ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದ್ದು, ಎಂಟು ದೇಶಗಳ ಒಟ್ಟು 31 ಉಪಗ್ರಹಗಳನ್ನು ಇಸ್ರೊ ಗುರುವಾರ ಕಕ್ಷೆಗೆ ಸೇರಿಸಲಿದೆ.
ಭಾರತದ ಅತ್ಯಾಧುನಿಕ ವಿಚಕ್ಷಣಾ ಉಪಗ್ರಹ ಹೈಸಿಸ್ ನೊಂದಿಗೆ ಇತರೆ 8 ದೇಶಗಳ 30 ಪುಟ್ಟಗ್ರಹಗಳನ್ನು ಹೊತ್ತ ಭಾರತದ ಅತ್ಯಂತ ಯಶಸ್ವೀ ಉಡಾವಣಾ ನೌಕೆ ಪಿಎಸ್‍ಎಲ್‍ವಿ-ಸಿ43 ನೌಕೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಉಡಾವಣೆಯಾಗಲಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ವಾಹಕದಿಂದ ಹೈಸಿಸ್ ಲೊಂಗ್ ಮತ್ತು 30 ವಿದೇಶಿ ಪುಟ್ಟ ಉಪಗ್ರಹಗಳನ್ನು ಹೊತ್ತ ದ್ರುವ ಉಪಗ್ರಹ ಉಡಾವಣೆ ವಾಹನ(ಪಿಎಸ್‍ಎಲ್‍ವಿ) ಉಡ್ಡಯನವಾಗಲಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ. ಹಿಂದೆಯೇ ಪಿಎಸ್‍ಎಲ್‍ವಿ-ಸಿ43 ಉಡಾವಣೆಯಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ಮುಂದೂಡಲ್ಪಟ್ಟಿತ್ತು.
ಭಾರತದ ಈ ಗಗನನೌಕೆಯಲ್ಲಿ ಅಮೆರಿಕದ 12 ಪುಟ್ಟ ಉಪಗ್ರಹಗಳನ್ನು ಅಂತರಿಕ್ಷಕ್ಕೆ ರವಾನಿಸಲು ಸ್ಪೇಸ್‍ಫ್ಲೈಟ್ ಸಂಸ್ಥೆ ವ್ಯವಸ್ಥೆ ಮಾಡಿದ್ದು, ಹಮಾವಾನ ಮುನ್ಸೂಚನೆ, ನೆಟ್ವರ್ಕ್ ವೇಗ ವೃದ್ಧಿ, ಜಾಗತಿಕ ಮಾಹಿತಿ ವಿನಿಮಯ, ಮಾಹಿತಿ-ತಂತ್ರಜ್ಞಾನ ಜಾಲ ವಿಸ್ತರಣೆ ಮೊದಲಾದ ಮಹತ್ವದ ಉದ್ದೇಶಗಳಿಗೆ ಈ ಉಪಗ್ರಹಗಳು ನೆರವಾಗಲಿದೆ. ಈ ಹಿಂದೆ ಪಿಎಸ್‍ಎಲ್‍ವಿ-ಸಿ ಸರಣಿಯ ಕೆಲವು ನೌಕೆಗಳನ್ನು ಯಶಸ್ವಿಯಾಗಿ ಇಸ್ರೋ ಉಡಾವಣೆ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics