ಕಿಡ್ನಿದಾನ (ಸಾಂದರ್ಭಿಕ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಅವಳ ಪತಿಗೆ ಇವಳ ಕಿಡ್ನಿ, ಇವಳ ಪತಿಗೆ ಅವಳ ಕಿಡ್ನಿ

ಕಿಡ್ನಿಗಳನ್ನು ಪರಸ್ಪರ ದಾನ ಮಾಡಿರುವ ಮಹಿಳೆಯರಿಬ್ಬರು ಈಗ ಉತ್ತಮ ಗೆಳೆತಿಯರೂ ಆಗಿದ್ದಾರೆ. ಅಂದರೆ ಮಹಿಳೆಯೊಬ್ಬರು ಬೇರೊಬ್ಬ ಮಹಿಳೆಯಿಂದ ಕಿಡ್ನಿ ಪಡೆದು ಪತಿಗೆ ಕಸಿ ಮಾಡಿಸಿದ್ದಾರೆ...

ಪುರಾತನ ಕಾಲದಲ್ಲಿದ್ದ `ವಿನಿಮಯ ಪದ್ಧತಿ' ಈಗ ಮಾನವ ಅಂಗಾಗಗಳಿಗೆ ಬಂದಿದೆ! ಕಿಡ್ನಿಗಳನ್ನು ಪರಸ್ಪರ ದಾನ ಮಾಡಿರುವ ಮಹಿಳೆಯರಿಬ್ಬರು ಈಗ ಉತ್ತಮ ಗೆಳೆತಿಯರೂ
ಆಗಿದ್ದಾರೆ. ಅಂದರೆ ಮಹಿಳೆಯೊಬ್ಬರು ಬೇರೊಬ್ಬ ಮಹಿಳೆಯಿಂದ ಕಿಡ್ನಿ ಪಡೆದು ಪತಿಗೆ ಕಸಿ ಮಾಡಿಸಿದ್ದಾರೆ.
ಹಾಗೆಯೇ ಕಿಡ್ನಿದಾನ ಮಾಡಿದ ಮಹಿಳೆಯ ಪತಿಗೆ ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಾರೆ. ಈ ಮೂಲಕ ಇಬ್ಬರು ಪರಸ್ಪರ ಸಹಾಯ ಮಾಡಿಕೊಂಡು ಸಾವಿನ ಅಂಚಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಇದಕ್ಕೆ ಸಹಕಾರ ನೀಡಿ, ಯಶಸ್ವಿಯಾಗಿದ್ದು ಬೆಂಗಳೂರಿನ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆ. ಗುಲ್ಬರ್ಗಾದ ಭೀಮಸೇನ್ ಜೋಶಿ ಮತ್ತು ದೊಡ್ಡಬಳ್ಳಾಪುರದ ವೇಣುಗೋಪಾಲ್ ಇಬ್ಬರೂ ಕಿಡ್ನಿ ತೊಂದರೆಗೆ ಒಳಗಾಗಿದ್ದರು. ಇವರಿಬ್ಬರಿಗೂ ಕಿಡ್ನಿ ಕಸಿ ಅಗತ್ಯವಿತ್ತು. ಭೀಮಸೇನ್ ಜೋಶಿಗೆ ವೇಣುಗೋಪಾಲ್ ಪತ್ನಿ ಸಾವಿತ್ರಿ ಅವರು ಕಿಡ್ನಿ ನೀಡಿದ್ದಾರೆ. ಅದೇ ರೀತಿ ವೇಣುಗೋಪಾಲ್‍ಗೆ ಭೀಸೇನ್ ಜೋಶಿ ಪತ್ನಿ ಅನುರಾಧ ಅವರು ಕಿಡ್ನಿ ದಾನ ಮಾಡಿದ್ದಾರೆ.
ಕಿಡ್ನಿ ಸಮಸ್ಯೆಗೆ ಒಳಗಾಗಿದ್ದ ಭೀಮಸೇನ್ ಜೋಶಿ ಮತ್ತು ವೇಣುಗೋಪಾಲ್ ಅವರು ನಾಲ್ಕು ವರ್ಷಗಳಿಂದ ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಪತ್ನಿ ಅನುರಾಧ ಅವರೇ ಕಿಡ್ನಿ ನೀಡಲು ನಿರ್ಧರಿಸಿದ್ದರು. ಆದರೆ, ರಕ್ತದ ಗುಂಪು ಹೊಂದಾಣಿಕೆ ಸಾಧ್ಯ ಇರಲಿಲ್ಲ. ಆದ್ದರಿಂದ ಇವರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಕಿಡ್ನಿ ದಾನಿಗಳನ್ನು ಹುಡುಕುತ್ತಿದ್ದರು. ಹಾಗೆಯೇ ವೇಣುಗೋಪಾಲ್ ಅವರ ಸಮಸ್ಯೆಯೂ ಇದೇ ಆಗಿತ್ತು. ಇದನ್ನು ತಿಳಿದು ಆಸ್ಪತ್ರೆಯ ವೈದ್ಯರು ಎರಡೂ ಕುಟುಂಬಗಳನ್ನು ಸಂಪರ್ಕಿಸಿ ಪರಿಸ್ಪರ ಕಿಡ್ನಿ ವಿನಿಮಯಕ್ಕೆ ಒಪ್ಪಿಸಿದರು.
ಅದರಂತೆ ಸಿದ್ಧತೆಯೂ ಆಯಿತು. ಕೇವಲ ರು.10 ಲಕ್ಷಗಳ ವೆಚ್ಚದಲ್ಲಿ ಇಬ್ಬರಿಗೂ ಕಿಡ್ನಿ ಕಸಿ ಚಿಕಿತ್ಸೆಯೂ ಆಗಿ ಅವರೆಲ್ಲರೂ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಯೋಗದಲ್ಲಿ ಯಶಸ್ವಿಯಾದ ಆಸ್ಪತ್ರೆಯ ಹಿರಿಯ ತಜ್ಞವೈದ್ಯ ಡಾ. ಅಜಿತ್ ಕೆ. ಹುಯಿಲಗೋಳ್ ಮತ್ತು ತಜ್ಞ ವೈದ್ಯ ಡಾ. ಸಂಕರನ್ ಸುಂದರ್ ಯಶೋಗಾಥೆಯನ್ನು ವಿವರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ದಾನಿ ಅನುರಾಧ, ಕಿಡ್ನಿದಾನ ಮಹಾದಾನವಾಗಿದ್ದು, ಇದಕ್ಕೆ ಜನರು ಮುಂದಾಗಬೇಕು. ಕಿಡ್ನಿದಾನದ ನಂತರವೂ ದಾನಿಗಳು ಸಹಜ ಜೀವನ ನಡೆಸಬಹುದಾಗಿದ್ದು, ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಮತ್ತೊಬ್ಬ ಕಿಡ್ನಿದಾನಿ ಸಾವಿತ್ರಿ ಮಾತನಾಡಿ, ನನ್ನ ಕಿಡ್ನಿಯನ್ನು ಮತ್ತೊಬ್ಬರಿಗೆ ದಾನ ಮಾಡಿ ನನ್ನ ಪತಿಯನ್ನು ಉಳಿಸಿಕೊಳ್ಳುತ್ತೇನೆಂದು ಕನಸಿನಲ್ಲೂ ಭಾವಿಸರಲಿಲ್ಲ. ನಿಜಕ್ಕೂ ಇದು ವೈದ್ಯ ಲೋಕದ ಕೊಡುಗೆ ಹಾಗೂ ದೇವರ ದಯೆ ಎಂದರು.
ಕಿಡ್ನಿದಾನಕ್ಕೂ ಏಕಗವಾಕ್ಷಿ ಆಗಲಿ: ಡಾ.ಅಜಿತ್
ಕಿಡ್ನಿ ಕಸಿಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಗಳನ್ನು ಕೊಂಚ ಸಡಿಲ ಮಾಡಬೇಕು. ಹಾಗೆಯೇ ಇದಕ್ಕೆ ಇರುವ ಅನುಮತಿಗಳು ಏಕ ಗವಾಕ್ಷಿ ಮೂಲಕ ಸಿಗುವಂತೆ ಮಾಡಬೇಕು ಎಂದು ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯ ಮುಖ್ಯ ಶಸuಉ ಚಿಕಿತ್ಸಕ ಡಾ. ಅಜಿತ್ ಕೆ.ಹುಯಿಲಗೋಳ್ ಹೇಳಿದರು.
ಕುಟುಂಬದೊಳಗಿನ ವ್ಯಕ್ತಿಗಳು ಕಿಡ್ನಿದಾನ ಮಾಡುವುದಕ್ಕೆ ಕಾನೂನಿನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಕುಟುಂಬಕ್ಕೆ ಸಂಬಂಧಿಸಿದವರು ಕಿಡ್ನಿದಾನ ಮಾಡ ಬೇಕಾದರೆ ನಿಯಮಗಳು ಕಠಿಣವಾಗಿವೆ. ಅದರಲ್ಲೂ ಕಿಡ್ನಿ ದಾನ ಮಾಡುವವರು ಮತ್ತು ಪಡೆಯುವರು ಇಬ್ಬರ ಆರ್ಥಿಕ ಸ್ಥಿತಿ ಸಮನಾಗಿರಬೇಕು. ಹೀಗಾಗಿ ಅನೇಕ ಕಿಡ್ನಿದಾನಿಗಳು ಮುಂದೆ ಬಂದರೂ ನಿಯಮಗಳಿಂದಾಗಿ ತಿರಸ್ಕಾರವಾಗುತ್ತಿದೆ. ಆದ್ದರಿಂದ ಗ್ರಾಮೀಣ ಭಾಗದ ರೋಗಿಗಳು ಕಿಡ್ನಿ ದಾನ ಮಾಡುವುದು ಮತ್ತು ಪಡೆಯುವ ಪ್ರಕ್ರಿಯೆಗಳನ್ನು ಸರ್ಕಾರ ಸುಲಭಗೊಳಿಸ ಬೇಕು ಎಂದು ಅವರು ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!