ವ್ಲಾಡಿಮರ್ ಲೆನಿನ್ ಜನುಮ ದಿನ
- 1870.
- ರಷ್ಯದ ಕಮ್ಯೂನಿಸ್ಟ್ ಹೋರಾಟಗಾರ. ರಾಜಕೀಯ ಸಿದ್ಧಾಂತ ಪ್ರತಿಪಾದಕ.
- ಮಾರ್ಕ್ಸ್ವಾದಿಯಾಗಿದ್ದರೂ ಅವರು ಮಂಡಿಸಿದ ಸಿದ್ಧಾಂತಗಳು 'ಲೆನಿನ್ ವಾದ' ಎಂದೇ ಖ್ಯಾತ. ಆರ್ಥಿಕ ನೀತಿಗೆ ಹೊಸ ರೂಪ ಕೊಟ್ಟವರು.
- 1922ರಿಂದ 24ವರೆಗೆ ಸೋವಿಯತ್ ಒಕ್ಕೂಟದ ನಾಯಕತ್ವ.
ಪುಣ್ಯತಿಥಿ
ಹಿತೇಶ್ವರ್ ಸೈಕಿಯಾ
- 1934-1996.
- ಕಾಂಗ್ರೆಸ್ನಿಂದ ಎರಡು ಅವಧಿಗೆ (1983-85, 1991-96) ಅಸ್ಸಾಂ ಮುಖ್ಯಮಂತ್ರಿ.
- ಅಸ್ಸಾಂನಲ್ಲಿ ಶೈಕ್ಷಣಿಕ ಪ್ರಗತಿಗೆ ಮಹತ್ತರ ಕೊಡುಗೆ ನೀಡಿದವರು.
- ಉಲ್ಫಾ ಉಗ್ರರು ಭಾರಿ ಸಂಖ್ಯೆಯಲ್ಲಿ ಶರಣಾದದ್ದು ಅವರ ಅವಧಿಯಲ್ಲಿ.
ದಿನಚರಿತೆ
- 1906- ಅಥೆನ್ಸ್ನಲ್ಲಿ ಸಮ್ಮರ್ ಒಲಿಂಪಿಕ್ ಆರಂಭ.
- 1970- ಮೊದಲ 'ಭೂ ದಿನ' ಆಚರಣೆ.
- 1977- ದೂರಸಂಪರ್ಕ ಕ್ಷೇತ್ರದಲ್ಲಿ ಮೊದಲ ಸಲ ಆಪ್ಟಿಕಲ್ ಫೈಬರ್ ಕೇಬಲ್ ಬಳಕೆ.
- 1998- ಅಮೆರಿಕದ ವಾಲ್ಟ್ ಡಿಸ್ನಿಯಲ್ಲಿ ಡಿಸ್ನಿ'ಸ್ ಆ್ಯನಿಮಲ್ ಕಿಂಗ್ಡಮ್ ಆರಂಭ.
ಟ್ವೀಟ್ಸ್ಟಾಲ್
ಸಂಪತ್ತು ಎಷ್ಟಾದರೂ ಇರಲಿ. ಆದರೆ, 'ಹೃದಯ'ದಲ್ಲಿ ಬಡತನ ಹೊಂದಿರುತ್ತಾರಲ್ಲ, ಅವರೇ ನಿಜವಾದ ಬಡವರು.
-ಜೆನ್ನಿ ರೇ