ವಿಶೇಷ

ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ

Harshavardhan M

ವಿಜಯವಾಡ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮಾಟ್ಲಾ ಯಶಸ್ವಿ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶೀಘ್ರದಲ್ಲಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಇನ್ಸ್ ಪೈರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಚಿಕನ್ ಮತ್ತು ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ವಸ್ತುಗಳನ್ನು ತಯಾರಿಸಿ ಅವರು ದೇಶದ ಗಮನ ಸೆಳೆದಿದ್ದಾರೆ. ದೇಶಾದ್ಯಂತ ಒಟ್ಟು 581 ಪ್ರಾಜೆಕ್ಟ್ ಗಳು ಪ್ರಶಸ್ತಿಗಾಗಿ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಯಶಸ್ವಿ ಪ್ರಾಜೆಕ್ಟ್ ಆಯ್ಕೆಯಾಗಿದೆ. ತ್ಯಾಜ್ಯದಲ್ಲಿ ಚಿಕನ್ ಗರಿಗಳು ಮತ್ತು ಮೀನಿನ ಮುಳ್ಳುಗಳು ಪರಿಸರಕ್ಕೆ ಹಾನಿಯುಂಟುಮಾಡುತ್ತದೆ. 

ಪುಕ್ಕಗಳಲ್ಲಿ ಶೇ.90ರಷ್ಟು ಕೆರಾಟಿನ್ ಇರುತ್ತದೆ, ಮೀನಿನ ಮುಳ್ಳುಗಳಲ್ಲಿ ಕೊಲಾಜೆನ್, ಕ್ಯಾಲ್ಷಿಯಂ ಕಾರ್ಬೊನೇಟ್ ಇರುತ್ತದೆ. ಈ ಅಂಶಗಳು ಇರುವುದರಿಂದ ಅವನ್ನು ಹಗುರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಸಬಹುದು ಎನ್ನುತ್ತಾರೆ ಯಶಸ್ವಿ. 

ಪುಕ್ಕಗಳ ಡಿಸ್ಕ್ ತಯಾರಿಸಿ ಅದನ್ನು ಕಾರ್ಖಾನೆಗಳ ಚಿಮಣಿ ಕೊಳವೆ ಮೇಲೆ ಇರಿಸುವುದರಿಂದ ವಾಯುಮಾಲಿನ್ಯವನ್ನು ನಿಯಂತ್ರಿಸಬಹುದು. ಚಿಕನ್ ಪುಕ್ಕ, ಮೀನಿನ ಮುಳ್ಳುಗಳನ್ನು ಬಳಸಿ ಬಯೊ ಪ್ಲಾಸ್ಟಿಕ್ ತಯಾರಿಸಬಹುದು ಎನ್ನುವುದರ ಬಗ್ಗೆಗೆ ಯಶಸ್ವಿ ಪ್ರಾಜೆಕ್ಟ್ ಮಾಹಿತಿ ನೀಡಿದೆ. 

SCROLL FOR NEXT