ಬೈಟುಕಾಫಿ

ಅಪರಾಧ, ಪೊಲೀಸರು..!!!

ಈ ಶಬ್ದಗಳನ್ನು ಕೇಳಿದರೆ ಎಂತಹವರ ಎದೆಯೂ ಒಂದು ಕ್ಷಣ ಝಲ್ ಎನ್ನದೆ ಇರಲಾರದು. ಅಪರಾಧಿಗಳನ್ನು ಹೊರತುಪಡಿಸಿದರೆ ಅಪರಾಧಗಳಿಗೆ ಪ್ರತಿಯೊಬ್ಬರೂ ಬೆಚ್ಚಿಬೀಳಲೇಬೇಕು.
ಪೊಲೀಸರು ಠಾಣೆಗೆ ಕರೆದರೆ ಭಯವಾಗುತ್ತದೆ, ಹೋಗಲು ಹಿಂಜರಿಯುತ್ತಾರೆ. ಆದರೆ, ಕಾನೂನು ತಿಳಿದಿದ್ದರೆ ಭಯ ಇರದು. ಕಾನೂನಿನ ಜ್ಞಾನ ಪ್ರತಿಯೊಬ್ಬನಿಗೂ ಮುಖ್ಯ. ಅದು ಮಾನಸಿಕ ಧೈರ್ಯ ತುಂಬುತ್ತದೆ.
ಅಪರಾಧಗಳು, ಅಪಘಾತಗಳು ಯಾವಾಗ, ಎಲ್ಲಿ ನಡೆಯುತ್ತವೆ ಎಂಂಬುದನ್ನು ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ಕರ್ನಾಟಕ ಇಂತಹ ಅಪರಾಧಗಳಲ್ಲಿ ದಾಖಲೆ ಬರೆಯುವತ್ತ ಮುನ್ನುಗ್ಗುತ್ತಿದೆ. ಪ್ರತಿನಿತ್ಯ ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿರುತ್ತವೆ.
ಅಂತಹ ದುರಂತಗಳು ನಡೆದಾಗ ಕೆಲವರಿಗೆ ಏನು ಮಾಡಬೇಕೆಂಬ ಬಗ್ಗೆ ದಿಕ್ಕು ತೋಚುವುದಿಲ್ಲ. ಠಾಣೆ ಮೆಟ್ಟಿಲೇರಬೇಕೆಂಬ ಭಯ. ಪೊಲೀಸರಿಗೆ ಹಣ ಕೊಡಬೇಕೆಂಬ ಕಲ್ಪನೆ. ಕೋರ್ಟು ಕಚೇರಿ ಅಲೆಯಬೇಕು, ವಕೀಲರಿಗೆ ಹಣ ತೆರಬೇಕು. ಇನ್ನು ಕೆಲವರಿಗೆ ಏನು ಮಾಡಬೇಕೆಂಬ ಬಗ್ಗೆಯೇ ತಿಳಿದಿರುವುದಿಲ್ಲ. ಜನಸಾಮಾನ್ಯರಲ್ಲಿ ಇಂತಹ ಮೌಢ್ಯಗಳು ಇರುವುದರಿಂದ ಎಷ್ಟೋ ಪ್ರಕರಣಗಳು ದಾಖಲಾಗುವುದಿಲ್ಲ. ಕೆಲವು ಠಾಣೆ ಮೆಟ್ಟಿಲೇರಿ ಇತ್ಯರ್ಥವಾಗುತ್ತವೆ. ಕೆಲವು ವರ್ಷಗಟ್ಟಲೆ ಇತ್ಯರ್ಥವಾಗುವುದಿಲ್ಲ. ನೊಂದವರಿಗೆ ಪರಿಹಾರವೂ ಸಿಗುವುದಿಲ್ಲ.
ಆದ್ದರಿಂದ ಇಂತಹ ಘಟನೆಗಳು ನಡೆದಾಗ ಸಾರ್ವಜನಿಕರು ಏನು ಮಾಡಬೇಕು. ಠಾಣೆಗೆ ದೂರು ನೀಡುವುದು ಹೇಗೆ? ಯಾವಾಗ? ಇದರಿಂದಾಗುವ ಪ್ರಯೋಜನವೇನು? ಸಾರ್ವಜನಿಕರ ಪಾತ್ರವೇನು? ಪ್ರತಿನಿತ್ಯ ನಡೆಯವ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ಪಾತ್ರವೇನು? ದೂರು ನೀಡುವುದು ಎಂದರೆ ಏನು? ಎಲ್ಲಿ ದೂರು ನೀಡಬೇಕು? ಅಪರಾಧದಲ್ಲಿ ಎಷ್ಟು ವಿಧಗಳಿವೆ? ಎಫ್‌ಐಆರ್ ಎಂದರೇನು? ಎಂಬಿತ್ಯಾದಿಗಳ ಬಗ್ಗೆ ಕಾನೂನು ಅರಿವು ಮೂಡಿಸುವ ಸಣ್ಣ ಪ್ರಯತ್ನ ಇಲ್ಲಿದೆ.

-  ಶಾಂತಾ ತಮ್ಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು