ಸುಳ್ಳು ಸುದ್ದಿಗೆ ಬ್ರೇಕ್: ವಾಟ್ಸಪ್ ಫಾರ್ವರ್ಡ್ ಮೆಸೇಜ್ ಗಳ ಮಿತಿ 5 ಮಂದಿಗೆ ಸೀಮಿತ
ಸುಳ್ಳು ಸುದ್ದಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ತನ್ನ ಚಾಟಿಂಗ್ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತರಲು ಮುಂದಾಗಿದೆ.
ನವದೆಹಲಿ: ಸುಳ್ಳು ಸುದ್ದಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ತನ್ನ ಚಾಟಿಂಗ್ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತರಲು ಮುಂದಾಗಿದೆ.
ಇತ್ತೀಚೆಗೆ ದೇಶದಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣಗಳಿಂದ ಹತ್ತಾರು ಅಮಾಯಕರು ಸಾವನ್ನಪ್ಪಿದ ಪ್ರಕರಣಗಳು ಹಸಿರಾಗಿರುವಾಗಲೇ ಮೆಸೆಜಿಂಗ್ ಜಾಲತಾಣ ವಾಟ್ಸಪ್ ತನ್ನ ಫಾರ್ವರ್ಡ್ ಮೆಸೇಜ್ ಗಳಿಗೆ ಮಿತಿ ಹೇರಲು ನಿರ್ಧರಿಸಿದೆ.
ವಾಟ್ಸಪ್ ನೂತನ ಸೆಟ್ಟಿಂಗ್ಸ್ ನ ಅನ್ವಯ ಯಾವುದೇ ಸಂದೇಶ ಅಥವಾ ಫೋಟೋಗಳನ್ನು ಏಕಕಾಲಕ್ಕೆ ಐದು ಮಂದಿಗೆ ಮಾತ್ರ ರವಾನಿಸಬಹುದಾಗಿದೆ. ಅಲ್ಲದೆ ಪ್ರಸ್ತುತ ಇರುವ ಕ್ವಿಕ್ ಫಾರ್ವರ್ಡ್ ಆಯ್ಕೆಯನ್ನೂ ಕೂಡ ತೆಗೆದು ಹಾಕುವ ಕುರಿತು ವಾಟ್ಸಪ್ ಸಂಸ್ಥೆ ಚಿಂತನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಅಂದರೆ ಜುಲೈ 10ರಿಂದ ಪಾರ್ವರ್ಡ್ ಮೆಸೇಜ್ ಗಳಿಗೆ ಫಾರ್ವರ್ಡ್ ಲೇಬಲ್ ವ್ಯವಸ್ಥೆಯನ್ನು ವಾಟ್ಸಪ್ ಅಳವಡಿಸಿತ್ತು. ಆ ಮೂಲಕ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದಕ್ಕೆ ಆಯ್ಕೆಯನ್ನು ಕಲ್ಪಿಸಲಾಗಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.