ಚುನಾವಣೆಗಳಲ್ಲಿ ರಾಜಕಾರಣಿಗಳು ತೊಡೆತಟ್ಟಿ ನಿಂತರೂ, ಮತದಾರನ ಮುಂದೆ ಮಂಡಿಯೂರಿ ಮತಭಿಕ್ಷೆ ಬೇಡಲೇಬೇಕು!
- ನೇತ್ರಾವತಿ ಪುಟ್ಟರಾಜು, ಪಾಂಡವಪುರ
ದೇಶವನ್ನು ನುಂಗುವವರನ್ನು ಸಾರ್ವಜನಿಕರೇ ಆಯ್ಕೆ ಮಾಡುವುದು..!
..
ಬೆಳ್ಳಗಿರುವುದೆಲ್ಲ ಹಾಲಲ್ಲ,
ಬಿಳಿ ವಸ್ತ್ರಧಾರಿಗಳೆಲ್ಲ ಅಪ್ಸರೆಯರಲ್ಲ
ಟೋಪಿಗೆ ಮಾತ್ರ ಗಾಂಧಿಯ ಹೆಸರು
ಅದರ ಕೆಳಗಿರುವುದೇ ರಾಕ್ಷಸನ ಉಸಿರು!
- ಅಭಿಜಿತ್ ಆರ್. ಶಾಸ್ತ್ರಿ, ಬೆಂಗಳೂರು
ನಮಗೆ ಚೇಂಜ್ ಬೇಕಾದಾಗ ಚಹಾ ಕುಡೀತೀವಿ, ರಾಜಕಾರಣಿಗಳಿಗೆ ಚೇಂಜ್ ಬೇಕಾದಾಗ ಚುನಾವಣೆ ಮಾಡ್ತಾರೆ!
- ಶಿವರಾಜ್ ಎಂ.ಎಸ್., ಬೆಂಗಳೂರು