ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಟ್ವಿಟರ್'ನಲ್ಲಿ ದೋಷ ಪತ್ತೆ: ಪಾಸ್'ವರ್ಡ್ ಬದಲಿಸುವಂತೆ ಬಳಕೆದಾರಿಗೆ ಟ್ವಿಟರ್ ಮನವಿ

ಟ್ಟಿಟರ್ ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಖಾತೆಗಳ ಪಾಸ್'ವರ್ಡ್'ಗಳನ್ನು ಬದಲಿಸುವಂತೆ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ...

ಸಂಗ್ರಹ ಚಿತ್ರ
Manjula VN
Updated On : 4 May 2018, 11:12 am
ಸ್ಯಾನ್ ಫ್ರಾನ್ಸಿಸ್ಕೋ: ಟ್ಟಿಟರ್ ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಖಾತೆಗಳ ಪಾಸ್'ವರ್ಡ್'ಗಳನ್ನು ಬದಲಿಸುವಂತೆ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ. 
ಟ್ವಿಟರ್ ನಲ್ಲಿ ದೋಷವೊಂದು ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸೇವೆ ಹಾಗೂ ವೇದಿಕೆಗಳಲ್ಲಿ ಒಂದೇ ರೀತಿಯ ಪಾಸ್ ವರ್ಡ್ ಗಳನ್ನು ಬಳಕೆ ಮಾಡುತ್ತಿರುವ ಬಳಕೆದಾರರೂ ಕೂಡಲೇ ತಮ್ಮ ಪಾಸ್ ವರ್ಡ್ ಗಳನ್ನು ಬದಲಿಸುವಂತೆ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ. 
ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿಲ್ಲ. ಯಾವುದೇ ರೀತಿಯ ನಿಯಮಗಳೂ ಉಲ್ಲಂಘನೆಯಾಗಿಲ್ಲ. ಪ್ರಸ್ತುತ ಎದುರಾಗಿರುವ ದೋಷವನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುತ್ತದೆ ಎಂದು ಟ್ವಿಟರ್ ಹೇಳಿಕೊಂಡಿದೆ. 

Advertisement

Advertisement

ಟ್ವಿಟರ್ ನಲ್ಲಿ ಈಗಷ್ಟೇ ದೇಶವೊಂದನ್ನು ಕಂಡು ಹಿಡಿಯಲಾಗಿದೆ. ಸೇವ್ ಮಾಡಲಾಗಿರುವ ಪಾಸ್'ವರ್ಡ್ ಗಳಲ್ಲಿ ದೋಷಗಳು ಕಂಡು ಬರುತ್ತಿವೆ. ಹೀಗಾಗಿ ಸಮಸ್ಯೆಯನ್ನು ಇದೀಗ ಪರಿಹರಿಸಲಾಗಿದ್ದು, ತನಿಖೆ ವೇಳೆ ಬಳಕೆದಾರರ ಯಾವುದೊಂದು ಮಾಹಿತಿಯ ಸೋರಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಟ್ವಿಟರ್ ನಲ್ಲಿ ಬಳಕೆ ಮಾಡುತ್ತಿರುವ ಪಾಸ್ ವರ್ಡ್ ಗಳನ್ನು ಇತರೆ ಸಾಮಾಜಿಕ ಜಾಲತಾಣಗಳು ಹಾಗೂ ಸೇವೆಗಳಿಗೆ ಬಳಕೆ ಮಾಡುತ್ತಿದ್ದರೆ, ಅವುಗಳನ್ನು ಬದಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಟ್ವಿಟರ್ ಹೇಳಿಕೊಂಡಿದೆ. 
ಟ್ವಿಟರ್ ನಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಬಳಕೆದಾರರ ಬಳಿ ಕ್ಷಮೆಯಾಚಿಸುತ್ತೇವೆ ಎಂದು ಟ್ವಿಟರ್ ಮುಖ್ಯ ತಾಂತ್ರಿಕ ಅಧಿಕಾರಿ ಪರಗ್ ಅಗ್ರವಾಪ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments