ಮಕರಂದ/ದೋಣಿ

ಪೆನ್ನುಡಿ

ರೇ ಬ್ರಾಡ್‌ಬರಿ, ಅಮೆರಿಕದ ಅತಿ ದೊಡ್ಡ ಲೇಖಕ. ಈತ ಬರೆದ ಕತೆಗಳ ಸಂಖ್ಯೆ ಅಕ್ಷರಶಃ ಸಾವಿರಾರು. ಜನಪ್ರಿಯ ಸೈನ್ಸ್ ಫಿಕ್ಷನ್ ಹಾಗೂ ಹಾರರ್ ಕಾದಂಬರಿ ರಚನೆಯಲ್ಲಿ ಈತ ಮಾಸ್ಟರ್. ಈತನ ಹತ್ತಾರು ಕಾದಂಬರಿಗಳು ಚಲನಚಿತ್ರಗಳಾಗಿವೆ. ನಿರಂತರವಾಗಿ ಬರೆಯುವ ಅಗತ್ಯವನ್ನು ಪ್ರತಿಪಾದಿಸುತ್ತಿದ್ದ ಈತ ಸಾಹಿತ್ಯರಚನೆಯ ಬಗ್ಗೆ ಹೇಳಿದ್ದು ಇಲ್ಲಿದೆ.
    ಬರೆಯುವುದು ಕೆಲಸವಲ್ಲ, ಅದೊಂದು ಬ್ಯುಸಿನೆಸ್ಸೂ ಅಲ್ಲ. ಅದೊಂದು ಖುಷಿ, ಅದೊಂದು ಉತ್ಸವ. ಬರೆಯುವುದರಲ್ಲಿ ನಿಮಗೆ ಖುಷಿಯಿಲ್ಲವಾದರೆ, ರೈಟರ್ಸ್ ಬ್ಲಾಕ್ ನಿಮಗೆ ತುಂಬಾ ತೊಂದ್ರೆ ಕೊಡುತ್ತೆ ಅಂತಾದರೆ, ನೀವು ಬರೆಯುವುದನ್ನು ಬಿಟ್ಟು ಬೇರೇನಾದ್ರೂ ಮಾಡೋದು ವಾಸಿ.
    ನನ್ನ ಬರಹಗಳಲ್ಲಿ ಪ್ರತೀಕಗಳನ್ನು ನಾನು ಪ್ರಜ್ಞಾಪೂರ್ವಕವಾಗಿ ತುರುಕುವುದಿಲ್ಲ. ಸೃಜನಶೀಲ ಕೆಲಸವನ್ನು ಸುಪ್ತಪ್ರಜ್ಞೆಗೆ ಒಪ್ಪಿಸಿದಿರೆಂದರೆ ನೀವು ಸೋತಂತೆಯೇ. ಅತ್ಯುತ್ತಮ ರೂಪಕಗಳು ಸಹಜ ಹಾಗೂ ಪೂರ್ವನಿರ್ಧರಿತವಲ್ಲದವು. ಜೀವಿತಕಾಲದಲ್ಲಿ ವ್ಯಕ್ತಿ ಸಂಗ್ರಹಿಸಿಕೊಂಡ ನೆನಪು, ಅನುಭವ, ಮಾಹಿತಿಗಳೇ ಬರೆಯುವ ಕುದಿತದ ವೇಳೆಯಲ್ಲಿ ರೂಪಕಗಳಾಗಿ ಒದಗುತ್ತವೆ.
    ನಾವು ಸದಾ ಯುದ್ದಸನ್ನದ್ಧರಾಗಿರಬೇಕು. ಶಸ್ತ್ರಗಳನ್ನು ಧರಿಸಿ ಅಭ್ಯಾಸ ಮಾಡುತ್ತಲೇ ಇರಬೇಕು. ಒಬ್ಬ ಸಂಗೀತಗಾರ, ಒಂದು ದಿನ ಅಭ್ಯಾಸ ಮರೆತರೆ ಅದರ ಪರಿಣಾಮ ಅವನಿಗೇ ಗೊತ್ತಾಗುತ್ತದೆ. ಎರಡು ದಿನ ಬಿಟ್ಟರೆ ವಿಮರ್ಶಕರಿಗೆ, ಮೂರು ದಿನ ಬಿಟ್ಟರೆ ಶ್ರೋತ್ರಗಳಿಗೆಲ್ಲ ಗೊತ್ತಾಗುತ್ತದೆ. ಹಾಗೇ ಬರವಣಿಗೆ ಕೂಡ. ಸೋಮಾರಿಯಾದರೆ ಜಗತ್ತು ನಿಮ್ಮನ್ನು ಆಕ್ರಮಿಸಿ ತನ್ನ ವಿಷವನ್ನು ನಿಮ್ಮಲ್ಲಿ ತುಂಬಿಬಿಡುತ್ತದೆ.
    ಕವಿತೆ ನಮ್ಮ ಸಂವೇದನೆಯನ್ನು ಜಾಗೃತವಾಗಿಡುತ್ತದೆ. ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆಗಳನ್ನು ಶುದ್ಧವಾಗಿಡುತ್ತದೆ. ರೂಪಕಗಳು ಬೆಕ್ಕುಗಳ ಹಾಗೆ. ನೀವು ಅವನ್ನು ಎಚ್ಚರದಿಂದ ಎತ್ತಿಕೊಂಡು ಮುದ್ದು ಮಾಡಿ ಕೆಳಗಿಳಿಸಬೇಕು. ಹಾಗಿದ್ದರೆ ಅವು ನಿಮ್ಮನ್ನು ಹಿಂಬಾಲಿಸುತ್ತವೆ.   
    ಪ್ರತಿರಾತ್ರಿ ಮಲಗುವ ಮುನ್ನ ಒಂದು ಕತೆ, ಒಂದು ಕವಿತೆ, ಒಂದು ಪ್ರಬಂಧ ಓದಿಯೇ ಮಲಗಿ. ನಿಮ್ಮನ್ನು ಗೇಲಿ ಮಾಡುವ ಗೆಳೆಯರನ್ನು ಒದ್ದೋಡಿಸಿ. ಪದವಿ ಪಡೆಯಿರಿ- ಕಾಲೇಜಿನಿಂದಲ್ಲ, ಲೈಬ್ರರಿಯಿಂದ.

-ಹರೀಶ್ ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್