಶ್ವಸಂಸ್ಥೆ ಹೇಳಿದ್ದೇನು?

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಕ್ತಾರರಾದ ಥಾಮೀನ್ ಅಲ್-ಖೀತನ್ ಅವರು ನೀಡಿದ ಹೇಳಿಕೆಗಳಿಂದ ಈ ರಾಜತಾಂತ್ರಿಕ ಸಂಘರ್ಷ ಉಂಟಾಗಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ಮುಂಜಾಗ್ರತಾ ಕ್ರಮವಾಗಿ ನಡೆದ ಸಾಮೂಹಿಕ ಬಂಧನಗಳ ಬಗ್ಗೆ OHCHR ತೀವ್ರ ಕಳವಳ ವ್ಯಕ್ತಪಡಿಸಿತ್ತು, ಇದರಲ್ಲಿ ಮುಖ್ಯವಾಗಿ  ಪ್ರತಿಭಟನಾಕಾರರು ಮತ್ತು ಹೋರಾಟದ ನಾಯಕರು, ನಾಗರಿಕ ಸಮಾಜದ ಸಂಘಟನೆಗಳ ಸದಸ್ಯರು, ವಕೀಲರು ಮತ್ತು ಪತ್ರಕರ್ತರನ್ನು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿತ್ತು. ಜೊತೆಗೆ, ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಗೌರವಿಸುವಂತೆ, ಪೊಲೀಸರು ಮಿತವಾಗಿ ವರ್ತಿಸುವಂತೆ ಮತ್ತು ಬಂಧಿತರನ್ನು ತಕ್ಷಣ ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆ ಭಾರತಕ್ಕೆ ಮನವಿ ಮಾಡಿತ್ತು.

ವಿಶ್ವಸಂಸ್ಥೆಯ ಇಬ್ಬಂದಿ ನೀತಿಗೆ ಭಾರತದ ಆಕ್ಷೇಪ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯು ಸದಾ ಭಾರತದ ವಿಷಯದಲ್ಲೇ ತಪ್ಪು ಹುಡುಕುವ "ಪಕ್ಷಪಾತ ಮತ್ತು ಆಯ್ದ ವರದಿಗಾರಿಕೆ" ಮಾಡುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತೀಯ ವಿದೇಶಾಂಗ ಇಲಾಖೆ, ವಿಶ್ವಸಂಸ್ಥೆಯ ಕಚೇರಿ ಇರುವ ದೇಶಗಳ ಹತ್ತಿರವೇ ಅಥವಾ ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲಿ ಪ್ರತಿಭಟನೆಗಳ ಮೇಲೆ ಭೀಕರ ದೌರ್ಜನ್ಯ ಮತ್ತು ಹಿಂಸಾತ್ಮಕ ದಮನಗಳು ನಡೆದಾಗ ಮೌನ ವಹಿಸುವ OHCHR, ಭಾರತದ ಕಾನೂನುಬದ್ಧ ಕ್ರಮಗಳನ್ನು ಮಾತ್ರ ಪ್ರಶ್ನಿಸುತ್ತಿದೆ. ಜೊತೆಗೆ,  ಇಂತಹ ಇಬ್ಬಂದಿ ನೀತಿಗಳಿಂದಾಗಿ ಜಾಗತಿಕ ಸಂಸ್ಥೆಗಳ ಮೇಲಿರುವ ವಿಶ್ವಾಸಾರ್ಹತೆ ಕುಸಿಯುತ್ತಿದೆ ಎಂದು ಎಚ್ಚರಿಸಿದ ಭಾರತ, ವಿಶ್ವದ ಇತರ ಭಾಗಗಳಲ್ಲಿ ನಡೆಯುವ ಬೃಹತ್ ಪ್ರತಿಭಟನೆಗಳಿಗೂ ವಿಶ್ವಸಂಸ್ಥೆ ಸಮಾನ ಗಮನ ಹರಿಸಲಿ ಎಂದು ಕಿವಿಮಾತು ಹೇಳಿದೆ.

ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು ಏಕಾಗಿ?

ಮತದಾರರ ಪಟ್ಟಿ ಪರಿಷ್ಕರಣೆ (SIR) ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಹಮ್ಮಿಕೊಂಡಿದ್ದ ದೆಹಲಿ ಚಲೋ ಪ್ರತಿಭಟನೆಯ ವೇಳೆ ಸಾವಿರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಾಗರಿಕ ಸಮಾಜದ ಮುಖಂಡರು, ವಕೀಲರು ಹಾಗೂ ಪತ್ರಕರ್ತರನ್ನು ಸಾಮೂಹಿಕವಾಗಿ ಬಂಧಿಸಿರುವುದಕ್ಕೆ ವಿಶ್ವಸಂಸ್ಥೆಯ ವಕ್ತಾರ ತಮೀನ್ ಅಲ್-ಖೀತನ್ ಆತಂಕ ವ್ಯಕ್ತಪಡಿಸಿ, ತಕ್ಷಣವೇ ಅವರನ್ನು ಬಿಡುಗಡೆ ಮಾಡಲು ಕೋರಿದ್ದರು. ಇದರ ಬೆನ್ನಲ್ಲೇ ಭಾರತವು ಜಾಗತಿಕ ಮಟ್ಟದಲ್ಲಿ ತಕ್ಕ ಪ್ರತ್ಯುತ್ತರ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ