ನವದೆಹಲಿ: ಭೂಮಿಯೊಂದಿಗೆ ಹೋಲಿಕೆ ಮಾಡಲಾಗುತ್ತಿರುವ ಮಂಗಳ ಗ್ರಹ ಯಾನಕ್ಕಾಗಿ ಈಗಾಗಲೇ ಭಾರತದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ತಮ್ಮ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಬಗ್ಗೆ ಮಾಹಿತಿ ನೀಡಿದ್ದು, ನಾಸಾದ ಬಹು ಉದ್ದೇಶಿತ ಮಂಗಳಯಾನಕ್ಕೆ ವಿಶ್ವಾದ್ಯಂತ ಈ ವರೆಗೂ ಸುಮಾರು 24, 29,807 ಮಂದಿ ನೋಂದಣಿ ಮಾಡಿಸಿದ್ದು, ಈ ಪೈಕಿ ಭಾರತ ದೇಶವೊಂದರಲ್ಲೇ ಸುಮಾರು 1,38,899 ಭಾರತೀಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಈ ಬಗ್ಗೆ ಆಂಗ್ಲ ಧೈನಿಕವೊಂದು ವರದಿ ಮಾಡಿದ್ದು, ಭಾರತ ಮಾತ್ರವಲ್ಲದೇ ಅಮೆರಿಕದ 6,76,773 ಮಂದಿ ಮತ್ತು ಚೀನಾದ 2,62,752 ಮಂದಿ ನಾಸಾದ ಈ ಯಾನಕ್ಕೆ ಹೆಸರು ನೋಂದಾಯಿಸಿದ್ದು, ನಂತರದ ಹೆಚ್ಚು ಹೆಸರು ನೋಂದಾಯಿಸಿದವರಲ್ಲಿ ಭಾರತೀಯರಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಂಗಳಯಾನ ಯೋಜನೆ ಯಶಸ್ಸು ಕಂಡ ಕ್ಷಣದಿಂದ ಭಾರತೀಯರಲ್ಲಿ ಮಂಗಳ ಗ್ರಹದ ಕುರಿತ ಕೌತುಕ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ನಾಸಾದ ಈ ಯೋಜನೆಗೆ ನಾ ಮುಂದು ತಾಮುಂದು ಎಂಬಂತೆ ಹೆಸರು ನೊಂದಾಯಿಸಿದ್ದಾರೆ.
ಇನ್ನು ನಾಸಾದ ಈ ಯೋಜನೆಗೆ ಹೆಸರು ನೊಂದಾಯಿಸುವ ಪ್ರಕ್ರಿಯೆ ಕಳೆದ ವಾರ ಮುಕ್ತಾಯವಾಗಿದ್ದು, ಕಡೆಯ ದಿನಾಂಕದ ಬಳಿಕ ಬರುವ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ. ಅಂತೆಯೇ ನಿಗದಿತ ದಿನಾಂಕದೊಳಗೆ ಹೆಸರು ನೊಂದಾಯಿಸಿಕೊಂಡಿರುವವರಿಗೆ ಆನ್‌ಲೈನ್ ಬೋರ್ಡಿಂಗ್ ಪಾಸ್ ಕಳುಹಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ.
ನಾಸಾ ಈ ಯೋಜನೆಗಾಗಿ ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ವಿಶೇಷ ವಿಮಾನವನ್ನುಸಿದ್ಪಡಿಸಿದ್ದು, ಇದೇ ವಿಮಾನದ ಮೂಲಕ ಪ್ರಯಾಣಿಕರನ್ನು ಆಗಸಕ್ಕೆ ರವಾನಿಸುತ್ತದೆ. ಮುಂಬರುವ ಮೇ 5ಕ್ಕೆ ಹೊರಡುವ ಈ ನಾಸಾದ ವಿಶೇಷ ವಿಮಾನ, ನವೆಂಬರ್ 26, 2018ರಂದು ಮಂಗಳ ಗ್ರಹವನ್ನು ತಲುಪಲಿದೆ. 720 ದಿನಗಳ ಈ ಯಾನದಲ್ಲಿ ಮಂಗಳ ಗ್ರಹದ ಆಂತರಿಕ ಕಂಪನಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಅಂತೆಯೇ ನಮ್ಮ ಸೌರವ್ಯೂಹದಲ್ಲಿಯೇ ಹೆಚ್ಚು ಕಲ್ಲಿರುವ, ಅಂತರಿಕ್ಷದಲ್ಲಿ ನಕ್ಷತ್ರಗಳ ಹಿನ್ನೆಲೆಯಲ್ಲಿ ಕೆಂಪಗೆ ಹೊಳೆಯುವ ಏಕೈಕ ಗ್ರಹವಾದ ಮಂಗಳ ಗ್ರಹದ ಇತರೆ ಗುಣಗಳ ಬಗ್ಗೆಯೂ ಈ ಪ್ರವಾಸದಲ್ಲಿ ಅಧ್ಯಯನ ನಡೆಸಲಾಗುವುದು ಎಂದು ನಾಸಾದ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics