ಗೂಗಲ್‍ನ ಸ್ಟ್ರೀಟ್‍ವ್ಯೂ ಕ್ಯಾಮರಾ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಸ್ಟ್ರೀಟ್‍ವ್ಯೂ ಕ್ಯಾಮರಾ ಭಾರತಕ್ಕೆ..!

ಸ್ಟ್ರೀಟ್‍ವ್ಯೂ ಸರ್ವಿಸ್ ಭಾರತಕ್ಕೆ ಬರಲಿದೆ ಎಂದು ಎರಡು ವರ್ಷದ ಹಿಂದೆಯೇ ಕೇಳಿದ್ದೀರಿ. ಪ್ರಪ್ರಥಮವಾಗಿ ಬೆಂಗಳೂರಿಗೆ ಆ ಸೇವೆ ಬರುವುದಿತ್ತು...

ನವದೆಹಲಿ: ಸ್ಟ್ರೀಟ್‍ವ್ಯೂ ಸರ್ವಿಸ್ ಭಾರತಕ್ಕೆ ಬರಲಿದೆ ಎಂದು ಎರಡು ವರ್ಷದ ಹಿಂದೆಯೇ ಕೇಳಿದ್ದೀರಿ. ಪ್ರಪ್ರಥಮವಾಗಿ ಬೆಂಗಳೂರಿಗೆ ಆ ಸೇವೆ ಬರುವುದಿತ್ತು.

ಆದರೆ ಬೆಂಗಳೂರಿನ ಶಾಸಕರೊಬ್ಬರು ಭದ್ರತೆಯ ಕಾರಣ ನೀಡಿ ಆಕ್ಷೇಪಿಸಿದ್ದರಿಂದ ಅಂದು ಕ್ಯಾಲಿಫೋರ್ನಿಯಾ ಮೂಲದ ಕಂಪನಿ ವಾಪಸಾಗಿತ್ತು. ಇದೀಗ ಗೂಗಲ್ ಸ್ಟ್ರೀಟ್‍ವ್ಯೂ ಸರ್ವಿಸ್  ದೇಶಕ್ಕೆ ಕಾಲಿಡುವುದು ಬಹುತೇಕ ಖಚಿತವಾಗಿದೆ. ಗೂಗಲ್ನ ಈ 360 ಡಿಗ್ರೀ ವಿಡಿಯೋ ಸೇವೆಯಿಂದಾಗಿ ದೂರದ ದೇಶದಲ್ಲಿರುವವರು ಅಲ್ಲಿಂದಲೇ ಭಾರತದ ಭೂಪ್ರದೇಶವನ್ನು ಇಂಚಿಂಚಾಗಿ ವೀಕ್ಷಿಸಬಹುದಾಗಿದ್ದು, ದೇಶದ ಪ್ರಮುಖ ನಗರದಲ್ಲಿ ಐಟಿ ಇಂಡಸ್ಟ್ರಿಗಳು, ಇಸ್ರೋ, ಹೆಚ್‍ಎಎಲ್ ಮುಂತಾದ ಸಂಸ್ಥೆಗಳಿಗೆ ಧಕ್ಕೆಯಾದೀತೆಂದು ಗೃಹ ಇಲಾಖೆ ಇದುವರೆಗೂ ಅನುಮೋದನೆ ನೀಡಿರಲಿಲ್ಲ.

ಈಗಾಗಲೇ ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಲಭ್ಯವಿರುವ ಸೇವೆ ಕೊನೆಗೂ ಭಾರತಕ್ಕೆ ಕಾಲಿಡುತ್ತಿದೆ. ಈ ಮೊದಲು ಗೂಗಲ್ ಅರ್ಥ್‍ನಲ್ಲಿ 3ಡಿ ಮ್ಯಾಪ್ ಮಾದರಿಯಲ್ಲಿ ಕಾಣುತ್ತಿದ್ದ  ಚಿತ್ರಗಳು ಇನ್ನು ಮುಂದೆ ಸ್ಟ್ರೀಟ್ ವ್ಯೂ ಸರ್ವಿಸ್ ಮೂಲಕ 360 ಡಿಗ್ರೀ ಪನೋರಮಾದಲ್ಲಿ ವಾಸ್ತವದಲ್ಲಿ ಹೇಗಿದೆಯೋ ಹಾಗೆಲ್ಲೇ ತೋರಿಸುತ್ತದೆ.

ಗೂಗಲ್ ಸಿಇಓ ಸುಂದರ್ ಪಿಚ್ಚೈ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿಮಾಡಿದ್ದು ಈ ಪ್ರಕ್ರಿಯೆಗೆ ಚಾಲನೆ ಸಿಗಲು ಕಾರಣವಾಗಿದೆ ಎನ್ನಲಾಗಿದೆ. ಜನಸಾಮಾನ್ಯರ ಅನುಕೂಲಕ್ಕಾಗಿ ಈ ತಂತ್ರಜ್ಞಾನ ಎಂದು ಹೇಳಿದ್ದು, ಗೃಹ ಇಲಾಖೆಯ  ಅನುಮೋದನೆ ನಂತರ ಹೆಚ್ಚಿನ ಮಾಹಿತಿ ನೀಡುವುದಾಗಿ ಗೂಗಲ್ ಮೂಲಗಳು ತಿಳಿಸಿವೆ. ವ್ಯವಸ್ಥೆ ಜಾರಿಗೆ ಬಂದಲ್ಲಿ ಈ ತಂತ್ರಜ್ಞಾನವನ್ನು ಹೈದರಾಬಾದ್ ಮೊದಲು ಅಳವಡಿಸಿಕೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ