ಕ್ಯೂಬಾ ನಾಯಕ ಫಿಡೆಲ್ ಕ್ಯಾಸ್ಟ್ರೊ ಜೊತೆ ತಾವು ಹಾಗೂ ಮರಡೋನಾ ಇರುವ ಫೋಟೊ ತೋರಿಸುತ್ತಿರುವ ಮೇವಿಸ್ 
ಕ್ರೀಡೆ

ಫುಟ್ಬಾಲ್ ದಂತಕಥೆ ಮರಡೋನಾರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ: ಮಹಿಳೆಯಿಂದ ಆರೋಪ

ಮೇವಿಸ್ ಅಲ್ವರೆಜ್ ಅವರು ಸಧ್ಯ ಅಮೆರಿಕದ ಮಯಾಮಿಯಲ್ಲಿ ನೆಲೆಸಿದ್ದಾರೆ. ಮರಡೋನಾ ಅವರು ತಮಗೆ ಡ್ರಗ್ ಸೇವಿಸುವಂತೆ ಒತ್ತಡ ಹೇರುತ್ತಿದ್ದುದಾಗಿಯೂ ಹೇಳಿದ್ದಾರೆ. 

ಹವಾನಾ: ಫುಟ್ಬಾಲ್ ದಂತಕಥೆ ದಿವಂಗತ ಡಿಯೆಗೊ ಮರಡೋನಾ ಆವರ ಮೇಲೆ ಮಹಿಳೆಯೋರ್ವರು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಮಾಡಿದ್ದಾರೆ. 37 ವರ್ಷದ ಕ್ಯೂಬಾ ಪ್ರಜೆ ಮೇವಿಸ್ ಅಲ್ವರೆಜ್ ಎಂಬುವವರು ಆರೋಪ ಮಾಡಿರುವ ಮಹಿಳೆ.

17ನೇ ವಯಸ್ಸಿನಲ್ಲಿದ್ದಾಗಲೇ ಮರಡೋನಾ ಜೊತೆ ತಾವು ಅಫೇರ್ ಹೊಂದಿದ್ದಾಗಿ ಅವರು ತಿಳಿಸಿದ್ದಾರೆ. ಜೊತೆ ಇದ್ದಾಗ ಅವರು ತಮ್ಮ ಮೇಲೆ ಹಿಂಸೆ ನಡೆಸಿದ್ದಲ್ಲದೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಗೃಹಬಂಧನದಲ್ಲಿ ಇರಿಸುತ್ತಿದ್ದುದಾಗಿಯೂ ಅವರು ಆರೋಪ ಹೊರಿಸಿದ್ದಾರೆ. 

ಮೇವಿಸ್ ಅಲ್ವರೆಜ್ ಅವರು ಸಧ್ಯ ಅಮೆರಿಕದ ಮಯಾಮಿಯಲ್ಲಿ ನೆಲೆಸಿದ್ದಾರೆ. ಮರಡೋನಾ ಅವರು ತಮಗೆ ಡ್ರಗ್ ಸೇವಿಸುವಂತೆ ಒತ್ತಡ ಹೇರುತ್ತಿದ್ದುದಾಗಿಯೂ ಹೇಳಿದ್ದಾರೆ. 

ಮರಡೋನಾ ಮತ್ತು ತಾವು 4- 5 ವರ್ಷಗಳ ಕಾಲ ಜೊತೆಯಿದ್ದುದಾಗಿಯೂ ಹೇಳಿರುವ ಮೇವಿಸ್ ಈಗ ಇಬ್ಬರು ಮಕ್ಕಳ ತಾಯಿ. ಪತ್ರಿಕೆಗಳಲ್ಲಿ ಬಂದ ಆಕೆಯ ಸಂದರ್ಶನವನ್ನು ಆಧರಿಸಿ ''ಪೀಸ್'' ಎನ್ನುವ ಎನ್ ಜಿ ಒ ಒಂದು ಕ್ಯೂಬಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. 

ನಾನು ಅನುಭವಿಸಿದ ನೋವನ್ನು ಇತರರು ಅನುಭವಿಸದೇ ಇರಲಿ ಎನ್ನುವ ಸದುದ್ದೇಶಕ್ಕೆ ತಾವು ತಮ್ಮ ನೋವನ್ನು ಹೊರಹಾಕಿರುವುದಾಗಿ ಮೇವಿಸ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಹಾಗೆಯೇ ದೌರ್ಜನ್ಯ ಅನುಭವಿಸಿದ ಮಹಿಳೆಯರು ತಮ್ಮ ನೋವನ್ನು ಹೊರಹಾಕಲು ಸ್ಥೈರ್ಯ ತುಂಬುವ ಕೆಲಸ ಮಾಡುವುದು ಇದರ ಹಿಂದಿನ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!