ಸಂಗ್ರಹ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ವಾಯ್ಸ್ ಕಾಲಿಂಗ್ ಟು ವಿಡಿಯೋ ಕಾಲಿಂಗ್; ವಾಟ್ಸಪ್ ಹೊಸ ಫೀಚರ್

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ಮತ್ತೊಂದು ಹೊಸ ಫೀಚರ್ ಮೂಲಕ ಬಳಕೆದಾರರ ಸೆಳೆಯಲು ಸಜ್ಜಾಗಿದ್ದು, ಪ್ರಸ್ತುತ ಇರುವ ವಿಡಿಯೋ ಕಾಲಿಂಗ್ ಅನ್ನು ಅಪ್ ಗ್ರೇಡ್ ಮಾಡಿದೆ.

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ಮತ್ತೊಂದು ಹೊಸ ಫೀಚರ್ ಮೂಲಕ ಬಳಕೆದಾರರ ಸೆಳೆಯಲು ಸಜ್ಜಾಗಿದ್ದು, ಪ್ರಸ್ತುತ ಇರುವ ವಿಡಿಯೋ ಕಾಲಿಂಗ್ ಅನ್ನು ಅಪ್ ಗ್ರೇಡ್ ಮಾಡಿದೆ.
ಈ ಹಿಂದೆಯಷ್ಟೇ ‘ಡಿಲೀಟ್ ಫಾರ್ ಎವರಿ ಒನ್ ಫೀಚರ್ ಲಾಂಚ್ ಮಾಡಿದ್ದ ವಾಟ್ಸಪ್ ಇದೀಗ ಮತ್ತೊದು ಹೊಸ ಫೀಚರ್ ಅನ್ನು ಹೊರತಂದಿದೆ. ಪ್ರಸ್ತುತ ವಾಟ್ಸಪ್ ನಲ್ಲಿರುವ ವಾಯ್ಸ್ ಮತ್ತು ವಿಡಿಯೋ ಕಾಲಿಂಗ್ ವ್ಯವಸ್ಥೆಯನ್ನು ಹೊಸ ಅಪಡೇಟ್ ವರ್ಷನ್ ನಲ್ಲಿ ಅಪ್ ಗ್ರೇಡ್ ಮಾಡಲಾಗಿದ್ದು, ಇದು ಬಳಕೆದಾರರು ವಾಯ್ಸ್ ಕಾಲಿಂಗ್ ನಲ್ಲಿರುವಾಗಲೇ ವಿಡಿಯೋ ಕಾಲಿಂಗ್ ಗೆ ಶಿಫ್ಟ್ ಆಗುವ ವ್ಯವಸ್ಥೆಯನ್ನು ಕಲ್ಪಿಸಲಿದೆಯಂತೆ.
ಈ ಹೊಸ ಫೀಚರ್ ನಿಂದಾಗಿ ಬಳಕೆದಾರರಿಗೆ ವಾಯ್ಸ್ ಕಾಲ್ ಮೇಲಿಂದ ಕಾಲ್ ಕಟ್ ಮಾಡದೇಯೇ ವಿಡಿಯೋ ಕಾಲ್ ಮಾಡಬಹುದಾಗಿದೆ. ಆದರೆ ಈ ಫೀಚರ್ ಬಳಕೆಗಾಗಿ ನಾವು ಯಾರೊಂದಿಗೆ ವಿಡಿಯೋ ಕಾಲ್ ಮಾಡಬಯಸುತ್ತೇವೆಯೋ ಅವರು ಸಮ್ಮತಿ ನೀಡಬೇಕು..ಆಗ ಮಾತ್ರ ವಾಯ್ಸ್ ಕಾಲಿಂಗ್ ವಿಡಿಯೋ ಕಾಲ್ ಆಗಿ ಮಾರ್ಪಾಟಾಗುತ್ತದೆ. ಪ್ರಸ್ತುತ ಈ ಕಾಲಿಂಗ್ ಸ್ವಿಚ್ ವ್ಯವಸ್ಥೆ ಒನ್ ಆನ್ ಒನ್ ಅಂದರೆ ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆಯಾಗಿದೆ. ಭವಿಷ್ಯದಲ್ಲಿ ಇದನ್ನು ಗ್ರೂಪ್ ಕಾಲಿಂಗ್ ಆಗಿ ಮಾರ್ಪಡಿಸುವ ಉದ್ದೇಶ ಕೂಡ ಸಂಸ್ಥೆಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

SCROLL FOR NEXT