ಜೇಮ್ಸ್ ವೆಬ್ ಟೆಲಿಸ್ಕೋಪನ್ನು ಹೊತ್ತ ರಾಕೆಟ್ ಉಡ್ಡಯನದ ದೃಶ್ಯ 
ವಿಜ್ಞಾನ-ತಂತ್ರಜ್ಞಾನ

ನಾಸಾದಿಂದ ಜಗತ್ತಿನ ಅತಿ ದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ಅಂತರಿಕ್ಷ ದೂರದರ್ಶಕ ಉಡಾವಣೆ

ವಿಶ್ವದ ಉಗಮ, ಭೂಮಿಯ ಹುಟ್ಟು, ನಾವು ಯಾರು, ಎಲ್ಲಿಂದ ಬಂದೆವು ಎಂಬಿತ್ಯಾದಿ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಮಾಡಲಿದೆ

ವಾಷಿಂಗ್ಟನ್: ಜಗತ್ತಿನ ಅತಿ ದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ಅಂತರಿಕ್ಷ ದೂರದರ್ಶಕವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದೆ. ವಿಶ್ವದ ಲಕ್ಷ ಕೋಟಿ ಕಿಲೋಮೀಟರುಗಳಷ್ಟು ದೂರದ ವಿದ್ಯಮಾನಗಳ ಮೇಲೆ ಕಣ್ಣಿಡಲು ಇದರಿಂದ ಬಲ ದೊರೆಯಲಿದೆ ಎಂದು ಪರಿಣತರು ತಿಳಿಸಿದ್ದಾರೆ.

ನಾಸಾದ ಈ ದೂರದರ್ಶಕದ ಹೆಸರು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್. ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನ ಸ್ಥಳದಿಂದ ಈ ದೂರದರ್ಶಕವನ್ನು ಹೊತ್ತ ರಾಕೆಟ್ ಅಂತರಿಕ್ಷಕ್ಕೆ ಪ್ರಯಾಣಿಸಿದೆ. 10 ಶತ ಕೋಟಿ ಡಾಲರ್ ಮೌಲ್ಯದ ಈ ದೂರದರ್ಶಕ ಭೂಮಿಯಿಂದ 16 ಲಕ್ಷ ಕಿ.ಮೀ ದೂರದಲ್ಲಿ ಸ್ಥಾಪಿತಗೊಳ್ಳಲಿದೆ. 

ಆ ಕಕ್ಷೆಗೆ ತಲುಪಲು ರಾಕೆಟ್ ಗೆ 1 ತಿಂಗಳು ಹಿಡಿಯುತ್ತದೆ. ಅಲ್ಲದೆ ಈ ದೂರದರ್ಶಕ ಕಾರ್ಯಾರಂಭ ಮಾಡಲು 5 ತಿಂಗಳು ಬೇಕಾಗಲಿದೆ ಎಂದು ನಾಸಾ ತಿಳಿಸಿದೆ. ವಿಶ್ವದ ಉಗಮ, ಭೂಮಿಯ ಹುಟ್ಟು, ನಾವು ಯಾರು, ಎಲ್ಲಿಂದ ಬಂದೆವು ಎಂಬಿತ್ಯಾದಿ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಮಾಡಲಿದೆ ಎಂದು ನಾಸಾ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!