ಕಲಾವಿದನ ಕಲ್ಪನೆಯಲ್ಲಿ ಪ್ರಾಕ್ಸಿಮಾ ಬಿ ಗ್ರಹ 
ವಿಜ್ಞಾನ-ತಂತ್ರಜ್ಞಾನ

ಸೌರಮಂಡಲದ ಸಮೀಪವೇ ಮತ್ತೊಂದು ಭೂಮಿ ಪತ್ತೆ!

ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವನ್ನು ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಗ್ರಹ ನಮ್ಮ ಸೌರಮಂಡಲದ ಸಮೀಪವೇ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನವದೆಹಲಿ: ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವನ್ನು ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಗ್ರಹ ನಮ್ಮ ಸೌರಮಂಡಲದ ಸಮೀಪವೇ ಪತ್ತೆಯಾಗಿದೆ ಎಂದು ವಿಜ್ಞಾನಿಗಳು  ತಿಳಿಸಿದ್ದಾರೆ.

ಭೂಮಿಯನ್ನೇ ಹೋಲುವ ಮತ್ತೊಂದು ಭೂಮಿಯ ಸಂಶೋಧನೆಯಲ್ಲಿ ತೊಡಗಿರುವ ಖಗೋಳ ವಿಜ್ಞಾನಿಗಳ ದಶಕಗಳ ಸಂಶೋಧನೆ ಫಲ ನೀಡಿದ್ದು, ನಮ್ಮ ಸೌರಮಂಡಲದ ಸಮೀಪದಲ್ಲಿ  ಮತ್ತೊಂದು ಸೌರಮಂಡಲ ವ್ಯವಸ್ಥೆ ಪತ್ತೆಯಾಗಿದ್ದು, ಇಲ್ಲಿ ಭೂಮಿಯನ್ನು ಹೋಲುವ ಮತ್ತೊಂದು ಭೂಮಿ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜರ್ಮನಿಯ ಸ್ಟಡಿ ಫಾರ್ ಆಸ್ಟ್ರೋ  ಫಿಸಿಕ್ಸ್ ಸಂಸ್ಥೆಯ ಖಗೋಳ ವಿಜ್ಞಾನಿ ಹಾಗೂ ಲೇಖಕ ಅನ್ಸ್ಗರ್ ರೀನರ್ಸ್ ಅವರು ಹೇಳುವಂತೆ, ಭೂಮಿಯನ್ನೇ ಹೋಲುವ ಮತ್ತೊಂದು ಭೂಮಿ ಪತ್ತೆಯಾಗಿದೆ. ಅದೂ ಕೂಡ ನಮ್ಮ  ಸೌರಮಂಡಲಕ್ಕೆ ಅತೀ ಸಮೀಪದಲ್ಲಿ ಎಂದು ಹೇಳಿದ್ದಾರೆ.

ಈ ನೂತನ ಭೂಮಿ ಸುಮಾರು 4.2 ಜ್ಯೋತಿರ್ ವರ್ಷಗಳಷ್ಟು ದೂರವಿದ್ದು, ಈ ನೂತನ ಗ್ರಹಕ್ಕೆ ಪ್ರಾಕ್ಸಿಮಾ ಬಿ ಎಂದು ನಾಮಕರಣ ಮಾಡಲಾಗಿದೆ. ಈ ಭೂಮಿಯನ್ನು ಹೊಂದಿರುವ  ಸೌರಮಂಡಲಕ್ಕೆ ಪ್ರಾಕ್ಸಿಮಾ ಸೆಂಟುರಿ ಎಂದು ಕರೆಯಲಾಗಿದೆ. ಸೌರಮಂಡಲದ ಸೂರ್ಯ ಮತ್ತು ಭೂಮಿಯ ರಚನೆಯನ್ನೇ ಹೋಲುವ ನಕ್ಷತ್ರ ಹಾಗೂ ಗ್ರಹಗಳು ಈ ಪ್ರಾಕ್ಸಿಮಾ ಸೆಂಟುರಿಯಲ್ಲಿ  ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಹಿಂದೆ ಸುಮಾರು 40 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಪತ್ತೆಯಾಗಿದ್ದ ಟ್ರಾಪಿಸ್ಟ್-1 ಗ್ರಹವನ್ನೇ ಭೂಮಿಯನ್ನು ಹೋಲುವ ಸಮೀಪದ ಗ್ರಹ ಎಂದು ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ  ಪತ್ತೆಯಾಗಿರುವ ಪ್ರಾಕ್ಸಿಮಾ ಬಿ ಗ್ರಹ ಅದಕ್ಕಿಂತ ಹತ್ತಿರವಾಗಿದ್ದು, ಈ ಗ್ರಹವೇ ಇದೀಗ ಭೂಮಿಯನ್ನು ಹೋಲುವ ಅತೀ ಸಮೀಪದ ಗ್ರಹ ಎಂಬ ಖ್ಯಾತಿಗಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಖಗೋಳ ವಿಜ್ಞಾನಿ ಗಿಲ್ಲೆಮ್ ಅಂಗ್ಲಡಾ ಅವರು, ಈ ಗ್ರಹ ಕೇವಲ ಭೂಮಿಯನ್ನು ಹೋಲುವ ಗ್ರಹ ಮಾತ್ರವೇ ಅಲ್ಲ. ನಮ್ಮ ಸೌರಮಂಡಲಕ್ಕೆ ಅತೀ  ಸಮೀಪವಿರುವ ಗ್ರಹ ಎಂದು ಹೇಳಿದ್ದಾರೆ. ಈ ವರೆಗೂ ಪತ್ತೆಯಾದ ಸೌರಮಂಡಲದಲ್ಲಿಯೇ ಅತೀ ಸಮೀಪದ ಸೌರಮಂಡಲ ಎಂದರೆ ಪ್ರಾಕ್ಸಿಮಾ ಸೆಂಟುರಿಯಾಗಿದ್ದು, ಇದರಲ್ಲೇ ನಮಗೆ  ಭೂಮಿಯನ್ನು ಹೋಲುವ ಗ್ರಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಖಗೋಳ ವಿಜ್ಞಾನಿಗಳು ತಿಳಿಸಿರುವಂತೆ ನಮ್ಮ ಸೌರಮಂಡಲದಲ್ಲಿ ಸೂರ್ಯ ಹಾಗೂ ಬುಧಗ್ರಹವಿರುವ ಅಂತರಕ್ಕಿಂತಲೂ ಅತೀ ಸಮೀಪದಲ್ಲಿ ಭೂಮಿಯನ್ನು ಹೋಲುವ ಪ್ರಾಕ್ಸಿಮಾ ಬಿ ಗ್ರಹ  ಹಾಗೂ ಸೂರ್ಯನಿದ್ದು, ಇಲ್ಲಿನ ಸೂರ್ಯನ ನಮ್ಮ ಸೌರಮಂಡಲದ ಸೂರ್ಯನಿಗಿಂತ ಕಡಿಮೆ ತಾಪ ಹೊಂದಿದ್ದು, ಇದೇ ಕಾರಣಕ್ಕಾಗಿ ಇಲ್ಲಿ ಭೂಮಿಯನ್ನು ಹೋಲುವ ವಾತವರಣವಿರಬಹುದು  ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಈ ನೂತನ ಭೂಮಿ ತಾಪಮಾನ 22 ರಿಂದ 40 ಡಿಗ್ರಿಗಳಷ್ಟಿದೆ. ಆದರೆ ಪ್ರಸ್ತುತ ಭೂಮಿಯ ಮೇಲಿರುವ ನೇರಳಾತೀತಾ ಕಿರಣಗಳು, ಎಕ್ಸ್ ರೇ ಕಿರಣಗಳ  ಪ್ರಮಾಣಕ್ಕಿಂತ 400 ಪಟ್ಟು ಅಧಿಕ ಪ್ರಮಾಣ ನೂತನ ಭೂಮಿಯ ಮೇಲಿದ್ದು, ಒಂದು ವೇಳೆ ಅಲ್ಲಿ ಜೀವಿಗಳಿದ್ದರೆ ಇದರ ಪ್ರಭಾವದಿಂದಾಗಿ ಅವುಗಳು ನಾಶವಾಗಿರುವ ಸಾಧ್ಯತೆ ಇದೆ ಎಂದೂ  ವಿಜ್ಞಾನಿಗಳು ಶಂಕಿಸಿದ್ದಾರೆ. ಹೀಗಿದ್ದೂ ಅಲ್ಲಿನ ತಂಪಿನ ವಾತಾವಾರಣ ಜೀವಿಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ಹೆಚ್ಚಿನ ಸಂಶೋಧನೆಯಿಂದ ಮಾತ್ರ ಮತ್ತಷ್ಟು ಮಾಹಿತಿ ಕಲೆ ಹಾಕಬಹುದು  ಎಂದು ಹೇಳಿದ್ದಾರೆ.

2015ರಲ್ಲಿಯೂ ಸಹ ನಾಸಾದ ವಿಜ್ಞಾನಿಗಳು ಭೂಮಿಯನ್ನು ಹೋಲುವ ಕೆಪ್ಲರ್ 452ಬಿ ಎಂಬ ಗ್ರಹವನ್ನು ಅನ್ವೇಷಿಸಿದ್ದರು. ನಾಸಾದ ದೂರದರ್ಶಕ ಕೆಪ್ಲರ್ ಈ ಗ್ರಹವನ್ನು ಪತ್ತೆ ಮಾಡಿದ್ದ  ಹಿನ್ನಲೆಯಲ್ಲಿ ಈ ಗ್ರಹಕ್ಕೆ ಕೆಪ್ಲರ್ 452ಬಿ ಎಂದು ನಾಮಕರಣ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ