ಬೈಟುಕಾಫಿ

ಗೋಸುಂಬೆಯ ಬಣ್ಣ ಬದಲಾಗುವುದು ಹೇಗೆ?

ಗೋಸುಂಬೆಗಳು ಹಲ್ಲಿ ಜಾತಿಗೆ ಸೇರಿದ್ದು. ಇವು ತಟಕ್ಕನೆ ಬಣ್ಣ ಬದಲಿಸುತ್ತವೆ. ಮರದ ಮೇಲಿದ್ದಾಗ ಮರದ ತೊಗಟೆಯ ಬಣ್ಣ! ಎಲೆಗಳ ನಡುವೆ ಇದ್ದಾಗ ಹಸಿರು ಬಣ್ಣ. ಆದ್ದರಿಂದ ಇವುಗಳ ಇರುವಿಕೆಯನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಗೋಸುಂಬೆಗಳಿಗೆ ಊಸರವಳಿಳಿಗಳೆಂದೂ ಕರೆಯುತ್ತಾರೆ. ಆದರೆ ಎಲ್ಲರೂ ತಿಳಿದಿರುವಂತೆ ಗೋಸುಂಬೆ ತನ್ನ ಬಣ್ಣವನ್ನು ತಾನಾಗಿಯೇ ತನ್ನ ಪರಿಸರಕ್ಕೆ ಹೊಂದುವಂತೆ ಖಂಡಿತ ಬದಲಿಸಿಕೊಳ್ಳಲಾರದು. ಅದಕ್ಕೆ ಇಷ್ಟವಿರಲಿ, ಇಲ್ಲದಿರಲಿ ಅದರ ಬಣ್ಣ ತಾನಾಗಿಯೇ ಬದಲಾಗಿಬಿಡುತ್ತದೆ. ಸಾಮಾನ್ಯವಾಗಿ ಗೋಸುಂಬೆಗಳ ಬಣ್ಣ ಹಸಿರು ಅಥವಾ ಕಂದು ಬಣ್ಣವಾಗಿರುತ್ತದೆ. ಆದರೆ ಇವುಗಳ ಸ್ವಭಾವ, ವಾತಾವರಣದ ಉಷ್ಣತೆ, ಬೆಳಕಿನ ತೀಕ್ಷ್ಣತೆಗನುಗುಣವಾಗಿ ಬಣ್ಣ ಆಗಾಗ ಬದಲಾಗುತ್ತದೆ. ಕೆಲವು ಸಲ ಮಾಸಿದ ಬಿಳಿಯಬಣ್ಣ, ಇನ್ನು ಕೆಲವು ಸಲ ಅಚ್ಚ ಹಳದಿ ಬಣ್ಣವಾಗಿ ಬದಲಾಗುತ್ತದೆ.
ಗೋಸುಂಬೆಯ ಚರ್ಮದಲ್ಲಿ ಹಲವಾರು ಪದರಗಳಿವೆ. ಒಂದೊಂದು ಪದರದಲ್ಲಿ ಒಂದೊಂದು ಬಣ್ಣವನ್ನು ಹೊರಹೊಮ್ಮಿಸುವ ಜೀವಕೋಶಗಳಿವೆ. ಎಲ್ಲಕ್ಕಿಂತ ಕೊನೆಯ ಪದರದಲ್ಲಿ ಕಪ್ಪು ಬಣ್ಣವನ್ನು ಹೊರಸೂಸುವ ಜೀವಕೋಶಗಳಿವೆ. ಈ ಕಪ್ಪು ಪದರದ ಜೀವಕೋಶಗಳು ಏರಿಳಿಯುತ್ತ ಬೇರೆ ಪದರಗಳ ಜೀವಕೋಶಗಳನ್ನು ಹಿಗ್ಗಿಸುವುದರಿಂದ ಅಥವಾ ಕುಗ್ಗಿಸುವುದರಿಂದ ಚರ್ಮದ ಬಣ್ಣ ಬದಲಾಗುತ್ತದೆ. ಹೀಗೆ ಚರ್ಮದ ಬಣ್ಣ ಬದಲಾಗುವ ಕ್ರಿಯೆಯನ್ನು ನಿಯಂತ್ರಿಸುವುದು ಗೋಸುಂಬೆಯ ನರಮಂಡಲ. ಈ ಊಸರವಳ್ಳಿಗೆ ಇನ್ನೊಂದು ವಿಶೇಷವಿದೆ. ಅದೆಂದರೆ ತನ್ನ ಬಲಿಯನ್ನು ಹಿಡಿಯುವುದಕ್ಕಾಗಿ ಅದು ತನ್ನ ದೇಹದ ಎರಡರಷ್ಟು ಉದ್ದದವರೆಗೂ ಹೊರಚಾಚಬಲ್ಲ ಅದರ ನಾಲಿಗೆ.
- ಅರಳಕುಪ್ಪೆ ಶ್ರೀನಿವಾಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್