ಬಾಲಕ ಮೇಲೆ ಹರಿದ ಎಸ್ ಯುವಿ ಕಾರು 
ದೇಶ

Video: ತಾಯಿಯ ಕಣ್ಣೆದುರೇ 3 ವರ್ಷದ ಬಾಲಕನ ಮೇಲೆ ಹರಿದ SUV, ದಾರುಣ ಸಾವು; CCTV ದೃಶ್ಯ ವೈರಲ್

ರಾಜಸ್ಥಾನದ ಸಾಂಚೋರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಾಯಿಯ ಕಣ್ಣೆದುರೇ 3 ವರ್ಷದ ಬಾಲಕನಿಗೆ ಸ್ಕಾರ್ಪಿಯೋ SUV ಡಿಕ್ಕಿ ಹೊಡೆದು, ಬಳಿಕ ಸುಮಾರು 10 ಅಡಿ ದೂರ ಎಳೆದೊಯ್ದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ ಎಂದು..

ಜೈಸಲ್ಮೇರ್: ಆಟವಾಡುತ್ತಾ ದಿಢೀರ್ ರಸ್ತೆಗೆ ಬಂದ ಪುಟ್ಟ ಬಾಲಕನ ಮೇಲೆ SUV ಕಾರು ಹರಿದ ಪರಿಣಾಮ 3 ವರ್ಷದ ಪುಟ್ಟ ಬಾಲಕ ದಾರುಣ ಸಾವನ್ನಪ್ಪಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ.

ರಾಜಸ್ಥಾನದ ಸಾಂಚೋರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಾಯಿಯ ಕಣ್ಣೆದುರೇ 3 ವರ್ಷದ ಬಾಲಕನಿಗೆ ಸ್ಕಾರ್ಪಿಯೋ SUV ಡಿಕ್ಕಿ ಹೊಡೆದು, ಬಳಿಕ ಸುಮಾರು 10 ಅಡಿ ದೂರ ಎಳೆದೊಯ್ದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮೃತ ಬಾಲಕನನ್ನು ಇಂದ್ರಾ ಕಾಲೊನಿ ನಿವಾಸಿ ಶೈತಾನ್ ಸಿಂಗ್ ಅವರ ಏಕೈಕ ಪುತ್ರ ಜೆಂಪಾ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು?

ಶೈತಾನ್ ಸಿಂಗ್ ಮತ್ತು ಅವರ ಪತ್ನಿ ಆರತಿ ದೇವಿ ಮುಖ್ಯ ಬಸ್ ನಿಲ್ದಾಣದ ಸಮೀಪ ಸೌಂದರ್ಯ ಪ್ರಸಾಧನಗಳ ಅಂಗಡಿ ನಡೆಸುತ್ತಿದ್ದಾರೆ. ಅವರ ಮನೆ ಅಂಗಡಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ದಂಪತಿಯ ಇಬ್ಬರು ಪುತ್ರಿಯರು ಶಾಲೆಗೆ ತೆರಳುತ್ತಿದ್ದರೆ, ಜೆಂಪಾ ಪ್ರತಿದಿನ ಪೋಷಕರೊಂದಿಗೆ ಅಂಗಡಿಗೆ ಬರುತ್ತಿದ್ದ.

ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ಆರತಿ ದೇವಿ ಇಬ್ಬರು ಪುತ್ರಿಯರನ್ನು ಶಾಲೆಗೆ ಕಳುಹಿಸಿದ ಬಳಿಕ ಜೆಂಪಾನನ್ನು ಅಂಗಡಿಗೆ ಕರೆತಂದಿದ್ದರು. ದಂಪತಿ ಅಂಗಡಿ ಕೆಲಸದಲ್ಲಿ ನಿರತರಾಗಿದ್ದಾಗ ಬಾಲಕ ಅಂಗಡಿಯೊಳಗೆ ಆಟವಾಡುತ್ತಿದ್ದ. ಇದ್ದಕ್ಕಿದ್ದಂತೆ ಆತ ರಸ್ತೆಯತ್ತ ಓಡಿ ಹೋಗಿದ್ದಾನೆ.

ಆತನ ಹಿಂದೆ ಆರತಿ ದೇವಿ ಓಡಿದರೂ, ಅಷ್ಟರಲ್ಲಿ ಬಸ್ ನಿಲ್ದಾಣದ ಕಡೆಯಿಂದ ಬಂದ ಸ್ಕಾರ್ಪಿಯೋ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕನನ್ನು ವಾಹನ ಸುಮಾರು 10 ಅಡಿ ದೂರ ಎಳೆದೊಯ್ದಿದೆ ಎನ್ನಲಾಗಿದೆ.

ಸಮೀಪದಲ್ಲೇ ಬಳೆ ಅಂಗಡಿ ನಡೆಸುತ್ತಿದ್ದ ಬಾಲಕನ ಅಜ್ಜಿ ಅನ್ಸಿ ದೇವಿ ಕೂಡಲೇ ಸ್ಥಳಕ್ಕೆ ಧಾವಿಸಿ, ವಾಹನದ ಕೆಳಗೆ ಸಿಲುಕಿದ್ದ ಜೆಂಪಾನನ್ನು ಹೊರತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಕುಟುಂಬಸ್ಥರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಘಟನೆಯ ದೃಶ್ಯಗಳು ಸಮೀಪದ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ಹಾಗೂ ಚಾಲಕನ ಪತ್ತೆಗೆ ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ತಂತ್ರಜ್ಞಾನ, ಆವಿಷ್ಕಾರದಿಂದ ಹೊಸ ವೇಗ, ಭಾರತದ ಆರ್ಥಿಕ ಬೆಳವಣಿಗೆ ಶೇ.10 ಮೀರಬಹುದು: ನಿರ್ಮಲಾ ಸೀತಾರಾಮನ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ

ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ? ಸತ್ಯಾಂಶವನ್ನು ದೇಶದ ಮುಂದೆ ಬಹಿರಂಗಪಡಿಸಿ: ಚುನಾವಣಾ ಆಯೋಗಕ್ಕೆ ಕುಮಾರಸ್ವಾಮಿ ಆಗ್ರಹ

ಟಾರ್ಗೆಟ್‌ 180: ಕುಮಾರಸ್ವಾಮಿ, ನನ್ನ ಮಧ್ಯೆ CM ರೇಸ್‌ ಸೃಷ್ಟಿಸಬೇಡಿ; ಮುಖ್ಯಮಂತ್ರಿ ಯಾರು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತೆ: ವಿಜಯೇಂದ್ರ