ಬೈಟುಕಾಫಿ

ಪೇಜ್ ವರ್ಲ್ಡ್

ಶಾಲೆಯ ಪುಸ್ತಕವಲ್ಲದೆ ಇತರೆ ಪುಸ್ತಕ, ಪತ್ರಿಕೆ, ಪುರವಣಿಗಳ ಪುಟದತ್ತ ಕಣ್ಣು ಹಾಯಿಸಲೂ ಇಚ್ಛಿಸದ ಮಕ್ಕಳನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಸದಭಿರುಚಿಯ ಓದಿನತ್ತ ಎಳೆದು ತರುವ ಕಿರು ಪ್ರಯತ್ನ ಮಾಡಲು ಹೊರಟ ಶಿಕ್ಷಿತ ಗೃಹಿಣಿಯರಿಬ್ಬರ ಕಲ್ಪನೆಯ ಕೂಸು ಪೇಜ್‌ವರ್ಲ್ಡ್ ಇಂಡಿಯಾ ಎನ್ನುವ ಪುಸ್ತಕ ಮಳಿಗೆ.
ಛಾಯಾ ಕುಂಬ್ಳೆ ಮತ್ತು ಸುಧಾ ಕಾಕಲ್, ಇಬ್ಬರೂ ಚಿಕ್ಕಂದಿನಿಂದಲೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದವರು. ಅಮೆರಿಕದಲ್ಲಿ ಕೆಲ ಕಾಲ ನೆಲೆಸಿದ್ದರು. ಓದುವ ಚಾಳಿಯನ್ನು ಬಿಟ್ಟಿರಲಿಲ್ಲ. ಊರಿಗೆ ಹಿಂತಿರುಗಿದ ಬಳಿಕ, ನಮ್ಮೂರಿನಲ್ಲೂ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕೆಂಬ ಸದಿಚ್ಛೆ ಮನದಲ್ಲಿ ಮೂಡಿತು. ಬಾಲಲೋಕದ ಅಭಿರುಚಿಗೆ ತಕ್ಕಂಥ ಉಪಯುಕ್ತ ಪುಸ್ತಕಗಳನ್ನು ಕಲೆಹಾಕಿ 'ಪೇಜ್‌ವರ್ಲ್ಡ್ ಇಂಡಿಯಾ- ನೆರೆಹೊರೆಯ ಜ್ಞಾನಕೇಂದ್ರ' ಎನ್ನುವ ಪುಸ್ತಕ ಮಳಿಗೆಯೊಂದನ್ನು ಜೆ.ಪಿ.ನಗರದ 7ನೇ ಹಂತದಲ್ಲಿರುವ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯಲ್ಲಿ ಆರಂಭಿಸಿಯೇಬಿಟ್ಟರು.
ಏಪ್ರಿಲ್ ತಿಂಗಳಲ್ಲಿ ತೆರೆಯಲಾದ ಈ ಪುಟಲೋಕಕ್ಕೆ ಕಾವ್ಯ, ನಾಟಕ, ಬಾಲ ಸಾಹಿತ್ಯ, ಸಾನೆಟ್ ಇತ್ಯಾದಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿರುವ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಂದ ಶುಭಾರಂಭ ದೊರೆತಿದೆ. ತಂದೆ-ತಾಯಿಯರಲ್ಲೂ ಸಾಹಿತ್ಯಾಭಿರುಚಿ ಮರುಕಳಿಸಲೆಂದು ತಿಂಗಳಿನ ಒಂದು ಭಾನುವಾರ ಸಂಜೆ ಮಳಿಗೆಯ ಪರಿಸರದಲ್ಲಿಯೇ ಖ್ಯಾತ ಸಾಹಿತಿ- ಕಲಾವಿದರನ್ನು ಕರೆಸಿ ಸಾಹಿತ್ಯ ಸಂಜೆ ಏರ್ಪಡಿಸಲಾಗುತ್ತಿದೆ. ಮಕ್ಕಳಿಗಾಗಿ ಕತೆ ಹೇಳುವ ಕಾರ್ಯಕ್ರಮವನ್ನು ತಿಂಗಳ ಕಾರ್ಯಕ್ರಮದಲ್ಲಿ ವಾದಿರಾಜ ಭಟ್‌ರಿಂದ ಈಗಾಗಲೇ ಮಾಡಿಸಲಾಗಿದೆ.  ಇಂಗ್ಲಿಷ್ ಕಾದಂಬರಿಗಾರ್ತಿ ಶಶಿ ದೇಶಪಾಂಡೆ, ಕವಿ ಜಯಂತ್ ಕಾಯ್ಕಿಣಿ ಇವರ ಜೊತೆ ನಡೆಸಿದ ಸಾಹಿತ್ಯ ಸಂಜೆ, ಸಂವಾದಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎಲ್ಲ ಉತ್ತಮ ಕೃತಿಗಳು ಇಲ್ಲಿ ಸಿಗುತ್ತವೆ. ಜತೆಗೆ, ಕೃತಿಕಾರರೂ ಇಲ್ಲಿ ಬರುತ್ತಾರೆ.
ಕೆಲವು ಪುಸ್ತಕದಂಗಡಿಗಳು ಮುಚ್ಚುತ್ತಿವೆ. ಆದರೆ, ಓದುವ ಹವ್ಯಾಸಕ್ಕೆ ಸಾವಿಲ್ಲ ಎಂಬಂತೆ ಇಂಥ ಮಳಿಗೆಗಳು ಹುಟ್ಟಿಕೊಳ್ಳುತ್ತವೆ. ಅಕ್ಷರಗಳ 'ಮಾತೃಭಾವ'ವನ್ನೂ ಅನುಭವಿಸಬಹುದು ಎಂಬುದು ಇಲ್ಲಿನ ಬೋನಸ್.

-ಬಿ.ಎಸ್.ವೆಂಕಟಾಚಲ ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!