ಆರ್ ಅಶೋಕ್ 
ರಾಜಕೀಯ

ಬರಿಗಾಲಲ್ಲಿ ನಡೆವ ಬಡ ಮಕ್ಕಳ ಹೆತ್ತವರ ಶಾಪ ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೆ ಇರುತ್ತಾ? ಆರ್. ಅಶೋಕ್

ಲಕ್ಷಾಂತರ ರೂಪಾಯಿಯ ದುಬಾರಿ ಶೋಕಿ, ಕುಮಾರಕೃಪಾ ನವೀಕರಣ, ಹೆಲಿಕಾಪ್ಟರ್ ವೈಭೋಗಕ್ಕೆ ಬೊಕ್ಕಸದಲ್ಲಿ ಬೇಕಾದಷ್ಟು ಹಣವಿದೆ. ಆದರೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಒಂದು ಜೊತೆ ಶೂ, ಒಂದು ಸ್ಕೂಲ್ ಬ್ಯಾಗ್ ಕೊಡಲು, ಪಾಠ ಮಾಡುವ ಶಿಕ್ಷಕರಿಗೆ ಕನಿಷ್ಠ ಸಂಬಳ ನೀಡಲು ನಿಮ್ಮ ಹತ್ತಿರ ಹಣವಿಲ್ಲವೇ?

ಬೆಂಗಳೂರು: ಖಜಾನೆ ಖಾಲಿ ಮಾಡಿದ ಲೂಟಿಕೋರರ ದುರಾಸೆಗೆ ಬಡ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯವೇ ಬಲಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಲಕ್ಷ ಲಕ್ಷ ಬೆಲೆಯ Louis Vuitton ಶಾಲು ಹೊದ್ದು, ಕೋಟಿ ಕೋಟಿ ವೆಚ್ಚದ ಹೆಲಿಕಾಪ್ಟರ್‌ನಲ್ಲಿ ಹಾರಾಡುವ ರಿಯಲ್ ಎಸ್ಟೇಟ್ ಸಿಎಂ ಡಿಕೆ ಶಿವಕುಮಾರ್ ಅವರೇ, ಬಡವರ ಮಕ್ಕಳ ಬರಿಗಾಲು ನಿಮಗೆ ಹೇಗೆ ತಾನೆ ಕಂಡೀತು?ಹರಿದ ಬ್ಯಾಗ್ ಹೆಗಲ ಮೇಲೆ ಹೊತ್ತು, ಬರಿಗಾಲಲ್ಲಿ ಶಾಲೆಗೆ ನಡೆಯುತ್ತಿರುವ 23,000 ಬಡ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಶಾಪ ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರುತ್ತದೆಯೇ? ನಿಮ್ಮ ಭ್ರಷ್ಟ, ದರಿದ್ರ ಹಾಗೂ ನಿರ್ದಯಿ ಆಡಳಿತದ ಅಸಲಿ ಮುಖವಾಡ ಇಲ್ಲಿದೆ ನೋಡಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

23,000 ಬಡ ಶಾಲಾ ಮಕ್ಕಳಿಗೆ ಶೂ ಇಲ್ಲ, ಬ್ಯಾಗ್ ಇಲ್ಲ: ಶೈಕ್ಷಣಿಕ ವರ್ಷ ಪ್ರಾರಂಭವಾಗಿ 4 ತಿಂಗಳು ಕಳೆದರೂ ಜಿಬಿಎ (GBA) ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಸ್ವೆಟರ್ ಹಾಗೂ ಬ್ಯಾಗ್ ಕೊಡಲು ನಿಮ್ಮ ಹತ್ತಿರ ದುಡ್ಡಿಲ್ಲ! ಕಮಿಷನ್ ದಂದೆಯಲ್ಲಿ ಖಜಾನೆ ಖಾಲಿ ಮಾಡಿ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ ಕಾರಣ ಸತತ 3 ಬಾರಿ ಟೆಂಡರ್‌ಗಳೇ ವಿಫಲವಾಗಿವೆ.

48,000 ಅತಿಥಿ ಶಿಕ್ಷಕರ ಹೊಟ್ಟೆಗೆ ಹೊಡೆದಿದ್ದೀರಿ: ಸರ್ಕಾರಿ ಶಾಲೆಗಳ ಬೆನ್ನೆಲುಬಾಗಿರುವ 48,000 ಅತಿಥಿ ಶಿಕ್ಷಕರಿಗೆ ಕಳೆದ 3-4 ತಿಂಗಳಿಂದ ಗೌರವ ಸಂಭಾವನೆಯನ್ನೇ ನೀಡಿಲ್ಲ. ಬಡ ಶಿಕ್ಷಕರು ಹಬ್ಬಗಳನ್ನು ಖಾಲಿ ಜೇಬಿನಲ್ಲಿ ಆಚರಿಸುವಂತೆ ಮಾಡಿ, ಕನಿಷ್ಠ ಸಂಸಾರ ತೂಗಿಸುವುದಕ್ಕೂ ಪರದಾಡುತ್ತಿರುವ ಶಿಕ್ಷಕರ ಕಣ್ಣೀರಿನ ಮೇಲೆ ಅಧಿಕಾರದ ಮೆರವಣಿಗೆ ಮಾಡುತ್ತಿದ್ದೀರಿ.

ನಿಮ್ಮ ಲಕ್ಷಾಂತರ ರೂಪಾಯಿಯ ದುಬಾರಿ ಶೋಕಿ, ಕುಮಾರಕೃಪಾ ನವೀಕರಣ, ಹೆಲಿಕಾಪ್ಟರ್ ವೈಭೋಗಕ್ಕೆ ಬೊಕ್ಕಸದಲ್ಲಿ ಬೇಕಾದಷ್ಟು ಹಣವಿದೆ. ಆದರೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಒಂದು ಜೊತೆ ಶೂ, ಒಂದು ಸ್ಕೂಲ್ ಬ್ಯಾಗ್ ಕೊಡಲು, ಪಾಠ ಮಾಡುವ ಶಿಕ್ಷಕರಿಗೆ ಕನಿಷ್ಠ ಸಂಬಳ ನೀಡಲು ನಿಮ್ಮ ಹತ್ತಿರ ಹಣವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಡವರ ಹೆಗಲೇರಿ ಅಧಿಕಾರಕ್ಕೆ ಬಂದು, ಈಗ ಅದೇ ಬಡ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನೇ ಕತ್ತಲೆಗೆ ತಳ್ಳುತ್ತಿರುವ ನಿಮ್ಮ ಸರ್ಕಾರಕ್ಕೆ ನಾಚಿಕೆಯಾಗಬೇಕು. ನಿಮ್ಮ ಈ ಲಜ್ಜೆಗೆಟ್ಟ ಆಡಳಿತದ ಅಂತ್ಯದ ದಿನಗಳು ಹತ್ತಿರವಾಗಿವೆ. ಮುಖ್ಯಮಂತ್ರಿಗಳೇ, ತಕ್ಷಣವೇ ಪ್ರತಿಯೊಬ್ಬ ಸರ್ಕಾರಿ ಶಾಲಾ ವಿದ್ಯಾರ್ಥಿಗೆ ಶೂ, ಬ್ಯಾಗ್ ತಲುಪಿಸಿ ಹಾಗೂ ಅತಿಥಿ ಶಿಕ್ಷಕರ ಬಾಕಿ ಗೌರವ ಸಂಭಾವನೆಯನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ನಿಮ್ಮ ಹೆಲಿಕಾಪ್ಟರ್ ಶೋಕಿಗೆ ಬಡ ವಿದ್ಯಾರ್ಥಿಗಳು ಮತ್ತು ಪೋಷಕರೇ ತಕ್ಕ ಪಾಠ ಕಲಿಸಲಿದ್ದಾರೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!