ನಿರ್ಮಲಾ ಸೀತಾರಾಮನ್  
ದೇಶ

ಜಾಗತಿಕ ಮಟ್ಟದಲ್ಲಿ ಬಡತನ ಇಳಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ: ವಿಶ್ವ ಬ್ಯಾಂಕ್ ವರದಿ

'ಇಂಡಿಯಾ ಪಾವರ್ಟಿ ಅಂಡ್ ಇಕ್ವಿಟಿ ಬ್ರೀಫ್: ಅಕ್ಟೋಬರ್ 2026' ಎಂಬ ವರದಿಯ ಪ್ರಕಾರ, ಈ ಅವಧಿಯಲ್ಲಿ ಭಾರತವು 49.6 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ. ಆದಾಯದಲ್ಲಿನ ಅಸಮಾನತೆಯ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ: ಜಾಗತಿಕ ಮಟ್ಟದಲ್ಲಿ ಬಡತನ ಪ್ರಮಾಣವನ್ನು ಅತ್ಯಂತ ವೇಗವಾಗಿ ತಗ್ಗಿಸಿದ ದೇಶಗಳ ಪೈಕಿ ಭಾರತವೂ ಒಂದಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯ ಪ್ರಮಾಣ 2011ರಲ್ಲಿ ಶೇ.57.7ರಷ್ಟಿದ್ದದ್ದು 2023ರಲ್ಲಿ ಶೇ.16.1ಕ್ಕೆ ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ವರದಿ ತಿಳಿಸಿದೆ.

ನಿನ್ನೆ ಬಿಡುಗಡೆಯಾದ 'ಇಂಡಿಯಾ ಪಾವರ್ಟಿ ಅಂಡ್ ಇಕ್ವಿಟಿ ಬ್ರೀಫ್: ಅಕ್ಟೋಬರ್ 2026' ಎಂಬ ವರದಿಯ ಪ್ರಕಾರ, ಈ ಅವಧಿಯಲ್ಲಿ ಭಾರತವು 49.6 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ. ಆದಾಯದಲ್ಲಿನ ಅಸಮಾನತೆಯ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.

2023ರಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಶೇ.10ರಷ್ಟು ಕಾರ್ಮಿಕರ ಸರಾಸರಿ ಆದಾಯವು ಅತಿ ಕಡಿಮೆ ಆದಾಯ ಹೊಂದಿರುವ ಶೇ.10ರಷ್ಟು ಕಾರ್ಮಿಕರ ಆದಾಯಕ್ಕಿಂತ 13 ಪಟ್ಟು ಹೆಚ್ಚಿತ್ತು ಎಂದು ವರದಿ ಉಲ್ಲೇಖಿಸಿದೆ.

ಹಣಕಾಸಿನ ಹಾಗೂ ಹಣಕಾಸೇತರ ಮಾನದಂಡಗಳೆರಡರಲ್ಲೂ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ವರದಿ ತಿಳಿಸಿದೆ.

ದಿನವೊಂದಕ್ಕೆ 3 ಡಾಲರ್ ಆದಾಯದ ಮಾನದಂಡದ ಆಧಾರದ ಮೇಲೆ ಅಳೆಯಲಾಗುವ ತೀವ್ರ ಬಡತನದ ಪ್ರಮಾಣವೂ ಶೇ.27.1ರಿಂದ ಶೇ.2.6ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.

ದಿನವೊಂದಕ್ಕೆ 4.20 ಡಾಲರ್ ಆದಾಯದ ಮಾನದಂಡದ ಆಧಾರದ ಮೇಲೆ ಅಳೆಯುವ ಬಡತನದ ಪ್ರಮಾಣವು 2026ರಲ್ಲಿ ಶೇ.14.2ರಷ್ಟಿದ್ದು, 2028ರ ವೇಳೆಗೆ ಶೇ.12.1ಕ್ಕೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

ಬಲವಾದ ಬಳಕೆ ವೆಚ್ಚದ ಬೆಳವಣಿಗೆ, ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು ಹಾಗೂ ಆಹಾರ ಸಬ್ಸಿಡಿ ಸೇರಿದಂತೆ ವಿಸ್ತರಿಸುತ್ತಿರುವ ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಸುಧಾರಣೆಗೆ ಕಾರಣವಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಸರ್ಕಾರದ ನಿರಂತರ ನೀತಿ ಪ್ರಯತ್ನಗಳು ಸ್ಪಷ್ಟ ಫಲಿತಾಂಶ ನೀಡುತ್ತಿದ್ದು, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಮತ್ತು ಹೆಚ್ಚಿನ ಆರ್ಥಿಕ ಅವಕಾಶಗಳಿಗೆ ಭದ್ರ ಬುನಾದಿ ಹಾಕಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದರಿಂದಾಗಿಯೇ ಎನ್‌ಡಿಎ ಸರ್ಕಾರ ಜನರ ವಿಶ್ವಾಸ ಮತ್ತು ನಾಗರಿಕರ ಜನಾದೇಶವನ್ನು ಗೆಲ್ಲುತ್ತಿದೆ ಎಂದು ತಿಳಿಸಿದ್ದಾರೆ.

ಎಚ್ಚರಿಕೆ ಅಂಶ

ಬಡತನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ಕಡಿಮೆ ಶಿಕ್ಷಣ ಹೊಂದಿರುವ, ಕಡಿಮೆ ಆಸ್ತಿ ಹೊಂದಿರುವ ಹಾಗೂ ಸ್ಥಿರ ಉದ್ಯೋಗಾವಕಾಶಗಳ ಸೀಮಿತ ಪ್ರವೇಶ ಹೊಂದಿರುವ ಕುಟುಂಬಗಳಲ್ಲಿ ಬಡತನ ಹೆಚ್ಚಾಗಿ ಕೇಂದ್ರೀಕೃತವಾಗುತ್ತಿದೆ ಎಂದು ವಿಶ್ವ ಬ್ಯಾಂಕ್ ವರದಿ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ..!

Hormuzನಲ್ಲಿ ತೈಲ ಟ್ಯಾಂಕರ್‌ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು..!

ನಂದಿನಿ ಗ್ರಾಹಕರ ಜೇಬಿಗೆ ಕತ್ತರಿ; ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಪರಿಷ್ಕರಿಸಿದ ಕೆಎಂಎಫ್, ಪ್ರತಿ ಲೀಟರ್‌ಗೆ 14 ರೂ. ಹೆಚ್ಚಳ..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಹವಾಮಾನ ಇಲಾಖೆ 'Yellow alert' ನಡುವೆಯೂ ಟೇಕಾಫ್, ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!

ಕಬ್ಬು ಬೆಳೆಗಾರರ ನೆರವಿಗೆ ಧಾವಿಸಿ, , ರೈತರ ಹೋರಾಟಕ್ಕೆ ಅಂತ್ಯ ಹಾಡಿ: ಪ್ರಧಾನಿ ಮೋದಿಗೆ CM ಡಿಕೆಶಿ ಮನವಿ