ಮಗುವಿಗೆ ಕೇಕ್ ತಿನ್ನಿಸುತ್ತಿರುವ ಪೊಲೀಸ್ ಅಧಿಕಾರಿ 
ವಿಶೇಷ

ಪ್ರವಾಹದಿಂದ ರಕ್ಷಿಸಲ್ಪಟ್ಟ ಹೆಣ್ಣುಮಗುವಿನ ಹುಟ್ಟುಹಬ್ಬ ಅಚರಿಸಿದ ಚೆನ್ನೈ ಪೊಲೀಸರು

ಸೋಮವಾರ ಮತ್ತು ಮಂಗಳವಾರ ಚೆನ್ನೈ ನಗರದ ಕೆ.ಪಿ.ಕೆ ನಗರ ಮತ್ತು ಕಲ್ಲುಕುಟ್ಟೈ ಪ್ರದೇಶಗಳಲ್ಲಿ ಮಳೆಯಿಂದ ನೀರು ನುಗ್ಗಿ ಪ್ರದೇಶವಿಡೀ ಜಲಾವೃತಗೊಂಡಿತ್ತು. ಪ್ರವಾಹದಲ್ಲಿ ಹೆಣ್ಣುಮಗುವಿದ್ದ ಕೂಲಿಕಾರ್ಮಿಕ ಕುಟುಂಬವೊಂದು ಕೊಚ್ಚಿಹೋಗುತ್ತಿತ್ತು. ಅಷ್ಟರಲ್ಲಿ...

ಚೆನ್ನೈ: ಚೆನ್ನೈನ ತೊರೈಪಕ್ಕಂ ಪೊಲೀಸ್ ಠಾಣೆಯಲ್ಲಿ ಅಂದು ಹಬ್ಬದ ಸಂಭ್ರಮ. ಕಳ್ಳಕಾಕ, ಖದೀಮರ ವಿಚಾರಣೆಗಳಿಗೆ, ದೂರು ಸಲ್ಲಿಕೆಗೆ, ಅಹವಾಲು ಸ್ವೀಕರಿಸುವುದಕ್ಕೆ ಬಳಕೆಯಾಗುತ್ತಿದ್ದ ಪೊಲೀಸ್ ಠಾಣೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು.

ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆಗಳದೋ, ಪೊಲೀಸ್ ಅಧಿಕಾರಿಗಳದೋ ಹುಟ್ಟುಹಬ್ಬ ಆಗಿರುತ್ತಿದ್ದರೆ ಅದರಲ್ಲಿ ವಿಶೇಷ ಇರುತ್ತಿರಲಿಲ್ಲ. ಠಾಣೆಯ ಪೊಲಿಸರೆಲ್ಲರೂ ಆಚರಿಸಿದ್ದು ಹೆಣ್ಣುಮಗುವಿನ ಹುಟ್ಟುಹಬ್ಬವನ್ನು!

ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವುದು ಗೊತ್ತೇ ಇರುತ್ತದೆ. ಸೋಮವಾರ ಮತ್ತು ಮಂಗಳವಾರ ಚೆನ್ನೈ ನಗರದ ಕೆ.ಪಿ.ಕೆ ನಗರ ಮತ್ತು ಕಲ್ಲುಕುಟ್ಟೈ ಪ್ರದೇಶಗಳಲ್ಲಿ ಮಳೆಯಿಂದ ನೀರು ನುಗ್ಗಿ ಪ್ರದೇಶವಿಡೀ ಜಲಾವೃತಗೊಂಡಿತ್ತು. 

ರಕ್ಷಣಾ ಪಡೆ ಅಲ್ಲಿಗೆ ಧಾವಿಸುವ ವೇಳೆಗೆ ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ತಿಳಿದುಬಂದಿತು. ಅದು ಕೊಳಚೆಪ್ರದೇಶವಾಗಿದ್ದು, ಅಲ್ಲಿ ನೆಲೆಸಿದ್ದವರಲ್ಲಿ ಬಹಳಷ್ಟು ಮಂದಿ ಕೂಲಿ ಕಾರ್ಮಿಕರಾಗಿದ್ದರು. 

ಕೊಚ್ಚಿಕೊಂಡು ಹೋದವರ ರಕ್ಷಣೆಗೆ ಮುಂದಾದ ಸಿಬ್ಬಂದಿ ನೀರಿನಲ್ಲಿ ಸಿಲುಕಿಕೊಂಡಿದ್ದ ಹಲವು ಕುಟುಂಬಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಅಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ನೆಲೆ ಕಂಡುಕೊಂಡಿದ್ದ ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಕರೆದೊಯ್ಯಲಾಯಿತು.

ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಒಂದೆಡೆ ಸಿಲುಕಿಕೊಂಡಿದ್ದ ಕುಟುಂಬದಲ್ಲಿ ಹೆಣ್ಣುಮಗುವೂ ಸೇರಿತ್ತು. ಅದೇ ದಿನ ಆ ಮಗುವಿನ ಮೊದಲ ವರ್ಷದ ಹುಟ್ಟಿದ ಹಬ್ಬ ಎನ್ನುವ ವಿಷಯ ಪೊಲೀಸರಿಗೆ ನಂತರ ತಿಳಿದುಬಂತು. ಒಡನೆಯೇ ಪೊಲೀಸರೆಲ್ಲರೂ ಸೇರಿ ಹೆಣ್ಣುಮಗುವಿನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಠಾಣೆಯಲ್ಲಿ ಆಚರಿಸಲು ನಿರ್ಧರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT