ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಶೇಷ

ಚತ್ತೀಸ್ ಗಢ ಬುಡಕಟ್ಟು ಜನರಿಂದ ಪರಿಸರಸ್ನೇಹಿ ಬಿದಿರಿನ ಸೈಕಲ್ 'ಬ್ಯಾಂಬೂಕಾ' ಉತ್ಪಾದನೆ: ಬೆಲೆ ಬಲು ದುಬಾರಿ!

ಮಾರುಕಟ್ಟೆಯಲ್ಲಿ ಲಭ್ಯವಿರುವ ಸೈಕಲ್ಲುಗಳಿಗೆ ಹೋಲಿಸಿದರೆ ಬಿದಿರಿನ ಸೈಕಲ್ ಅವುಗಳಿಗಿಂತ ಶೇ.60 ಪ್ರತಿಶತ ಕಡಿಮೆ ತೂಕವನ್ನು ಹೊಂದಿದೆ.

ಬಿದಿರಿನ ಸೈಕಲ್
Harshavardhan M
Updated On : 29 Nov 2021, 7:12 pm

ರಾಯ್ಪುರ: ಬಿದಿರನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ವಸ್ತುಪ್ರದರ್ಶನಗಳಲ್ಲಿ ಅದನ್ನು ನಾವು ಕಾಣಬಹುದು. ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಚತ್ತೀಸ್ ಗಢದ ಜಗ್ದಾಲ್ಪುರದಲ್ಲಿ ಪರಿಣತರು 'ಬ್ಯಾಂಬೂಕಾ' ಎನ್ನುವ ಬಿದಿರಿನ ಸೈಕಲ್ ತಯಾರಿಸುವುದರ ಮೂಲಕ ದೇಶದ ಗಮನ ಸೆಳೆದಿದ್ದಾರೆ. 

ಇದನ್ನೂ ಓದಿ:  ಶಾಸನಗಳ 3ಡಿ ಡಿಜಿಟಲ್‌ ಸಂರಕ್ಷಣೆ ಮೂಲಕ ಇತಿಹಾಸ ಉಳಿಸುವ ಪ್ರಯತ್ನ: 'ಬೆಂಗಳೂರು ಇತಿಹಾಸ ವೈಭವ'ದ ಮೊದಲನೇ ಸಂಚಿಕೆಯ ಇ- ಕಾಪಿ ಬಿಡುಗಡೆ 

ಸ್ಥಳೀಯ ಬುಡಕಟ್ಟು ಜನರ ಸಹಾಯದಿಂದ ಈ ಬಿದಿರಿನ ಸೈಕಲ್ ತಯಾರಾಗಿದೆ ಎನ್ನುವುದು ವಿಶೇಷ. ಜೀವನನಿರ್ವಹಣೆಗೆ ಬಿದಿರಿನ ವಸ್ತುಗಳನ್ನು ಮಾಡುತ್ತಿದ್ದ ಇಲ್ಲಿನ ಮಂದಿ ಕೊರೊನಾ ಕಾರಣದಿಂದ ತೀವ್ರ ಸಂಕಷ್ಟವನ್ನು ಎದುರಿಸಿದ್ದರು. 

Advertisement

Advertisement

ಇದನ್ನೂ ಓದಿ:  ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್

ಬಿದಿರಿನ ಸೈಕಲ್ ನಿರ್ಮಾಣದ ಹಿಂದೆ ನ್ಯಾಚುರೋಸ್ಕೋಪ್ ಎನ್ನುವ ಸ್ವಸಹಾಯ ಸಂಘಟನೆ ಕಾರ್ಯನಿರ್ವಹಿಸಿದೆ. ಸಂಘಟನೆಯ ನೆರವಿನಿಂದ ಬುಡಕಟ್ಟು ಜನರು ಬಿದಿರಿನ ಸೈಕಲ್ ತಯಾರಾಗಿದೆ.

ಇದನ್ನೂ ಓದಿ: ಕಲ್ಲಿದ್ದಲು ತ್ಯಾಜ್ಯದಿಂದ ಅತ್ಯಾಕರ್ಷಕ ಆಭರಣ ಸೃಷ್ಟಿ: ಭಾರತೀಯ ವಿಜ್ಞಾನಿಗಳ ಸಾಧನೆ

ಮಾರುಕಟ್ಟೆಯಲ್ಲಿ ಲಭ್ಯವಿರುವ ಸೈಕಲ್ಲುಗಳಿಗೆ ಹೋಲಿಸಿದರೆ ಬಿದಿರಿನ ಸೈಕಲ್ ಅವುಗಳಿಗಿಂತ ಶೇ.60 ಪ್ರತಿಶತ ಕಡಿಮೆ ತೂಕವನ್ನು ಹೊಂದಿದೆ. ಬಿದಿರಿನ ಸೈಕಲ್ ಭಾರ 8.2 ಕೆ.ಜಿ.

ಇದನ್ನೂ ಓದಿ:  ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆ

ಈ ಸೈಕಲ್ ಬೆಲೆ 35,000 ರೂ.ಗಳಾಗಿದೆ. ಬೆಲೆ ದುಬಾರಿಯಾಯಿತು ಎನ್ನುವುದನ್ನು ಒಪ್ಪಿಕೊಳ್ಳುವ ನ್ಯಾಚುರೊಸ್ಕೋಪಿ ಕಾರ್ಯಕರ್ತರು ಅದಕ್ಕೆ ಕಾರಣವನ್ನೂ ನೀಡುತ್ತಾರೆ. 

ಇದನ್ನೂ ಓದಿ: ಪಶ್ಚಿಮ ಬಂಗಾಳ: ಕಾಳಿ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಡ ಮುಸ್ಲಿಂ ರೈತ

ಒಂದು ಬಿದಿರಿನ ಸೈಕಲ್ ತಯಾರಾಗಲು 20 ದಿನಗಳು ತಗುಲುತ್ತವೆ. ಬಿದಿರನ್ನು ಕೆಮಿಕಲ್ ಬಳಸಿ ದೀರ್ಘ ಬಾಳಿಕೆಗೆ ತಕ್ಕಂತೆ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ.

ಇದನ್ನೂ ಓದಿ: ಬಳ್ಳಾರಿಯ 1 ರೂಪಾಯಿ ಭಿಕ್ಷುಕನ ಅಂತ್ಯಕ್ರಿಯೆಗೆ 4 ಸಾವಿರಕ್ಕೂ ಹೆಚ್ಚು ಜನ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments