ಇಂದು ಯಾರಾದರೂ ಯುವಕರ ಕೈನಲ್ಲಿ ಸ್ಮಾರ್ಟ್ಫೋನಿದ್ದರೆ ವ್ಯಾಟ್ಸ್ ಆ್ಯಪ್ ಹಾಗೂ ಮೆಸೆಂಜರ್ ಇಲ್ಲದವರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗುತ್ತದೆ.
ಬೆರಳೆಣಿಕೆಯ ಬುದ್ಧಿಜೀವಿಗಳು ಇದರ ಸಹವಾಸದಿಂದ ದೂರವಿರಲು ಪ್ರಯತ್ನಿಸಿರಬಹುದು. ಅಥವಾ ಯಾವುದೋ ಕೆಟ್ಟ ನೆನಪುಗಳಿಗೆ ಕಾರಣವಾಗಿದ್ದರೆ ಈ ಅಪ್ಲಿಕೇಷನ್ನಿಂದ ದೂರವಿರಬಹುದು ಅಷ್ಟೆ. ಆದರೆ ಈ ಸಾಮಾಜಿಕ ತಾಣಗಳು ಯುವ ಪೀಳಿಗೆಯ ಅವಿಭಾಜ್ಯ ಅಂಗವಾಗುತ್ತಿದೆ. ಬೇಡವೆಂದರೂ ಅದರ ಮಾಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ.
ಇಂಥ ಸಂದರ್ಭದಲ್ಲಿ ನಿಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್ ಟಾಪ್ಗಳಿಗೂ ವಾಟ್ಸ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಈ ಕೆಳಗೆ ಹೇಳಿದಂತೆ ಮಾಡಬೇಕಾಗುತ್ತದೆ.
· ನಿಮ್ಮ ಲ್ಯಾಪ್ಟಾಪ್ಗಳಿಗೂ ಅಥವಾ ಡೆಸ್ಕ್ ಟಾಪ್ಗೆ ಬ್ಲ್ಯೂಸ್ಟಾಕ್ಸ್ ಆ್ಯಪ್ ಪ್ಲೇಯರ್ ಹಾಕಿಕೊಳ್ಳಬೇಕು, ಇದರ ಲಿಂಕ್ ಇಲ್ಲಿದೆ. (http://www.bluestacks.com/bstk-download-success-2htm)
· ಆಮೇಲೆ ಇದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.
· ಇದೇ ಸಂದರ್ಭದಲ್ಲಿ ವಾಟ್ಸ್ಆ್ಯಪ್ನ ಎಪಿಕೆ ಫೈಲ್ ಡೌನ್ಲೋಡ್ ಮಾಡಿಕೊಳ್ಳಿ. ಇದರ ಲಿಂಕ್ ಇಲ್ಲಿದೆ. (http://www.whatsapp.com/android/current/whatsApp.apk)
· ಬ್ಲ್ಯೂಸ್ಟಾಕ್ಸ್ ಇನ್ಸ್ಟಾಲ್ ಆದ ಬಳಿಕ ವಾಟ್ಸ್ ಆ್ಯಪ್ ಫೈಲ್ ಓಪನ್ ಮಾಡಿ.
· ನಿಮ್ಮ ಫೋನ್ ಸಂಖ್ಯೆ ಅಲ್ಲಿ ದಾಖಲಿಸಿ. ಇದಾದ ಬಳಿಕ ಎಸ್ಎಂಎಸ್ ವೆರಿಫಿಕೇಶನ್ ಕೇಳುತ್ತದೆ. ಆದರೆ ಕಂಪ್ಯೂಟರ್ನಲ್ಲಿ ಎಸ್ಎಂಎಸ್ ವೆರಿಫಿಕೇಷನ್ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ 5 ನಿಮಿಷ ಕಾಯಬೇಕು.
· ಇದಾದ ನಂತರ 'ಕಾಲ್ ಮಿ' ಎಂಬ ಆಪ್ಶನ್ ಆಯ್ಕೆ ಮಾಡಿ, ವಾಟ್ಸ್ ಆ್ಯಪ್ ಸೇವಾ ಕೇಂದ್ರದಿಂದ ಕರೆ ಬರುತ್ತದೆ.
· ಆಗ ಅವರು ಹೇಳುವ 6 ಅಂಕಿಗಳನ್ನು ದಾಖಲಿಸಿ ಖಾತ್ರಿ ಮಾಡಿಕೊಳ್ಳಿ.
· ಆ ನಂತರ ನಿಮಗೆ ಎಲ್ಲ ವಾಟ್ಸ್ ಆ್ಯಪ್ಚಾಟ್ಗಳು ಇಲ್ಲಿ ದೊರೆಯುತ್ತವೆ.
· ಇಲ್ಲಿ ಒಂದು ದುರಂತವಿದೆ, ನೀವು ಒಂದು ವಾಟ್ಸ್ಆ್ಯಪ್ ಅಕೌಂಟ್ ಅನ್ನು ಎರಡು ಡಿವೈಸ್ನಲ್ಲಿ ಬಳಸಲು ಸಾಧ್ಯವಿಲ್ಲ.
· ಆದ್ದರಿಂದ ಬೇರೊಂದು ಮೊಬೈಲ್ ಸಂಖ್ಯೆಯನ್ನು ಇಲ್ಲಿ ಹಾಕುವುದು ಒಳಿತು.
· ನಿಮ್ಮ ಮೊಬೈಲ್ನಲ್ಲಿನ ಕಾಂಟ್ಯಾಕ್ಟ್ಗಳು ಸಿಗುವುದಿಲ್ಲ. ಇದಕ್ಕಾಗಿ ಡಾಟಾ ಬೇಸ್ ಬಳಸಬಹುದು.
· ಕಚೇರಿ ಬಳಕೆಗೆ ಇದು ಹೇಳಿ ಮಾಡಿಸಿದಂತಿದೆ.
· ಈ ಅಪ್ಲಿಕೇಷನ್ ಎಲ್ಲ ವಿಂಡೋಸ್ ವಿಸ್ತಾ ಹಾಗೂ 8 ನಂತರದ ಆಪರೇಟಿಂಗ್ ಸಿಸ್ಟಮ್ನಲ್ಲಿ ಕೆಲಸ ಮಾಡುತ್ತದೆ.
· ವಾಟ್ಸ್ಆ್ಯಪ್ ರೀತಿಯಲ್ಲಿ ಉಳಿದ ಚಾಟಿಂಗ್ ಆ್ಯಪ್ಗಳಾದ ಹೈಕ್, ವಿಚಾಟ್ಗೂ ಇದನ್ನು ಬಳಸಬಹುದು. ಅವುಗಳನ್ನೂ ಇದೇ ರೀತಿಯಲ್ಲಿ ಎಪಿಕೆ ಫೈಲ್ಗಳ ಮೂಲಕ ಬಳಸಬಹುದು.