ಸಿಟಿಯಲ್ಲೇ ಹುಟ್ಟಿ ಬೆಳೆದವಳು. ಹಳ್ಳಿ ಹುಡುಗನನ್ನು ಇಷ್ಟಪಟ್ಚು ಮದುವೆಯಾಗಿದ್ದೇನೆ. ಅಲ್ಲಿಯೇ ನೆಲೆಸಿದ್ದೇನೆ.ಅದಕ್ಕಾಗಿ ಉದ್ಯೋಗವನ್ನೂ ತೊರೆದಿದ್ದೇನೆ. ಆದರೆ ಅತ್ತೆ, ಮಾವ ಹೊಲ-ಗದ್ದೆಗಳಲ್ಲಿ ಕೆಲಸ ಮಾಡಲು ಕಳಿಸುತ್ತಾರೆ. ಮಾಡಿದ್ದು ಸರಿಯಾಗಿಲ್ಲ ಎಂದು ಮೂದಲಿಸುತ್ತಾರೆ.
- ಗೀತಾ ಎಸ್., ಶಿಗ್ಗಾಂವ ತಾಲ್ಲೂಕು
ಹಳ್ಳಿ ವರನನ್ನು ವರಿಸಿ, ಅಲ್ಲಿ ನೆಲೆಸಿದ ನಿಮ್ಮ ತೀರ್ಮಾನ ಮೆಚ್ಚುತ್ತೇನೆ. ಬಹುಶಃ ನಿಮ್ಮ ಅತ್ತೆ-ಮಾವ ನಿಮ್ಮನ್ನು ಹಳ್ಳಿ ಹುಡುಗಿ ಎಂದೇ ಭಾವಿಸಿಕೊಂಡಿರಲಿಕ್ಕೆ ಸಾಕು. ಅದಕ್ಕೇ ಹೊಲದ ಕೆಲಸ ಮಾಡಿಸುತ್ತಿದ್ದಾರೆ. 'ನನಗೆ ಇದೆಲ್ಲ ಹೊಸತು. ಹುಟ್ಟಿದಾರಭ್ಯ ಇದಾವುದನ್ನೂ ಮಾಡಿದಳಲ್ಲ. ಸ್ವಲ್ಪ ಕಾಲಾವಕಾಶ ಕೊಡಿ, ಒಗ್ಗಿಕೊಳ್ಳುತ್ತೇನೆ' ಎಂದು ತಾಳ್ಮೆಯಿಂದ ಹೇಳಿ ನೋಡಿ. ಅವರೊಂದಿಗೆ ಆದಷ್ಟು ಪ್ರೀತಿಯಿಂದ ವರ್ತಿಸಿ. ಅವರಿಗೂ ನಿಮ್ಮನ್ನು ಒಪ್ಪಿಕೊಳ್ಳಲು ಕೊಂಚ ಸಮಯ ಬೇಕಲ್ಲ? ದುಡುಕಿನಿಂದ ಯಾವುದೇ ನಿರ್ಧಾರ ಕೈಗೊಳ್ಳಬೇಡಿ.
-ಡಾ. ಸ್ಯಾಟಲೈಟ್
anekaby2@gmail.com