ಸಾಂದರ್ಭಿಕ ಚಿತ್ರ 
ವಿಶೇಷ

ಉಡುಪಿಯ ಅಜ್ಜರಕಾಡಿನಿಂದ ಹಿಮಾಲಯ ಸನ್ನಿಧಿಯಲ್ಲಿ ಪರ್ವತಾರೋಹಿ ಸುಮಲತಾ

ಪರ್ವತಾರೋಹಣಕ್ಕೆ ದೈಹಿಕ ಶಕ್ತಿ ಬೇಕು. ಆದರೆ ದೈಹಿಕ ಶಕ್ತಿ ಇದ್ದ ಮಾತ್ರಕ್ಕೆ ಪರ್ವತಾರೋಹಣ ಸಲೀಸಾಗುತ್ತದೆ ಎನ್ನುವುದು ತಪ್ಪು. ಪರ್ವತಾರೋಹಣದಲ್ಲಿ ಅತಿ ಮುಖ್ಯವಾಗಿ ಬೇಕಾಗಿರುವುದು ಮನೋಬಲ.

ಉಡುಪಿ: ಕೂಲಿ ಕಾರ್ಮಿಕರ ಮಕ್ಕಳು ಕಲಿಕೆಯಲ್ಲಿ ಸಾಧನೆ ಮಾಡುವ ಸುದ್ದಿಗಳು ಮಾಧ್ಯಮಗಳಲ್ಲಿ ಬಹುತೇಕರು ನೋಡಿಯೇ ಇರುತ್ತಾರೆ. ಉಡುಪಿಯ ಕೂಲಿ ಕಾರ್ಮಿಕಳ ಪುತ್ರಿ ಹಿಮಾಲಯ ಶೇಣಿಗಳನ್ನು ಏರುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ. 

ಸುಮಲತಾ ಬಜಗೋಳಿ ಅವರ ಹೆಸರು. ಕಾರ್ಕಳ ತಾಲ್ಲೂಕಿನ ಬಜಗೋಳಿ ಅವರ ಊರು. 23 ವರ್ಷ ವಯಸ್ಸಿನಲ್ಲಿಯೇ ಅವರು ಈ ಪರ್ವತಾರೋಹಣದ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವುದು ಹೆಮ್ಮೆಯ ವಿಚಾರವೇ ಸರಿ. 

ಹಿಮಾಲಯನ್ ಹುಡುಗಿ ಉಡುಪಿಯ ಸುಮಲತಾ

ವಾರ್ಡನ್ ನಿಂದ ಸಹಾಯ

ಸಾಧನೆಯ ಪಯಣದಲ್ಲಿ ಸಹಾಯ ಚಾಚುವ ನೂರಾರು ಹಸ್ತಗಳು ಎದುರಾಗುತ್ತವೆ. ಅದೇ ರೀತಿ ಸುಮಲತಾ ಅವರಿಗೆ ಕಾಲೇಜು ದಿನಗಳಲ್ಲಿ ಪರ್ವತಾರೋಹಣ ಕೈಗೊಳ್ಳಲು ವಾರ್ಡನ್ ಸುಮಲತಾ ಸುಚಿತ್ರಾ ಸುವರ್ಣ ಎಂಬುವವರು ಸ್ಫೂರ್ತಿ ಮತ್ತು ಸಹಾಯ ಮಾಡಿದ್ದನ್ನು ಅವರು ಸ್ಮರಿಸಿಕೊಳ್ಳುತ್ತಾರೆ. ಸುಮಲತಾ ಅವರು ಅಜ್ಜರಕಾಡು ಡಾ.ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಬಿ.ಎ ಓದುವಾಗಲೇ ಅವರಿಗೆ ಪರ್ವತಾರೋಹಣದಲ್ಲಿ ಸಾಧನೆ ಮಾಡುವ ಮನಸ್ಸು ಬಲವಾಗಿದ್ದು. 

ಮೊದಲಿಗೆ ಹಿಂದೇಟು ಹಾಕಿದ್ದ ತಂದೆ ತಾಯಿ

ಯಾವ ತಂದೆ ತಾಯಿಯೇ ಆದರೂ ತಮ್ಮ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಚೆನ್ನಾಗಿ ಅಗುವ ಬಗ್ಗೆ ಕನಸು ಕಾಣುತ್ತಾರೆ. ಅದನ್ನು ಹೊರತುಪಡಿಸಿ ಸಾಧನೆಯ ಮಾರ್ಗದಲ್ಲಿ ಮಕ್ಕಳು ಮುನ್ನಡೆದಾಗ ತಾತ್ಕಾಲಿಕವಾಗಿ ಆತಂಕಿತರಾಗುತ್ತಾರೆ. ಎಲ್ಲರಂತೆ ನೌಕರಿ ಹಾದಿಯಲ್ಲಿಯೇ ಸಾಗಬಾರದೇಕೆ ಎಂದು ಅಂದುಕೊಳ್ಳುತ್ತಾರೆ. ಅದೇ ರೀತಿ, ಮನೆಯಲ್ಲಿ ಪರ್ವತಾರೋಹಣ ಕ್ಷೇತ್ರದಲ್ಲಿ ಮುಂದುವರಿಯುವುದಾಗಿ ಹೇಳಿದಾದ ಮೊದಲಿಗೆ ಅವರ ಪಾಲಕರು ಹಿಂದೆ ಮುಂದೆ ನೋಡಿದ್ದರು. ಆದರೆ ಮಗಳ ಒತ್ತಾಸೆ ಮತ್ತು ಆಸಕ್ತಿ ಕಂಡು ಅದಕ್ಕೆ ಅನುಮತಿ ನೀಡಿದ್ದರು. 

ಪರ್ವತಾರೋಹಣಕ್ಕೆ ದೈಹಿಕ ಶಕ್ತಿ ಮುಖ್ಯವಲ್ಲ

ಪರ್ವತಾರೋಹಣ ಕ್ಷೇತ್ರವನ್ನು ಸ್ಥೂಲವಾಗಿ ಗಮನಿಸಿದರೆ ಅದರಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡಿರುವ ಸಂಗತಿ ತಿಳಿಯುತ್ತದೆ. ಅದೇನೋ ಸರಿ ಆದರೆ ಅಷ್ಟು ಮಾತ್ರದಿಂದ ಪರ್ವತಾರೋಹಣ ಎಂದರೆ ಶಕ್ತಿಶಾಲಿಗಳಿಗೆ ಮಾತ್ರ ಎಂದುಕೊಂಡರೆ ಅದು ತಪ್ಪಾಗುತ್ತದೆ. 

ಪರ್ವತಾರೋಹಣಕ್ಕೆ ದೈಹಿಕ ಶಕ್ತಿ ಬೇಕು. ಆದರೆ ದೈಹಿಕ ಶಕ್ತಿ ಇದ್ದ ಮಾತ್ರಕ್ಕೆ ಪರ್ವತಾರೋಹಣ ಸಲೀಸಾಗುತ್ತದೆ ಎನ್ನುವುದು ತಪ್ಪು. ಪರ್ವತಾರೋಹಣದಲ್ಲಿ ಅತಿ ಮುಖ್ಯವಾಗಿ ಬೇಕಾಗಿರುವುದು ಮನೋಬಲ. ದೈಹಿಕ ಬಲಕ್ಕಿಂತಲೂ ಮನೋ ಹೆಚ್ಚಿನ ಪ್ರಮಾಣದಲ್ಲಿ ಮುಖ್ಯವಾಗುತ್ತಿಅದೆ ಎನ್ನುವುದು ಸುಮಲತಾರ ನಂಬಿಕೆ. 

ಜನರಲ್ ತಿಮ್ಮಯ್ಯ ಪರ್ವತಾರೋಹಣ ಸಂಸ್ಥೆಯಲ್ಲಿ ತರಬೇತಿ

ಮೌಂಟ್ ಎವರೆಸ್ಟ್ ಏರುವುದು ಸುಮಲತಾರ ಕನಸು ಮತ್ತು ಧ್ಯೇಯ. ಅದಕ್ಕೂ ಮುಂಚೆ ಹಿಮಾಲಯದಲ್ಲಿನ ಇತರೆ ಶಿಖರಗಳನ್ನು ಏರುವ ಮೂಲಕ ಅವರು ಅದಕ್ಕೆ ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಜನರಲ್ ತಿಮ್ಮಯ್ಯ ಪರ್ವತಾರೋಹಣ ಸಮ್ಸ್ಥೆಯಲ್ಲಿ ಸುಮಲತಾ ಅವರು ತರಬೇತಿ ಪಡೆದಿದ್ದಾರೆ ಎನ್ನುವುದು ಗಮನಾರ್ಹ. 

ಮೌಂಟ್ ಎವರೆಸ್ಟ್ ಶಿಖರ ಏರಲು ಬೇಕಾದ ಡಿಸಿಪ್ಲಿನ್ ಗಳೆಲ್ಲವನ್ನೂ ಸುಮಲತಾ ಮೈಗೂಡಿಸಿಕೊಂಡಿದ್ದಾರೆ ಎಂದು ಶಿಷ್ಯೆಯ ಕುರಿತು ಆತ್ಮವಿಶ್ವಾಸದ ನುಡಿಗಳನ್ನಾಡುತ್ತಾರೆ ತರಬೇತುದಾರ, ಅಂತಾರಾಷ್ಟ್ರೀಯ ಪರ್ವತಾರೋಹಿ ರಾಜೇಂದ್ರ ಹಸಬಾವಿ. 

ಏರಿದ ಶಿಖರಗಳು

ಅಜ್ಜರಕಾಡಿನ ಗ್ರಾಮದಲ್ಲಿ ಅವರು ಹಿಮಾಲಯದ ಹುಡುಗಿ ಎಂದೇ ಹೆಸರಾಗಿದ್ದಾರೆ. ಅವರ ಸಾಧನೆಗಾಗಿ ಇಡೀ ಗ್ರಾಮವೇ ಹೆಮ್ಮೆಪಡುತ್ತಿದೆ. 2017ರಲ್ಲಿ 14,800 ಅಡಿ ಎತ್ತರದ ಸಿಕಂದರ್ ಶಿಖರವನ್ನು ಏರುವ ಮೂಲಕ ಅಲ್ಟಿಟ್ಯೂಡ್ ಸಿಕ್ ನೆಸ್ ಸವಾಲನ್ನು ಅನ್ನು ಮೆಟ್ಟಿ ನಿಂತಿದ್ದರು. ನಂತರ 11,500 ಅಡಿ ಎತ್ತರದ ಸೋನಾಮಾರ್ಗ್ ಹಾಗೂ ಸೆಪ್ಟೆಂಬರಿನಲ್ಲಿ 15,407 ಅಡಿ ಎತ್ತರದ ಪಹಾಲ್ಗಂ ಶಿಖರ ಏರಿದ್ದರು. ಅವರ ಗುರಿ ಅಚಲವಾಗಿ ಮೌಂಟ್ ಎವರೆಸ್ಟ್ ಶಿಖರದತ್ತ ನೆಟ್ಟಿದೆ. 

Related Article

ಪ್ರಾಜೆಕ್ಟ್ ದಿಯಾ: ಗುಜರಿ ಸೈಕಲ್ ಗಳನ್ನೇ ರೀಸೈಕಲ್ ಮಾಡುವ ಸನಾತನ ಸೆಲ್ವಂ

ಬಂಗಾಳದ ವಲಸೆ ಕಾರ್ಮಿಕನಿಗೆ ಒಲಿದ 70 ಲಕ್ಷ ರೂ. ಕೇರಳ ಬಂಪರ್ ಲಾಟರಿ: ಪೊಲೀಸ್ ಠಾಣೆಗೆ ಓಡಿದ ವಿಜೇತ

ಜನರ ಕುಚೋದ್ಯಗಳಿಂದ ನೊಂದು ಕಾಡು ಸೇರಿದ್ದ 'ರಿಯಲ್‌ ಲೈಫ್ ಮೋಗ್ಲಿ' ಜಂಜೀಮನ್ ಏಲಿ ಮತ್ತೆ ನಾಡಿಗೆ!

ಆತ್ಮಹತ್ಯೆಗೈದ 2,500 ರೈತರ ಕುಟುಂಬಗಳಿಗೆ ಅಚ್ಛೇ ದಿನ್: 20 ವರ್ಷಗಳಿಂದ ಅವರ ಸೇವೆಯಲ್ಲಿ ನಿರತರಾಗಿರುವ ಅಸಲಿ ಮಣ್ಣಿನ ಮಗ

ರೈಲು ಬೋಗಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ: ಮಕ್ಕಳನ್ನು ಸೆಳೆಯಲು ಮುಖ್ಯೋಪಾಧ್ಯಾಯರ ತಂತ್ರ

ಕೂತಿ ಎಂದರೆ ಹೊಡಿ ಸೀಟಿ: ಕೊಡಗಿನಲ್ಲೊಂದು ಮಾದರಿ ಆತ್ಮನಿರ್ಭರ್ ಗ್ರಾಮ

ಜಾರ್ಖಂಡ್ ನಲ್ಲೊಬ್ಬ ಜಬರ್ ದಸ್ತ್ ಕೋಚ್: ರಾಷ್ಟ್ರೀಯ ಫುಟ್ ಬಾಲ್ ಪಂದ್ಯಾವಳಿಗಳಿಗೆ 25 ಮಂದಿ ಶಿಷ್ಯಂದಿರು ಆಯ್ಕೆ

ಮಿಡಿಯದ ಜೀವನ ವೀಣೆ: ಸಿಂಪಾಡಿಪುರದ ವೀಣೆ ತಯಾರಕರ ಕಥೆ ವ್ಯಥೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR, ಸರಪಂಚ್ ಬಂಧನ!

ದಂಪತಿಗಳು ಒಂದು ಅಥವಾ ಎರಡು ಮಕ್ಕಳ ಮಾತ್ರ ಮಾಡಿಕೊಳ್ಳಬೇಕು: ಸಿಎಂ ಸಿದ್ದರಾಮಯ್ಯ

ಆಫ್ರಿಕಾದಲ್ಲಿ ಮತ್ತೊಂದು ದಂಗೆ: ಬೆನಿನ್ ಅಧ್ಯಕ್ಷನ ಪದಚ್ಯುತಿ, ಆಡಳಿತ ಮಿಲಿಟರಿ ವಶಕ್ಕೆ, TV ಯಲ್ಲಿ ಕಾಣಿಸಿಕೊಂಡ ಸೈನಿಕರು ಮಾಡಿದ್ದೇನು?

610 ಕೋಟಿ ರೂ. ವಾಪಸ್: ಆರು ದಿನಗಳ ಇಂಡಿಗೋ ವಿಮಾನ ರದ್ದತಿ ಅವ್ಯವಸ್ಥೆ ಬಳಿಕ ಪ್ರಯಾಣಿಕರಿಗೆ ರೀಫಂಡ್!

Goa Nightclub Tragedy: ನೈಟ್‌ಕ್ಲಬ್‌ ಮ್ಯಾನೇಜರ್‌ ಬಂಧನ; ಮಾಲೀಕನ ವಿರುದ್ಧ ವಾರಂಟ್‌ ಜಾರಿ

SCROLL FOR NEXT