ಆ್ಯಪಲ್ ಸಂಸ್ಥೆ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಆ್ಯಪಲ್ ಗೆ ಭಾರಿ ದಂಡ..?

ಖ್ಯಾತ ವಿದ್ಯುನ್ಮಾನ ವಸ್ತುಗಳ ತಯಾರಿಕಾ ಸಂಸ್ಥೆ ಆ್ಯಪಲ್ ಗೆ ಭಾರಿ ದಂಡದ ಭೀತಿ ಎದುರಾಗಿದೆ...

ವಾಷಿಂಗ್ ಟನ್: ಖ್ಯಾತ ವಿದ್ಯುನ್ಮಾನ ವಸ್ತುಗಳ ತಯಾರಿಕಾ ಸಂಸ್ಥೆ ಆ್ಯಪಲ್ ಗೆ ಭಾರಿ ದಂಡದ ಭೀತಿ ಎದುರಾಗಿದೆ.

ತನ್ನ ಐಫೋನ್ ಮತ್ತು ಐಪ್ಯಾಡ್ ಸಾಧನಗಳಲ್ಲಿ ಅನುಮತಿ ಇಲ್ಲದೆ ಪೇಟೆಂಟ್ ಇರುವ ತಂತ್ರಜ್ಞಾನವನ್ನು ಬಳಸಿಕೊಂಡ ಹಿನ್ನಲೆಯಲ್ಲಿ ಆ್ಯಪಲ್ ವಿರುದ್ಧ ಬರೋಬ್ಬರಿ 862.4 ಬಿಲಿಯನ್ ಡಾಲರ್  ದಂಡದ ಪ್ರಕರಣ ದಾಖಲಿಸಲಾಗಿದೆ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಇಬ್ಬರು ಮತ್ತು ಇಂಡೋ-ಯುಎಸ್ ವಿದ್ಯಾರ್ಥಿಗಳು ಸೇರಿ ಒಟ್ಟು 4 ಮಂದಿ ವಿದ್ಯಾರ್ಥಿಗಳ ಸಮೂಹವೊಂದು ಐಫೋನ್,  ಐಪ್ಯಾಡ್ ಸೇರಿದಂತೆ ವಿಶ್ವದ ಖ್ಯಾತ ನಾನಾ ಸಾಧನಗಳಿಗೆ ಅಳವಡಿಸಬಹುದಾದ ಪ್ರೊಸೆಸರ್ ಗಳನ್ನು ಆವಿಷ್ಕರಿಸಿದ್ದರು.

ಪ್ರಸ್ತುತ ಈ ತಂತ್ರಜ್ಞಾನದ ಪೇಟೆಂಟ್ ವಿಸ್ಕಾನ್ಸಿನ್ ಅಲುಮ್ನಿ ರಿಸರ್ಚ್ ಫೌಂಡೇಶನ್ ಬಳಿ ಇದ್ದು, ಇತ್ತೀಚೆಗಷ್ಟೇ ಆ್ಯಪಲ್ ಸಂಸ್ಥೆ ಈ ತಂತ್ರಜ್ಞಾನವನ್ನು ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡ  ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಆ್ಯಪಲ್ ಸಂಸ್ಥೆ ವಿರುದ್ಧ ವಿಸ್ಕಾನ್ಸಿನ್ ಅಲುಮ್ನಿ ರಿಸರ್ಚ್ ಫೌಂಡೇಶನ್ ಪ್ರಕರಣ ದಾಖಲಿಸಿದ್ದು, ಬರೋಬ್ಬರಿ 862.4 ಬಿಲಿಯನ್ ಡಾಲರ್ ದಂಡಕ್ಕೆ ಬೇಡಿಕೆ  ಇಟ್ಟಿದೆ.

ಪ್ರಕರಣ ಸಾಬೀತಾದರೆ ಆ್ಯಪಲ್ ಸಂಸ್ಥೆ ಭಾರಿ ದಂಡವನ್ನೇ ತೆರಬೇಕಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಪ್ರತಿಷ್ಠೆ ಕೂಡ ಹಾಳಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಂತ್ರಿಕ ತಂಡದಲ್ಲಿ ಭಾರತೀಯರು
ಇನ್ನು ಆ್ಯಪಲ್ ಸಂಸ್ಥೆಗೆ ದಂಡದ ಭೀತಿಗೆ ಕಾರಣವಾದ ಪ್ರೊಸೆಸರ್ ಅನ್ನು ಆವಿಷ್ಕರಿಸಿದ ನಾಲ್ಕು ಮಂದಿಯ ತಂಡದಲ್ಲಿ ಇಂಡೋ-ಯುಎಸ್ ಮೂಲದ ಇಬ್ಬರು ವಿದ್ಯಾರ್ಥಿಗಳು ಸೇರಿದ್ದು, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಸಂಸ್ಥೆಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿರುವ ಗುರೀಂದರ್ ಸೋಹಿ ಮತ್ತು ತೆರಾಣಿ  ವಿಜಯ್ ಕುಮಾರ್ ಈ ತಾಂತ್ರಿಕ ತಂಡದ ಸದಸ್ಯರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!