ಬೈಟುಕಾಫಿ

ನಿಂದನೆ ನಿಲ್ಲಿಸಿ,ವಂದನೆ ಸಲ್ಲಿಸಿ

ಇಬ್ಬರು ನಾವಿಕರು ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಒಂದು ನಿರ್ಜನ ದ್ವೀಪದಲ್ಲಿ ಬಿದ್ದರು. ಹತ್ತಿರದಲ್ಲಿ ಸಿಕ್ಕಿದ ಎಲೆ, ಕೊಂಬೆ, ನಾರುಗಳನ್ನು ಉಪಯೋಗಿಸಿ ಸಣ್ಣ ಗುಡಿಸಲನ್ನು ಕಟ್ಟಿಕೊಂಡರು. ಇಬ್ಬರು ನಾವಿಕರ ಪೈಕಿ ಒಬ್ಬ ತನ್ನ ದುರದೃಷ್ಟಕ್ಕೆ ದೇವರೇ ಕಾರಣ ಅಂತ ಬಯ್ಯುತ್ತಿದ್ದ. ಇನ್ನೊಬ್ಬ ತನ್ನ ಜೀವ ಉಳಿದಿದ್ದಕ್ಕೆ ಕಾರಣ ದೇವರೇ ಅಂತ ದೇವರನ್ನು ವಂದಿಸುತ್ತಿದ್ದ.
'ಸುಮ್ನೆ ದೇವರನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ. ಗಟ್ಟಿಯಾದ ನೆಲದ ಮೇಲಿದ್ದೀವಿ. ಓಡಾಡಲು ಕಾಲುಗಳಿವೆ. ಕೆಲಸ ಮಾಡಲು ಕೈಗಳಿವೆ. ನೋಡುವುದಕ್ಕೆ ಕಣ್ಣುಗಳಿವೆ. ಇವುಗಳಿಗೆ ನಾವು ದೇವರಿಗೆ ಕೃತಜ್ಞರಾಗಿರಬೇಕು' ಎಂದು ಹೇಳುತ್ತಿದ್ದ. ಒಂದು ದಿನ ಇನ್ನೊಂದು ಆಘಾತ ಕಾದಿತ್ತು. ಅವರ  ಗುಡಿಸಲು ಸುಟ್ಟು ಬೂದಿಯಾಗಿತ್ತು. ಮೊದಲನೆ ನಾವಿಕನ ಸಿಟ್ಟು ಮುಗಿಲುಮುಟ್ಟಿತು. ದೇವರನ್ನು ಮನಸೋಇಚ್ಛೆ ಬಯ್ಯಲಾರಂಭಿಸಿದ. ಆದರೆ ಎರಡನೇ ನಾವಿಕ, 'ಗೆಳೆಯ, ಇದರಿಂದ ನಮಗೆ ಪ್ರಯೋಜನ ಖಂಡಿತ ಆಗುತ್ತೆ. ಸಹನೆಯಿಂದ ನೋಡ್ತಾ ಇರು. ದೇವರನ್ನು ಪ್ರಾರ್ಥಿಸು, ವಂದಿಸು' ಎಂದ. 'ನೀನು ಮತ್ತು ನಿನ್ನ ದೇವರನ್ನು ಕಂಡರೆ ನನಗಾಗೊಲ್ಲ, ಹೋಗು' ಅಂತ ಸಿಡುಕಿದ.
ಬೆಳಗಿನ ಜಾವ, ನದಿ ತೀರದಲ್ಲಿ ಸದ್ದು ಕೇಳಿ ಇಬ್ಬರೂ ನೋಡಿದಾಗ  ಒಂದು ಹಡಗು ಕಾಣಿಸಿತು. ಅದರ ಮುಖ್ಯಸ್ಥ ಇಳಿದು ಬಂದು, 'ನಿನ್ನೆ ಸಂಜೆ ಇಲ್ಲಿಂದ ಹೊಗೆ ಕಾಣಿಸಿತು. ಯಾರೋ ಸಹಾಯಕ್ಕಾಗಿ ಕರೆಯುತ್ತಿದ್ದಾರೆಂದು ತಿಳಿದು ಬಂದೆವು' ಎಂದ. ಮೊದಲನೆ ನಾವಿಕ ಆಕಾಶದೆಡೆ ಮುಖ ಮಾಡಿ, 'ದೇವರೇ ನಮಗೆ ಸಹಾಯ ಮಾಡಿದ, ನಿನ್ನನ್ನು ನಿಂದಿಸಿದ್ದು ತಪ್ಪು' ಅಂದ.
ನೀತಿ: ನಾವು ಪ್ರತಿಯೊಂದು ಘಟನೆಯನ್ನೂ ಆಶಾವಾದದಿಂದ ನೋಡುವುದನ್ನು ಕಲಿಯಬೇಕು.

-ಸಂಪಟೂರು ವಿಶ್ವನಾಥ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ