ದೇಶದ ಅತ್ಯಂತ ಭಾರದ ಎಲ್ ವಿಎಂ3 ರಾಕೆಟ್ 
ವಿಜ್ಞಾನ-ತಂತ್ರಜ್ಞಾನ

ದೇಶದ ಅತ್ಯಂತ ಭಾರದ ಎಲ್ ವಿಎಂ3 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ, ಪೇಲೋಡ್ ಸಾಮರ್ಥ್ಯ ಹೆಚ್ಚಳ

ಯಶಸ್ವಿ ಎಂಜಿನ್ ಪರೀಕ್ಷೆಯೊಂದಿಗೆ ದೇಶದ ಅತ್ಯಂತ ಭಾರವಾದ ಎಲ್ ವಿಎಂ3  ರಾಕೆಟ್ ನ ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಯವರೆಗೂ ಹೆಚ್ಚಿಸಲಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.

ಬೆಂಗಳೂರು: ಯಶಸ್ವಿ ಎಂಜಿನ್ ಪರೀಕ್ಷೆಯೊಂದಿಗೆ ದೇಶದ ಅತ್ಯಂತ ಭಾರವಾದ ಎಲ್ ವಿಎಂ3  ರಾಕೆಟ್ ನ ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಯವರೆಗೂ ಹೆಚ್ಚಿಸಲಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.

ಉಡಾವಣಾ ವಾಹಕ ಎಲ್ ವಿಎಂ 3 ರಾಕೆಟ್ ಗಾಗಿ ಅಭಿವೃದ್ಧಿಪಡಿಸಿರುವ ಸ್ವದೇಶಿ ಸಿಇ20 ಕ್ರಯೋಜೆನಿಕ್ ಇಂಜಿನ್ ನ್ನು ನವೆಂಬರ್ 9 ರಂದು ಮೊದಲು 218 ಟನ್‌ಗಳ ಭಾರದೊಂದಿಗೆ ಯಶಸ್ವಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದು ಹೆಚ್ಚುವರಿ ಪ್ರೊಪೆಲ್ಹಾಂಟ್ ಲೋಡಿಂಗ್ ನೊಂದಿಗೆ  ಎಲ್ ವಿಎಂ3 ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಗೆ ಹೆಚ್ಚಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದರೊಂದಿಗೆ 3ಡಿ ಮುದ್ರಿತ ಎಲ್ ಒಎಕ್ಸ್ ಮತ್ತು ಎಲ್ ಹೆಚ್ 2 ಟರ್ಬೈನ್ ಎಕ್ಸಾಸ್ಟ್ ಕೇಸಿಂಗ್‌ಗಳನ್ನು ಇದೇ ಮೊದಲ ಬಾರಿಗೆ ಎಂಜಿನ್ ನಲ್ಲಿ ಅಳವಡಿಸಲಾಗಿದೆ. ಪರೀಕ್ಷೆ ವೇಳೆ ಎಂಜಿನ್ ಮತ್ತು ಸೌಲಭ್ಯದ ಕಾರ್ಯಕ್ಷಮತೆ ಸಾಮಾನ್ಯವಾಗಿದೆ ಮತ್ತು ಅಗತ್ಯವಿರುವ ನಿಯತಾಂಕಗಳನ್ನು ಸಾಧಿಸಲಾಗಿದೆ ಎಂದು ಅದು ಹೇಳಿದೆ.

ಮೂರು ಹಂತದ ಎಲ್ ವಿಎಂ 3 ರಾಕೆಟ್ ನಾಲ್ಕು ಟನ್ ಗಳ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Nationwide strike: 'ಕಾರ್ಮಿಕ ನೀತಿ' ವಿರೋಧಿಸಿ ದೇಶಾದ್ಯಂತ ಮುಷ್ಕರ: 30 ಕೋಟಿ ಕಾರ್ಮಿಕರು ಭಾಗಿ, ಬ್ಯಾಂಕಿಂಗ್, ವಿದ್ಯುತ್ ಸೇವೆ ವ್ಯತ್ಯಯ!

'ಲೋಕಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಹೊಂದುವ ಜವಾಬ್ದಾರಿಯುತ ವ್ಯಕ್ತಿ ದೇಶದಲ್ಲಿಲ್ಲದಿರುವುದು ದುರದೃಷ್ಟಕರ'

ಸ್ಪೀಕರ್ ಕೊಠಡಿಯಲ್ಲಿ ಕಾಂಗ್ರೆಸ್ ಸಂಸದರಿಂದ ಓಂ ಬಿರ್ಲಾ ಗೆ ನಿಂದನೆ, ಪ್ರಿಯಾಂಕಾ ಸಂಸದರನ್ನು ತಡೆಯಲಿಲ್ಲ: ರಿಜಿಜು

Thai school shooting: ಶಾಲೆ ಮೇಲೆ ಗುಂಡಿನ ಮಳೆ, 22 ಮಕ್ಕಳು ಸೇರಿ ಕನಿಷ್ಟ 34 ಸಾವು, ದಾಳಿಕೋರ ಪೊಲೀಸ್ ವಶಕ್ಕೆ!

ನರವಾಣೆ ಪುಸ್ತಕ ವಿವಾದ: 'ನಂಬರ್ ಒನ್' ಶಂಕಿತ, ಪೆಂಗ್ವಿನ್ ಪಬ್ಲಿಕೇಷನ್ಸ್‌ಗೆ ದೆಹಲಿ ಪೊಲೀಸರಿಂದ ನೋಟಿಸ್ ಜಾರಿ!

SCROLL FOR NEXT