ಅಪ್ಪ ಅಮ್ಮ ನಮ್ಮ ದೈವ
ಸ್ವರ ಸನ್ನಿಧಿ ಟ್ರಸ್ಟ್ ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 23) ಖ್ಯಾತ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಅವರಿಂದ 'ಅಪ್ಪ ಅಮ್ಮ ನಮ್ಮ ದೈವ' ಎಂಬ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದೆ.
ಮುಖ್ಯ ಅತಿಥಿಗಳಾಗಿ ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಹಾಗೂ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸ್ಥೆಯ ವೆಬ್ಸೈಟನ್ನು ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಸಿನಿಮಾ ನಟರಾದ ಯಶ್, ಪ್ರೇಮ್ ಹಾಗೂ ಶ್ರೀನಗರ ಕಿಟ್ಟಿ ಆಗಮಿಸಲಿದ್ದಾರೆ.
ದಿನಾಂಕ: 23.04.2013.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು.
ಸಮಯ: ಸಂಜೆ 4.30
ವಿವರಗಳಿಗೆ- 9620046844 (ಮಂಜುನಾಥ ಟಿ.ಎ.)