ಸಂಗ್ರಹ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಟ್ವಿಟರ್ ಹೊಸ ಫೀಚರ್: ಬಳಕೆದಾರನಿಗೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ

ವಿಶ್ವದ ಅತ್ಯಂತ ಹೆಚ್ಚು ಬಳಕೆಯ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಗ್ರಾಹಕರನ್ನು ಸೆಳೆಯಲು ಮತ್ತೊಂದು ಹೊಸ ಫೀಚರ್ ನೀಡಿದ್ದು, ಹೊಸದಾಗಿ ಬಳಕೆದಾರನಿಗೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ ನೀಡಿದೆ.

ನವದೆಹಲಿ: ವಿಶ್ವದ ಅತ್ಯಂತ ಹೆಚ್ಚು ಬಳಕೆಯ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಗ್ರಾಹಕರನ್ನು ಸೆಳೆಯಲು ಮತ್ತೊಂದು ಹೊಸ ಫೀಚರ್ ನೀಡಿದ್ದು, ಹೊಸದಾಗಿ ಬಳಕೆದಾರನಿಗೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ ನೀಡಿದೆ.
ಈ ಆಯ್ಕೆಯ ಮೂಲಕ ಬಳಕೆದಾರ ಏಕಕಾರಲದಲ್ಲಿ ಹಲವು ಟ್ವೀಟ್ ರೂಪಿಸಬಹುದು ಮತ್ತು ಏಕಕಾಲದಲ್ಲಿ ಅವಗಳನ್ನು ಪೋಸ್ಟ್ ಕೂಡ ಮಾಡಬಹುದಾಗಿದೆ. ಟ್ವಿಟರ್ ವೆಬ್ ಸೈಟ್ ಅಥವಾ ಟ್ವಿಟರ್ ಮೊಬೈಲ್ ಆ್ಯಪ್ ನಲ್ಲಿ ಆಯ್ಕೆ  ಲಭ್ಯವಿದ್ದು, ಬಳಕೆದಾರರು ಟ್ವೀಟ್ ಮಾಡುವಾಗ ಕಂಪೋಸರ್ ನ ಕಳಗೆ ಪ್ಲಸ್ ಎಂಬ ಚಿನ್ಹೆಯನ್ನು ನೀಡಲಾಗಿದ್ದು ಈ ಚಿನ್ಹೆ ಒತ್ತಿದರೆ ಮತ್ತೊಂದು ಟ್ವೀಟ್ ಕಂಪೋಸಿಂಗ್ ಆಯ್ಕೆ ತೆರೆದುಕೊಳ್ಳುತ್ತದೆ. ಆ ಮೂಲಕ ಬಳಕೆದಾರ  ಒಂದಕ್ಕಿಂತ ಹೆಚ್ಚು ಟ್ವೀಟ್ ಗಳನ್ನು ಏಕಕಾಲದಲ್ಲಿ ಸೃಷ್ಟಿ ಮಾಡಬಹುದಾಗಿದೆ.
ಹಿಂದೆ ಆ ಆಯ್ಕೆ ಇರಲಿಲ್ಲ. ಆಗ ಬಳಕೆದಾರ ತನ್ನ ಟ್ವೀಟ್ ಗಳಿಗೆ ಒಂದು, ಎರಡು, ಮೂರು ಎಂದು ಹೀಗೆ ಅಂಕಿಗಳ ನೀಡಬೇಕಿತ್ತು. ಈ ಅನಾನುಕೂಲ ತಪ್ಪಿಸಲೆಂದೇ ಟ್ವಿಟರ್ ಈ ಹೊಸ ಮಲ್ಟಿ ಥ್ರೆಡ್  ನೀಡಿದೆ.
ಈತ್ತೀಚೆಗಷ್ಟೇ ಟ್ವಿಟರ್ ತನ್ನ ಪದಮಿತಿಯನ್ನು 140ರಿಂದ 280 ಪದಗಳಿಗೆ ಏರಿಕೆ ಮಾಡಿತ್ತು. ಇದು ಬಳಕೆದಾರರಿಗೆ ಭಾರಿ ಇಷ್ಟವಾಗಿತ್ತು. ಇದರ ಬೆನ್ನಲ್ಲೇ ಟ್ವಿಟರ್ ಬಳಕೆದಾರರ ಸಂಖ್ಯೆ 330 ಮಿಲಿಯನ್ ದಾಟಿತ್ತು. ಇನ್ನು ಟ್ವಿಟರ್ ನಲ್ಲಿ  ಪ್ರತೀ ಟ್ವೀಟ್ ಗೆ 140 ಪದಗಳ ಮಿತಿ ಇದ್ದುದರಿಂದ ಭಾರತದಂತಹ ದೇಶಗಳಲ್ಲಿ ಟ್ವಿಟರ್ ಗೆ ಮನ್ನಣೆ ಅಷ್ಟಾಗಿ ಇರಲಿಲ್ಲ. ಆದರೆ ಫೇಸ್ ಬುಕ್ ನಲ್ಲಿ ಇಂತಹ ಸಮಸ್ಯೆಗಳಿರಲಿಲ್ಲ. ಫೇಸ್ ಬುಕ್ ನಲ್ಲಿ ಬಳಕೆದಾರರಿಗೆ ಯಾವುದೇ  ಪದಮಿತಿಗಳಿಲ್ಲ. ಹೀಗಾಗಿ ಭಾರತದಲ್ಲಿ ಫೇಸ್ ಬುಕ್ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇದೀಗ ಟ್ವಿಟರ್ ಕೂಡ ನಿಧಾನವಾಗಿ ಬಳಕೆದಾರ ಸ್ನೇಹಿಯಾಗುತ್ತಿದ್ದು, ತನ್ನ ಕಂಪೋಸಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್