ಪ್ರಾಜೆಕ್ಟ್ ಆರಿಯಾ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಪ್ರಾಜೆಕ್ಟ್ ಆರಿಯಾದ ಪವಾಡ

ಮೊಬೈಲ್ ಸ್ಲೋ ಆಯ್ತು. ಹೊಸ ಸಾಫ್ಟ್ ವೇರ್‍ಗೆ ಹೆಚ್ಚು ರ್ಯಾಮ್ ಬೇಕಿತ್ತು ಅನ್ನಿಸಬಹುದು. ಕ್ಯಾಮೆರಾ ಹೆಚ್ಚು ಮೆಗಾಪಿಕ್ಸೆಲ್ ಬೇಕು ಅನ್ನಿಸಬಹುದು...

ಈಗೊಂದು ಮೊಬೈಲ್ ತೆಗೆದುಕೊಳ್ಳುತ್ತೀರಿ. ಇನ್ನೊಂದು ಸ್ವಲ್ಪ ದಿನಕ್ಕೆ ಬ್ಯಾಟರಿ ಸಾಲದು ಅನ್ನಿಸುತ್ತದೆ. ಮೊಬೈಲ್ ಸ್ಲೋ ಆಯ್ತು. ಹೊಸ ಸಾಫ್ಟ್ ವೇರ್‍ಗೆ ಹೆಚ್ಚು ರ್ಯಾಮ್ ಬೇಕಿತ್ತು ಅನ್ನಿಸಬಹುದು. ಕ್ಯಾಮೆರಾ ಹೆಚ್ಚು ಮೆಗಾಪಿಕ್ಸೆಲ್ ಬೇಕು ಅನ್ನಿಸಬಹುದು.

ಹಾಗೆ ಅನ್ನಿಸಿದಾಗೆಲ್ಲ ಹೊಸ ಮೊಬೈಲ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದರ ಬದಲು ನಮ್ಮದೇ ಮೊಬೈಲ್‍ನಲ್ಲಿ ನಮಗೆ ಬೇಕಾದ ಬಿಡಿಭಾಗ ಅಳವಡಿಸಿಕೊಳ್ಳುವ ಅವಕಾಶ ಇದ್ದಿದ್ದರೆ? ಎಂತಹ ಸುಂದರ ಕಲ್ಪನೆ ಅಂದುಕೊಳ್ಳುತ್ತಿದ್ದೀರಾ? ಇಂತಹ ಕಲ್ಪನೆಯ ಯೋಜನೆಯೊಂದಕ್ಕೆ 91 ಮೊಬೈಲ್ಸ್ ಕಂಪನಿ ಚಾಲನೆ ನೀಡಿದೆ.

ಕಂಪನಿಯ ಈ ಕಲ್ಪನೆಯ ಯೋಜನೆ ಪ್ರಕಾರ ಹೊಸ ಮೊಬೈಲ್‍ಗಳಲ್ಲಿ ಈಗ ಬಳಸಲಾಗುವ ಸಾಧಾರಣ ಬ್ಯಾಟರಿಗಳ ಬದಲು ಸೂಪರ್ ಕ್ಯಾಪಿಸಿಟರ್ ಬಳಸಬೇಕಂತೆ. ಈ ಸೂಪರ್ ಕ್ಯಾಪಿಸಿಟರ್ ಈಗಿನ ಬ್ಯಾಟರಿಗಿಂತ ಹಗುರವಾಗಿದ್ದು, ಚಾರ್ಜ್ ಆಗಲು ಕಡಿಮೆ ಸಮಯ ತೆಗೆದುಕೊಳ್ಳುತ್ತವೆ. ಆದರೆ ಬ್ಯಾರಟಿ ಬಾಳಿಕೆ ಹೆಚ್ಚು ಬರುತ್ತದೆ. ಈ ಕಾರಣಕ್ಕಾಗಿ ಸೂಪರ್ ಕ್ಯಾಪಿಸಿಟರ್ ಬಳಸುವುದು ಕಂಪನಿಯ ಉದ್ದೇಶ. ಇದರಿಂದಾಗಿ 30 ನಿಮಿಷದ ಜಾರ್ಜ್ ನಲ್ಲಿ 2 ದಿನದ ಬ್ಯಾಟರಿ ಲೈಫ್ ಪಡೆಯಬಹುದಂತೆ. ಇದಕ್ಕಿಂತ ಮುಖ್ಯವಾಗಿ ಮಾಡ್ಯುಲರ್ ಮತ್ತು ಬದಲಾಯಿಸಬಹುದಾದ ಹಾರ್ಡ್ ವೇರ್. ಇದರಿಂದಾಗಿ ಗ್ರಾಹಕರು ಅಗತ್ಯ ಮತ್ತು ಅನುಕೂಲವಿದ್ದಾಗ ಅಪ್‍ಗ್ರೇಡ್ ಮಾಡಲು ಅವಕಾಶವಾಗುತ್ತದೆ. ಹೋಲೋಗ್ರಾಫಿಕ್ ವಿಡಿಯೋ ಪ್ರೊಜೆಕ್ಷನ್ ವೈಬ್ರೇಶನ್ ಟ್ರಾಂಡ್ಯುಸರ್ ಸ್ಪೀಕರ್ ಸಿಸ್ಟಂ (ಇದು ಯಾವುದೇ ಫ್ಲಾಟ್ ವಸ್ತುವನ್ನು ಸ್ಪೀಕರ್ ಆಗಿ ಪರಿವರ್ತಿಸುತ್ತದಂತೆ) ಪಾರದರ್ಶಕ, ಪಾಲಿಮರ್ ಒಎಲ್‍ಇಡಿ ಡಿಸ್ ಪ್ಲೇಗಳು ಇದರ ಪ್ಲಸ್ ಪಾಯಿಂಟ್‍ಗಳಂತೆ.

ಹಾರ್ಡ್ ವೇರ್ ಗೆ ಸಂಬಂಧಿಸಿದಂತೆ 5 ಇಂಚು ಅಲ್ಟ್ರಾ ಎಚ್ ಡಿ ಡಿಸ್ ಪ್ಲೇ 991 ಪಿಪಿಐ (ಈಗಿರುವುದು ಹೆಚ್ಚೆಂದರೆ 551 ಪಿಪಿಐ ಡಿಸ್ ಪ್ಲೇಗಳು) 4ಜಿ ಮತ್ತು ವೈಫೈ (ಅಪ್ ಗ್ರೇಡೆಬಲ್) ಇರಬೇಕು ಎಂಬುದು ಕಂಪನಿಯ ನಿಯಮ. ಯೂ ಟ್ಯೂಬ್‍ನಲ್ಲೂ ಪ್ರಾಜೆಕ್ಟ್ ಆರಿಯಾ ಎಂದು ಹುಡುಕಿ ನೋಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ