ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪನ ಚಿನ್ನದ ಕಿರೀಟ ಮಾಯ? Online Desk
ದೇಶ

ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪನ ಚಿನ್ನದ ಕಿರೀಟ ಮಾಯ? ಆಘಾತಕಾರಿ ಸತ್ಯ ಬಿಚ್ಚಿಟ್ಟ ತನಿಖಾ ವರದಿ!

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 446 ಗ್ರಾಂ ತೂಕದ ಚಿನ್ನದ ಕಿರೀಟ ನಾಪತ್ತೆಯಾಗಿರುವ ಆಘಾತಕಾರಿ ಸುದ್ದಿ ಭಾರಿ ಸಂಚಲನ ಮೂಡಿಸಿದೆ. ಆದರೆ, ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು ಕಿರೀಟವು ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಶಬರಿಮಲೆ (ಕೇರಳಂ): ಶಬರಿಮಲೆಯ ಶ್ರೀಕೋವಿಲ್ (ಗರ್ಭಗುಡಿ) ಬಾಗಿಲು ಮತ್ತು ದ್ವಾರಪಾಲಕರ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ನೆಪದಲ್ಲಿ 2019 ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿಧಾನಂ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗಿದ್ದ 446 ಗ್ರಾಂ ತೂಕದ ಚಿನ್ನದ ಕಿರೀಟ ನಾಪತ್ತೆಯಾಗಿರುವ ಆಘಾತಕಾರಿ ಸುದ್ದಿ ಭಾರಿ ಸಂಚಲನ ಮೂಡಿಸಿದೆ. ಆದರೆ, ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು ಕಿರೀಟವು ಸುರಕ್ಷಿತವಾಗಿದೆ ಎಂದು ನಂತರ ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಗೊಂದಲ ಸೃಷ್ಟಿಯಾಗಿದ್ದು ಹೇಗೆ?

ಕೇರಳಂ ಹೈಕೋರ್ಟ್ ನೇಮಿಸಿರುವ ಅಮಿಕಸ್ ಕ್ಯೂರಿ ಜಸ್ಟಿಸ್ ಕೆ.ಟಿ. ಶಂಕರನ್ ಅವರ ಮೇಲ್ವಿಚಾರಣೆಯಲ್ಲಿ ಶಬರಿಮಲೆಯ ಪವಿತ್ರ ಆಭರಣಗಳ (ತಿರುವಾಭರಣಂ) ಆಡಿಟ್ ಮತ್ತು ದಾಸ್ತಾನು ಪರಿಶೀಲನೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ, 2012 ರಲ್ಲಿ ತಮಿಳುನಾಡಿನ ಭಕ್ತರು ಕಾಣಿಕೆಯಾಗಿ ನೀಡಿದ್ದ 445.78 ಗ್ರಾಂ ತೂಕದ ಮೂಲ ಚಿನ್ನದ ಕಿರೀಟ ಸನ್ನಿಧಾನಂನ ಸ್ಟ್ರಾಂಗ್ ರೂಮ್‌ನಲ್ಲಿ ಕಂಡುಬಂದಿಲ್ಲ. ಅದರ ಬದಲಿಗೆ ಕೇವಲ 240 ಗ್ರಾಂ ತೂಕದ, ವಜ್ರದಂತಹ ಕಲ್ಲುಗಳನ್ನು ಹೊಂದಿದ್ದ ನಕಲಿ ಕಿರೀಟವೊಂದು ಪತ್ತೆಯಾಗಿತ್ತು. ಇದು ಕಿರೀಟ ಕಳ್ಳತನವಾಗಿದೆ ಎಂಬ ವದಂತಿಗೆ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಇನ್ನು, ಸುದ್ದಿ ಹರಡುತ್ತಿದ್ದಂತೆಯೇ ಎಚ್ಚೆತ್ತ ತಿರುವಾಂಕೂರು ದೇವಸ್ವಂ ಮಂಡಳಿ (TDB) ತಕ್ಷಣವೇ ತನಿಖೆಗೆ ಆದೇಶಿಸಿತು. ತದನಂತರ ತಿರುವಾಭರಣಂ ಕಮಿಷನರ್ ಆರ್. ರೆಜಿಲಾಲ್ ಅವರು ಆರಣ್ಮುಳದಲ್ಲಿರುವ ಮುಖ್ಯ ಸ್ಟ್ರಾಂಗ್ ರೂಮ್‌ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದರಂತೆ, ಮಧ್ಯಾಹ್ನದ ವೇಳೆಗೆ ವರದಿ ಸಲ್ಲಿಸಿದ ಅವರು, "ಅಯ್ಯಪ್ಪ ಸ್ವಾಮಿಯ ಮೂಲ ಚಿನ್ನದ ಕಿರೀಟವು ಎಲ್ಲೂ ನಾಪತ್ತೆಯಾಗಿಲ್ಲ, ಅದು ಆರಣ್ಮುಳದ ಸ್ಟ್ರಾಂಗ್ ರೂಮ್‌ನಲ್ಲಿ ಸಂಪೂರ್ಣ ಸುರಕ್ಷಿತವಾಗಿದೆ" ಎಂದು ದೃಢಪಡಿಸಿದರು. ಜೊತೆಗೆ, ನಿಯಮಾವಳಿಗಳ ಪ್ರಕಾರ ಅಮೂಲ್ಯ ಆಭರಣಗಳನ್ನು ಸನ್ನಿಧಾನಂನಿಂದ ಆರಣ್ಮುಳದ ಮುಖ್ಯ ಸ್ಟ್ರಾಂಗ್ ರೂಮ್‌ಗೆ ಸ್ಥಳಾಂತರಿಸಲಾಗಿತ್ತು, ಆದರೆ ದಾಖಲಾತಿ ಪ್ರಕ್ರಿಯೆಯ ಗೊಂದಲದಿಂದಾಗಿ ಈ ಕಳ್ಳತನದ ವದಂತಿ ಹರಡಿತ್ತು ಎಂದು ತಿಳಿದುಬಂದಿದೆ.

ಏತನ್ಮಧ್ಯೆ, ಕಿರೀಟ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದ್ದರೂ, ದಾಸ್ತಾನು ಪರಿಶೀಲನೆಯ ವೇಳೆ ಆರಣ್ಮುಳದ ಸ್ಟ್ರಾಂಗ್ ರೂಮ್‌ನಿಂದ ನಾಲ್ಕು ಸವರನ್ ತೂಕದ ಚಿನ್ನದ ಸರವೊಂದು ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಇದರೊಂದಿಗೆ ತಿರುವನಂತಪುರಂನ ಒಟಿಸಿ ಹನುಮಾನ್ ದೇವಸ್ಥಾನದಿಂದಲೂ ಅಮೂಲ್ಯ ಕಲ್ಲುಗಳನ್ನು ಹೊಂದಿದ್ದ ಬೆಳ್ಳಿಯ ಕೊಂಬುಗಳು ನಾಪತ್ತೆಯಾಗಿವೆ. ಹೀಗಾಗಿ, ಶಬರಿಮಲೆಯ ಆಡಳಿತ ಮಂಡಳಿಯಲ್ಲಿರುವ ವ್ಯವಸ್ಥಿತ ದೋಷಗಳು ಮತ್ತು ಭದ್ರತಾ ಲೋಪಗಳ ಕುರಿತು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ತೀವ್ರ ಕಳಕಳಿ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆ ಮುಂದುವರಿಸಲು ಸೂಚಿಸಿದ್ದಾರೆ.

ಇನ್ನು, ಈ ಘಟನೆ ಇಷ್ಟೊಂದು ಗಂಭೀರ ಚರ್ಚೆಗೆ ಕಾರಣವಾಗಲು ಶಬರಿಮಲೆಯಲ್ಲಿ ಈ ಹಿಂದೆ ನಡೆದಿದ್ದ ನೈಜ ಕಳ್ಳತನದ ಪ್ರಕರಣಗಳೇ ಕಾರಣ. 2025ರ ಕೊನೆಯಲ್ಲಿ ಗರ್ಭಗುಡಿಯ ದ್ವಾರಪಾಲಕರ ವಿಗ್ರಹಗಳಿಗೆ ಅಳವಡಿಸಲಾಗಿದ್ದ 4.5 ಕೆಜಿ ತೂಕದ ಚಿನ್ನದ ಲೇಪಿತ ತಾಮ್ರದ ಫಲಕಗಳನ್ನು ಕಳವು ಮಾಡಿ, ನಕಲಿ ಫಲಕಗಳನ್ನು ಅಳವಡಿಸಲಾಗಿತ್ತು. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಹಾಗೂ ಮಾಜಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರನ್ನು ಈಗಾಗಲೇ ಬಂಧಿಸಿ ಎಸ್ಐಟಿ ವಿಚಾರಣೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ವಿಪಕ್ಷಗಳು: ಸಂಸತ್ತಿನ ಉಭಯ ಸದನಗಳಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಲು ಮುಂದು!

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 160 ಬಾಂಗ್ಲಾದೇಶಿಗರ ಗಡಿಪಾರು!

'ಈ ದೇಶವನ್ನು ದೇವರೇ ಕಾಪಾಡಬೇಕು; 5 ಗಂಟೆಯ ಪ್ರಯಾಣ ನರಕ': ರೈಲಿನಲ್ಲಾದ ಕಹಿ ಅನುಭವ ಬಿಚ್ಚಿಟ್ಟ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ!

ಲೇಟ್ ಆದರೂ, ಸರಿಯಾದ ನಿರ್ಧಾರ: ರಾಜ್ಯ BJP ಉಸ್ತುವಾರಿ ರಾಧಾ ಮೋಹನದಾಸ್ ಬದಲಾವಣೆಗೆ 2 ಕಾರಣ ನೀಡಿದ ಯತ್ನಾಳ್