ಏಸಸ್ ನಿಂದ ಹೊಸ ಸ್ಮಾರ್ಟ್ ಫೋನ್ 
ವಿಜ್ಞಾನ-ತಂತ್ರಜ್ಞಾನ

5,299 ರು.ಗೆ ಏಸಸ್ ನಿಂದ ಹೊಸ ಸ್ಮಾರ್ಟ್ ಫೋನ್

ತೈವಾನ್ ಮೂಲದ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಏಸಸ್ ಬಜೆಟ್ ಶ್ರೇಣಿಯ 2 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 3ಜಿ ಸೇವೆಯುಕ್ತ 4.5 ಇಂಚಿನ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳು 5, 299 ರುಗಳಿಗೆ ಇ-ಮಾರುಕಟ್ಟೆ ಮೂಲಕ ಲಭ್ಯವಿದೆ...

ನವದೆಹಲಿ: ತೈವಾನ್ ಮೂಲದ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಏಸಸ್ ಬಜೆಟ್ ಶ್ರೇಣಿಯ 2 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 3ಜಿ ಸೇವೆಯುಕ್ತ 4.5  ಇಂಚಿನ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳು 5, 299 ರುಗಳಿಗೆ ಇ-ಮಾರುಕಟ್ಟೆ ಮೂಲಕ ಲಭ್ಯವಿದೆ.

ಝೆನ್ ಫೋನ್ ಗೋ 4.5 2ನೇ ತಲೆಮಾರಿನ ZB452KG ಸರಣಿಯ ಸ್ಮಾರ್ಟ್ ಫೋನ್ ಗಳು ಫ್ಲಿಪ್ ಕಾರ್ಟ್, ಸ್ಮ್ಯಾಪ್ ಡೀಲ್, ಅಮೆಜಾನ್, ಪೇಟಿಎಂ ಮತ್ತು ಶಾಪ್ ಕ್ಲೂಸ್ ನಂತಹ  ಇ-ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆ ಹೇಳಿದೆ. 2 ಬಗೆಯಲ್ಲಿ ಈ ಸ್ಮಾರ್ಟ್ ಫೋನ್ ಗಳು ಲಭ್ಯವಿದ್ದು, 0.3 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ  ಹೊಂದಿರುವ ಫೋನ್ ಗಳು 5,299ಕ್ಕೆ ಲಭ್ಯವಿದ್ದರೆ, 2 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ ಹೊಂದಿರುವ ಫೋನ್ ಗಳು ರು.5,699ಕ್ಕೆ ಲಭ್ಯವಿದೆ.

ತಾಂತ್ರಿಕ ವಿಚಾರಕ್ಕೆ ಬರುವುದಾದರೆ 1.2 GHz ಕ್ವಾಡ್ ಕೋರ್ ಪ್ರೊಸೆಸರ್, 1 ಜಿಬಿ ರ್ಯಾಮ್, 8 ಜಿಬಿ ಮೆಮೋರಿ(ಮೈಕ್ರೋ ಎಸ್ ಡಿ-64 ಜಿಬಿ ವರೆಗೆ ಎಕ್ಸ್ ಪ್ಯಾಂಡೆಬಲ್), 4.5 ಇಂಚಿನ ಡಿಸ್  ಪ್ಲೇ, ಆ್ಯಂಡ್ರಾಯ್ಡ್ 5.1 ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಕಡಿಮೆ ಬೆಳಕಿನಲ್ಲೂ ಪರಿಣಾಮಕಾರಿಯಾಗಿ ಚಿತ್ರಗಳನ್ನು ಸೆರೆಹಿಡಿಯುವ  ಸಾಮರ್ಥ್ಯ ಈ ಸ್ಮಾರ್ಟ್ ಫೋನ್ ಗೆ ಇದ್ದು, ಪಿಕ್ಸೆಲ್ ಮಾಸ್ಟರ್ ತಂತ್ರಜ್ಞಾನದ ಮೂಲಕ 16 ವಿವಿಧ ವಿಶೇಷ ಕ್ಯಾಮೆರಾ ಮೋಡ್ ಗಳನ್ನು ಈ ಫೋನ್ ಗೆ ನೀಡಲಾಗಿದೆ. ಒಟ್ಟು ಆರು ಬಣ್ಣಗಳಲ್ಲಿ ಈ  ಸ್ಮಾರ್ಟ್ ಫೋನ್ ಲಭ್ಯವಿದೆ ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!