ಸಂಗ್ರಹ ಚಿತ್ರ 
ದೇಶ

ಟೋಲ್ ಬೂತ್‌ಗಳಲ್ಲಿ ನಗದು ಪಾವತಿಸುತ್ತಿದ್ದೀರಾ? ಹಣ ವಂಚಕರ ಪಾಲಾಗುತ್ತೆ ಎಚ್ಚರ...!

ಮುಖ್ಯವಾಗಿ ಹಳೆಯ ವಾಹನಗಳು, ಲಾರಿಗಳು ಹಾಗೂ ಫಾಸ್ಟ್‌ಟ್ಯಾಗ್‌ಗೆ ಇನ್ನೂ ಸಂಪೂರ್ಣವಾಗಿ ಬದಲಾಗದ ವಾಣಿಜ್ಯ ವಾಹನಗಳ ಚಾಲಕರು ಈ ವಂಚನೆಯಿಂದ ಹೆಚ್ಚು ತೊಂದರೆಗೊಳಗಾಗಿದ್ದಾರೆ.

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಬೂತ್‌ಗಳಲ್ಲಿ ನಗದು ರೂಪದಲ್ಲಿ ಹಣ ಪಾವತಿಸುವ ವಾಹನ ಸವಾರರಿಗೆ ಜಾರಿ ನಿರ್ದೇಶನಾಲಯ (ಇಡಿ) ಬಿಗ್ ಶಾಕ್ ನೀಡಿದೆ. ನೀವು ನೀಡುವ ನಗದು ಹಣ ನೇರವಾಗಿ ಸರ್ಕಾರಕ್ಕೆ ಸೇರುವ ಬದಲಿಗೆ ದೊಡ್ಡದೊಂದು ಹಗರಣದ ಜೇಬು ಸೇರುತ್ತಿರಬಹುದು ಎಂದು ಇಡಿ ಎಚ್ಚರಿಕೆ ನೀಡಿದೆ.

ಟೋಲ್‌ ನಿರ್ವಾಹಕರು ‘ಮೊಬ್ಡೇಟಾ’ ಮತ್ತು ‘ಎನಿ’ ಸೇರಿದಂತೆ ಅಧಿಕೃತವಲ್ಲದ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಗದು ಪಾವತಿಸುವ ವಾಹನಗಳಿಗೆ ನಕಲಿ ರಸೀದಿಗಳನ್ನು ಸೃಷ್ಟಿಸುತ್ತಿದ್ದರು ಎಂಬುದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ಈ ಮೂಲಕ ಸಂಗ್ರಹಿಸಿದ ಹಣ ಎನ್‌ಎಚ್‌ಎಐನ ಅಧಿಕೃತ ಲೆಕ್ಕಪತ್ರಗಳಿಗೆ ಸೇರುತ್ತಿರಲಿಲ್ಲ ಎಂದು ಇಡಿ ತಿಳಿಸಿದೆ.

ಹಲವು ರಾಜ್ಯಗಳ ವಿವಿಧ ಟೋಲ್‌ ಪ್ಲಾಜಾಗಳಲ್ಲಿ ಈ ಅಕ್ರಮ ವ್ಯವಸ್ಥಿತವಾಗಿ ವಂಚನೆ ನಡೆಯುತ್ತಿತ್ತು ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಮುಖ್ಯವಾಗಿ ಹಳೆಯ ವಾಹನಗಳು, ಲಾರಿಗಳು ಹಾಗೂ ಫಾಸ್ಟ್‌ಟ್ಯಾಗ್‌ಗೆ ಇನ್ನೂ ಸಂಪೂರ್ಣವಾಗಿ ಬದಲಾಗದ ವಾಣಿಜ್ಯ ವಾಹನಗಳ ಚಾಲಕರು ಈ ವಂಚನೆಯಿಂದ ಹೆಚ್ಚು ತೊಂದರೆಗೊಳಗಾಗಿದ್ದಾರೆ.

ಮಾನ್ಯ ಫಾಸ್ಟ್‌ಟ್ಯಾಗ್‌ ಹೊಂದಿರುವ ವಾಹನಗಳಿಗೂ ಕೆಲವೊಮ್ಮೆ ಬ್ಯಾರಿಯರ್‌ ಅಥವಾ ಸ್ಕ್ಯಾನರ್‌ ದೋಷದಿಂದ ನಗದು ಪಾವತಿಸುವಂತೆ ಮಾಡಲಾಗಿದ್ದು, ಆ ಹಣವನ್ನು ಬಳಿಕ ಬೇರೆಡೆಗೆ ವರ್ಗಾಯಿಸಲಾಗಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಸೆಪ್ಟೆಂಬರ್‌ 2ರಂದು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಇಡಿ ಅಧಿಕಾರಿಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿದರು.

ಲಖನೌನಿಂದ ಬಂದ ದೂರಿನ ಆಧಾರದ ಮೇಲೆ ಈ ಪ್ರಕರಣದ ತನಿಖೆ ಆರಂಭವಾಗಿದ್ದು, 2025ರ ಜನವರಿ 1ರಂದು ಎಫ್‌ಐಆರ್‌ ದಾಖಲಾಗಿತ್ತು. ಬಳಿಕ 2025ರ ಮೇ 19ರಂದು ಜಾರಿ ಪ್ರಕರಣ ಮಾಹಿತಿ ವರದಿ (ECIR) ದಾಖಲಿಸಲಾಯಿತು.

ಮಿರ್ಜಾಪುರದ ಅತ್ರೈಲಾ ಟೋಲ್‌ ಪ್ಲಾಜಾ ಸೇರಿದಂತೆ ದೇಶದ ವಿವಿಧ ಟೋಲ್‌ ಪ್ಲಾಜಾಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ನಕಲಿ ಟೋಲ್‌ ಸಂಗ್ರಹ ಪ್ರಕರಣದ ಸುತ್ತ ಇಡಿ ತನಿಖೆ ಕೇಂದ್ರೀಕೃತವಾಗಿದೆ.

2025ರ ಜನವರಿಯಲ್ಲೇ ಉತ್ತರ ಪ್ರದೇಶ ಪೊಲೀಸರು ಅತ್ರೈಲಾ ಶಿವ ಗುಲಾಮ್ ಟೋಲ್‌ ಪ್ಲಾಜಾದಲ್ಲಿ ಅಕ್ರಮ ಮೊಬೈಲ್‌ ಅಪ್ಲಿಕೇಶನ್‌ ಬಳಸಿ, ಫಾಸ್ಟ್‌ಟ್ಯಾಗ್‌ನಲ್ಲಿ ಸಾಕಷ್ಟು ಹಣವಿಲ್ಲದ ವಾಹನಗಳಿಂದ ಟೋಲ್‌ ಸಂಗ್ರಹಿಸಿ, ಆ ಹಣವನ್ನು ಎನ್‌ಎಚ್‌ಎಐನಿಂದ ಮರೆಮಾಚುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದರು.

ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿ, ಸುಮಾರು 100 ಟೋಲ್‌ ಪ್ಲಾಜಾಗಳಲ್ಲಿ ಈ ಅಧಿಕೃತವಲ್ಲದ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ. ಡಿಜಿಟಲ್‌ ದಾಖಲೆಗಳ ಪರಿಶೀಲನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅನಧಿಕೃತ ರಸೀದಿಗಳು ಪತ್ತೆಯಾಗಿವೆ.

ಎನ್‌ಎಚ್‌ಎಐನಿಂದ ಟೋಲ್‌ ಸಂಗ್ರಹದ ಜವಾಬ್ದಾರಿ ಪಡೆದಿರುವ ಕೆಲವು ಸಂಸ್ಥೆಗಳು ಹಾಗೂ ಮಧ್ಯವರ್ತಿಗಳ ಮೇಲೂ ತನಿಖಾಧಿಕಾರಿಗಳ ನಿಗಾ ಇದೆ. ಇದುವರೆಗೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸುಮಾರು ರೂ.1.03 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

ಟೋಲ್‌ ಸಂಗ್ರಹ ಸಂಸ್ಥೆಗಳ ಮೇಲೂ ಇಡಿ ಕಣ್ಣು

ಲಖನೌನಿಂದ ಬಂದ ದೂರಿನಲ್ಲಿ ಮಿರ್ಜಾಪುರದ ಅತ್ರೈಲಾ ಟೋಲ್‌ ಪ್ಲಾಜಾ ಸೇರಿದಂತೆ ದೇಶದ ವಿವಿಧ ಟೋಲ್‌ ಪ್ಲಾಜಾಗಳಲ್ಲಿ ನಡೆದ ದೊಡ್ಡ ಪ್ರಮಾಣದ ಅಕ್ರಮ ಟೋಲ್‌ ಸಂಗ್ರಹದ ಆರೋಪಗಳನ್ನು ಉಲ್ಲೇಖಿಸಲಾಗಿತ್ತು. ಇದರ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು.

ಎನ್‌ಎಚ್‌ಎಐನ ಅಧಿಕೃತ ವ್ಯವಸ್ಥೆಯಿಂದ ಟೋಲ್‌ ಸಂಗ್ರಹದ ಹಣವನ್ನು ಮರೆಮಾಚಲು ನಕಲಿ ರಸೀದಿಗಳನ್ನು ಸೃಷ್ಟಿಸುವ ಅಕ್ರಮ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ವಂಚನೆಯಲ್ಲಿ ಮಧ್ಯವರ್ತಿಗಳು ಹಾಗೂ ಎನ್‌ಎಚ್‌ಎಐನಿಂದ ಟೋಲ್‌ ಸಂಗ್ರಹದ ಗುತ್ತಿಗೆ ಪಡೆದ ಕೆಲವು ಸಂಸ್ಥೆಗಳ ಪಾತ್ರವೂ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!

ದೆಹಲಿ ಹಾಸ್ಟೆಲ್ ದುರಂತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ; 11 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ರಸ್ತೆ ಸಾರ್ವಜನಿಕ ಆಸ್ತಿ, ಕಾರು ಮಾಲೀಕರ ಸ್ವತ್ತಲ್ಲ: ಸಂಚಾರ ದಟ್ಟಣೆ ಕಡಿಮೆಯಾಗಬೇಕಾದರೆ ಪಾರ್ಕಿಂಗ್ ನಿಯಂತ್ರಣ ಅಗತ್ಯ; ಸಚಿವ ಕೃಷ್ಣ ಬೈರೇಗೌಡ (INTERVIEW)

Bigg Boss Kannada 13 ಆರಂಭ; ಎಲ್ಲಾ 16 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ!

KPSC ಹಗರಣ: ಶಾಂತಾ ಹೊಸಮನಿಗಾಗಿ ಸಿಐಡಿ ಶೋಧ; ಬಂಧನ ವಾರಂಟ್‌ಗೆ ಕೋರ್ಟ್ ಗೆ ಮನವಿ ಸಾಧ್ಯತೆ!