ಗುಲಾಬಿ ರೋಸೇಸಿ ವಂಶಕ್ಕೆ ಸೇರಿದ್ದು. ಹೆಚ್ಚಿನ ಜಾತಿಯ ಗುಲಾಬಿಗಳು ಏಷ್ಯಾ ಮೂಲದವು.
ಹೂವುಗಳ ರಾಣಿ ಗುಲಾಬಿ. ಇದರ ಅತ್ತರನ್ನು ಶತಮಾನ ಗಳಿಂದಲೂ ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತಿದೆ.
ಗುಲಾಬಿಯಿಂದ ತಯಾರಿಸುವ ಪನ್ನೀರನ್ನು ಆಹಾರ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಪುಷ್ಪೋದ್ಯಮದಲ್ಲಿ ಗುಲಾಬಿಯದು ದೊಡ್ಡ ಪಾಲು. ಪ್ರೇಮಿಗಳ ದಿನದಂದು ಅತಿ ಹೆಚ್ಚು ಮಾರಾಟವಾಗುವ ಹೂವು ಗುಲಾಬಿ!