ಗರಿಕೆ (ಮಾಹಿತಿ.ಕಾಂ)
12ರಿಂದ 30 ಸೆಂ.ಮೀ. ಬೆಳೆಯುವ, ಹೆಚ್ಚು ಪೌಷ್ಟಿಕವಾದ ಸಾರ್ವಕಾಲಿಕ ಸಸ್ಯ ಈ ಗರಿಕೆ.
ಔಷಧೀಯ ಗುಣಗಳನ್ನು ಹೊಂದಿರುವ ಗರಿಕೆ, ಮಳೆಯಿಲ್ಲದೆ ಎಷ್ಟೋ ವರ್ಷಗಳ ಕಾಲ ಕಡ್ಡಿಯಂತಾಗಿದ್ದರೂ ಹನಿ ಬಿದ್ದ ತಕ್ಷಣ ಚಿಗುರುತ್ತದೆ.
ಅಮೆರಿಕದಲ್ಲಿ ಇತ್ತೀಚೆಗೆ ಗರಿಕೆಯಿಂದ ಅನೀಮಿಯಾಕ್ಕೆ ಇಂಜೆಕ್ಷನ್ ಕಂಡುಹಿಡಿಯಲಾಗಿದೆ.
ಪಾಂಡವರು ವಾರಣಾವತ ಪ್ರವೇಶಿಸಿದಾಗ ಪುರಜನರು ಎದುರು ಗೊಳ್ಳಲು ತಂದಿದ್ದ ಮಂಗಳ ದ್ರವ್ಯಗಳಲ್ಲಿ ಗರಿಕೆಯೂ ಒಂದು.