ವಾಟರ್ ಪ್ರೂಫ್ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ!
ಖ್ಯಾತ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಅವರ 250ನೇ ಜನ್ಮ ದಿನಾಚರಣೆ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡುಸುವ ಮೂಲಕ ಗೌರವ ಸೂಚಿಸಿದೆ.
ನವದೆಹಲಿ: ಖ್ಯಾತ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಅವರ 250ನೇ ಜನ್ಮ ದಿನಾಚರಣೆ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡುಸುವ ಮೂಲಕ ಗೌರವ ಸೂಚಿಸಿದೆ.
ವಾಟರ್ ಪ್ರೂಫ್ ಜಾಕೆಟ್ ಗಳನ್ನು ಸಂಶೋಧಿಸಿದ್ದ ಚಾರ್ಲ್ಸ್ ಮಾಕಿಂತೋಷ್ ಅವರು ಡಿಸೆಂಬರ್ 29 1766ರಲ್ಲಿ ಜನಿಸಿದರು. ಸ್ಕಾಟ್ಲೆಂಡಿನಲ್ಲಿ ರಸಾಯನ ಶಾಸ್ತ್ರದ ವಿಜ್ಞಾನಿಯಾಗಿದ್ದ ಚಾರ್ಲ್ಸ್ ಮಾಕಿಂತೋಷ್ ಅವರು, ಮಳೆಯಲ್ಲೂ ನೆನೆಯದ ಜಾಕೆಟ್ ಗಳನ್ನು ಅಭಿವೃದ್ಧಿಗೊಳಿಸಿದ್ದರು. ಅವರ ಈ ಜಾಕೆಟ್ ಗಳಿಗೆ ಮಾಕಿಂತೋಷ್ ಜಾಕೆಟ್ ಗಳು ಎಂದೇ ಕರೆಯಲಾಗುತ್ತಿತ್ತು. 1824ರಲ್ಲಿ ಈ ಬಗೆ ರೈನ್ ಕೋಟ್ ಗಳ ಮೊದಲ ಬಳಕೆಯಾಗಿತ್ತು.
ರಸಾಯನಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಚಾರ್ಲ್ಸ್ ಮಾಕಿಂತೋಷ್ ಅವರು ನಿತ್ಯ ಒಂದಿಲ್ಲೊಂದು ಪ್ರಯೋಗದಲ್ಲಿ ನಿರತರಾಗುತ್ತಿದ್ದರು. ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ರಬ್ಬರ್ ಮತ್ತು ಟಾರ್ ಬಳಕೆ ಮಾಡಿ ನೀರಿಗೆ ಪ್ರತಿರೋಧ ಒಡ್ಡುವ ಫ್ಯಾಬ್ರಿಕ್ ಅನ್ನು ಕಂಡು ಹಿಡಿದರು. ಫ್ಯಾಬ್ರಿಕ್ ಮೂಲಕ ಜಾಕೆಟ್ ಗಳನ್ನು ತಯಾರಿಸಿದ್ದರು. ಇದು ಮಳೆ ನೀರಿನ ಪ್ರತಿರೋಧಕಗಳಾಗಿದ್ದವು. ಈ ಜಾಕೆಟ್ ಗಳಿಗೆ ರೈನ್ ಕೋಟ್ ಅಥವಾ ಮ್ಯಾಕಿಂಚೋಷ್ ಜಾಕೆಟ್ ಗಳು ಎಂದು ಕರೆಯುತ್ತಿದ್ದರು.
1843ರಲ್ಲಿ ಚಾರ್ಲ್ಸ್ ಮಾಕಿಂತೋಷ್ ಅವರು ಸ್ಕಾಟ್ಲೆಂಡಿನ ಡಂಚಟ್ಟನ್ ನಲ್ಲಿ ನಿಧನರಾದರು. ಗ್ಲಾಸ್ಗೋದಲ್ಲಿರುವ ಕೆಥೆಡ್ರಿಲ್ ಚರ್ಚ್ ಯಾರ್ಡ್ ನಲ್ಲಿ ಅವರ ಅಂತಿಮ ಸಂಸ್ಕಾರ ನಡೆಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.