ಸಂಗ್ರಹ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ನೋಕಿಯಾದ ಅತ್ಯಂತ ವಿಶ್ವಾಸಾರ್ಹ ಫೋನ್ 3310 ಮತ್ತೆ ಮಾರುಕಟ್ಟೆಗೆ!

ನೋಕಿಯಾ ಪ್ರೇಮಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಅತ್ಯಂತ ವಿಶ್ವಾಸಾರ್ಹ ಫೋನ್ ಎಂದೇ ಖ್ಯಾತಿಗಳಿಸಿದ್ದ 3310 ಮಾಡೆಲ್ ನ ಫೋನ್ ಗಳು ಶೀಘ್ರದಲ್ಲೇ ಮತ್ತೆ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ತಿಳಿದುಬಂದಿದೆ.

ನವದೆಹಲಿ: ನೋಕಿಯಾ ಪ್ರೇಮಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಅತ್ಯಂತ ವಿಶ್ವಾಸಾರ್ಹ ಫೋನ್ ಎಂದೇ ಖ್ಯಾತಿಗಳಿಸಿದ್ದ 3310 ಮಾಡೆಲ್ ನ ಫೋನ್ ಗಳು ಶೀಘ್ರದಲ್ಲೇ ಮತ್ತೆ ಮಾರುಕಟ್ಟೆ ಪ್ರವೇಶಿಸಲಿವೆ ಎಂದು  ತಿಳಿದುಬಂದಿದೆ.

ಸ್ಮಾರ್ಟ್ ಫೋನ್ ಯುಗಾರಂಭದ ಹೊತ್ತಿಗೆ ಸ್ಪರ್ಧೆ ತಾಳಲಾರದೇ ವ್ಯಾಪಕ ನಷ್ಟ ಅನುಭವಿಸಿದ್ದ ನೋಕಿಯಾ ಸಂಸ್ಥೆ ಮಾಲೀಕರು ಸಂಸ್ಥೆಯನ್ನು ಮೈಕ್ರೋಸಾಫ್ಟ್ ಸಂಸ್ಥೆಗೆ ಮಾರಿದ್ದರು. ಆದರೆ ನೋಕಿಯಾ ಹೆಸರನ್ನು ಮಾತ್ರ ಚೀನಾ  ಮೂಲದ ಹೆಚ್ ಎಂಡಿ ಗ್ಲೋಬಲ್ ಸಂಸ್ಥೆ ಖರೀದಿಸಿತ್ತು. ಇದೀಗ ಇದೇ ಸಂಸ್ಥೆ ನೋಕಿಯಾದ ಹಳೆಯ ಮೊಬೈಲ್ ಗಳನ್ನು ಪುನರ್ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಅದರಂತೆ ನೋಕಿಯಾ ಜನಪ್ರಿಯ ಮಾಡೆಲ್ ಗಳಾದ  ನೋಕಿಯಾ 1100, ನೋಕಿಯಾ 215, ನೋಕಿಯಾ 3310 ಸೇರಿದಂತೆ ವಿವಿಧ ಸರಣಿಯ ಮೊಬೈಲ್ ಗಳನ್ನು ಅದೇ ಮಾದರಿಯಲ್ಲಿ ಅದೇ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದಲ್ಲದೆ ನೂತನ  ನೋಕಿಯಾ 3, 5 ಮತ್ತು 6 ಸರಣಿಯ ಸ್ಮಾರ್ಟ್ ಫೋನ್ ಗಳನ್ನೂ ಕೂಡ ಬಿಡುಗಡೆ ಮಾಡಲು ಸಂಸ್ಥೆ ಎಂಡಬಲ್ಯೂಸಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದೆ.

ಹಳೇ ಅವರತಾರದಲ್ಲೇ, ಮತ್ತದೇ ಅಗ್ಗದ ದರದಲ್ಲಿ ಜನಪ್ರಿಯ ಫೋನ್ ಗಳು ಲಭ್ಯ
ಇನ್ನು ಹೆಚ್ ಎಂಡಿ ಗ್ಲೋಬಲ್ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಈ ಫೋನ್ ಗಳು ಹಳೇ ಅವತಾರದಲ್ಲೇ ಇರಲಿದ್ದು, ದರ ಕೂಡ ಅಗ್ಗವಾಗಿರುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಖ್ಯಾತ ಆನ್ ಲೈನ್ ವಹಿವಾಟು ಸಂಸ್ಥೆ ಅಮೇಜಾನ್ ನೋಕಿಯಾ ಫೋನ್ ಗಳನ್ನು ಮಾರಾಟ ಮಾಡಲು ಮುಂದೆ ಬಂದಿದ್ದು, ಗ್ರಾಹಕರು ಅಮೇಜಾನ್ ನಲ್ಲಿ ಬುಕ್ ಮಾಡುವ ಮೂಲಕ ಫೋನ್ ಗಳನ್ನು ಕೊಳ್ಳಬಹುದಾಗಿದೆ.

2000ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ಮತ್ತು ಬ್ಯಾಟರಿ ಕಾರ್ಯಕ್ಷಮತೆಯಿಂದಾಗಿ ಸಾಕಷ್ಟು ಜನಪ್ರಿಯವಾಗಿದ್ದ ನೋಕಿಯಾ ಫೋನ್ ಬರೊಬ್ಬರಿ 17 ವರ್ಷಗಳ ಬಳಿಕ ಮತ್ತೆ ಮಾರುಕಟ್ಟೆ ಬಿಡುಗಡೆಯಾಗುತ್ತಿರುವ ನೋಕಿಯಾ  ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಆದರೆ ಈ ಫೋನ್ ಗಳು ಭಾರತೀಯ ಮಾರುಕಟ್ಟೆಗೂ ಬಿಡುಗಡೆಯಾಗುತ್ತದೆಯೇ ಎಂಬ ಮಾಹಿತಿಯನ್ನು ಮಾತ್ರ ಸಂಸ್ಥೆ ಈ ವರೆಗೂ ಬಿಟ್ಟುಕೊಟ್ಟಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿ.ಕೆ ಶಿವಕುಮಾರ್; ಮಧ್ಯಾಹ್ನ 2.30ಕ್ಕೆ ರಾಜೀನಾಮೆ; ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT